ETV Bharat / bharat

ತ್ರಿಪುರಾ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ!

author img

By

Published : Mar 30, 2023, 3:14 PM IST

ತ್ರಿಪುರಾ ವಿಧಾನಸಭೆದಲ್ಲಿ ಬಿಜೆಪಿ ಶಾಸಕ ಜದಾಬ್​ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದೆ.

tripura-bjp-mla-caught-while-watching-porn-inside-assembly
ತ್ರಿಪುರಾ ವಿಧಾನಸಭೆದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ಅಗರ್ತಲಾ (ತ್ರಿಪುರಾ): ವಿಧಾನಸಭೆಯೊಳಗೆ ತ್ರಿಪುರಾ ಬಿಜೆಪಿ ಶಾಸಕರೊಬ್ಬರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಅಧಿವೇಶನ ನಡೆಯುತ್ತಿರುವಾಗ ಸದನದಲ್ಲಿ ಶಾಸಕ ಜದಾಬ್​ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವುದು ಕಂಡುಬಂದಿದೆ.

ಈಗ ವೈರಲ್ ವಿಡಿಯೋದಲ್ಲಿ ಶಾಸಕರು ತಮ್ಮ ಟ್ಯಾಬ್​​ನಲ್ಲಿ ಅಶ್ಲೀಲ ವಿಡಿಯೋ ಪ್ಲೇ ಆಗುತ್ತಿರುವುದು ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಚುನಾಯಿತ ಪ್ರತಿನಿಧಿಯೊಬ್ಬರು ಇಂತಹ ಕೆಲಸದಲ್ಲಿ ತೊಡಗಿರುವುದು ನಾಚಿಕೆಗೇಡು ಎಂದು ನೆಟಿಜನ್‌ಗಳು ಆಕ್ರೋಶ ಹೊರಹಾಕಿದ್ದಾರೆ.

ಸಿಪಿಐಎಂ ನಾಯಕರಾಗಿದ್ದ ಜದಾಬ್​ಲಾಲ್​ ನಾಥ್ 2018ಕ್ಕಿಂತ ಮೊದಲು ಬಿಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್​ ಪಡೆದು ಸಿಪಿಐಎಂ ಅಭ್ಯರ್ಥಿ ಮತ್ತು ಮಾಜಿ ಸ್ಪೀಕರ್ ರಾಮೇಂದ್ರ ಚಂದ್ರ ದೇಬನಾಥ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಈ ಚುನಾವಣೆಯ ಸ್ಪರ್ಧೆಯಲ್ಲಿ ಅವರು ಸೋತಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಜದಾಬ್​ಲಾಲ್​ ನಾಥ್​ ಮತ್ತೊಮ್ಮೆ ಸ್ಪರ್ಧಿಸಿದ್ದರು. ತ್ರಿಪುರಾದ ಉತ್ತರ ಜಿಲ್ಲೆಯ ಬಾಗ್‌ಬಾಶಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್​​ ಬೂತ್​ ಸಮ್ಮೇಳನದಲ್ಲಿ ಅಶ್ಲೀಲ ನೃತ್ಯ : ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.