ETV Bharat / bharat

ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ: ಹೇಗಿದೆ ಚಿಕಿತ್ಸೆ ಕಾರ್ಯ?

author img

By

Published : Mar 28, 2022, 4:08 PM IST

Updated : Mar 28, 2022, 4:51 PM IST

ದೆಹಲಿ ಹೈಕೋರ್ಟ್‌ನ ಆದೇಶದ ಮೇರೆಗೆ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಟ್ರೀ ಆ್ಯಂಬುಲೆನ್ಸ್ ಅನ್ನು ಪರಿಚಯಿಸಿದೆ. ಅನಾರೋಗ್ಯ ಮತ್ತು ದುರ್ಬಲ ಮರಗಳನ್ನು ಈ ಮೂಲಕ ಉಪಚರಿಸಲಾಗುತ್ತದೆ.

ಮನುಷ್ಯರಿಗೆ ಇದ್ದ ಆಂಬ್ಯುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ:
ಮನುಷ್ಯರಿಗೆ ಇದ್ದ ಆಂಬ್ಯುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ:

ನವದೆಹಲಿ: ಮನುಷ್ಯರಿಗೆ ಏನಾದರೂ ತೊಂದರೆ ಉಂಟಾದರೆ ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಇತ್ತೀಚಿಗೆ ಪ್ರಾಣಿ ಪಕ್ಷಿಗಳಿಗೂ ಸಹ ಪರಿಸರ ಪ್ರೇಮಿಗಳು ಈ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ದೆಹಲಿ ಮಹಾನಗರ ಪಾಲಿಕೆ ಟ್ರೀ ಆ್ಯಂಬುಲೆನ್ಸ್​ ಅನ್ನು ಪರಿಚಯಿಸಿದೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ವಿಭಿನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ಅನಾರೋಗ್ಯ ಮತ್ತು ದುರ್ಬಲ ಮರಗಳ ಚಿಕಿತ್ಸೆಗಾಗಿ ಹೊಸ ಉಪಕ್ರಮವನ್ನು ತೆಗೆದುಕೊಂಡಿದೆ. ಮರಗಳಿಗೆ ಚಿಕಿತ್ಸೆ ನೀಡಲು ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ.

ಪೂರ್ವ ದೆಹಲಿ ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ರಾಘವೇಂದ್ರ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ದೆಹಲಿ ಹೈಕೋರ್ಟ್‌ನ ಆದೇಶದ ಮೇರೆಗೆ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಟ್ರೀ ಆ್ಯಂಬುಲೆನ್ಸ್ ಅನ್ನು ಪರಿಚಯಿಸಿದೆ. ಅನಾರೋಗ್ಯ ಮತ್ತು ದುರ್ಬಲ ಮರಗಳನ್ನು ಈ ಮೂಲಕ ಉಪಚರಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ಮರಕ್ಕೆ ರೋಗ ತಗುಲಿರುವ ಬಗ್ಗೆ ಮಾಹಿತಿ ಬಂದರೆ ಈ ಆ್ಯಂಬುಲೆನ್ಸ್‌ನಲ್ಲಿ ಹೋಗಿ ತಪಾಸಣೆ ನಡೆಸಿ ನಂತರ ರೋಗಕ್ಕೆ ಅನುಗುಣವಾಗಿ ಮರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.

ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ

ಚಿಕಿತ್ಸೆ ಹೇಗೆ : ಪೂರ್ವ ದೆಹಲಿ ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯ ನೌಕರರಿಗೆ ಈ ಸಂಬಂಧ ವಿಶೇಷ ತರಬೇತಿ ನೀಡಲಾಗಿದೆ. ಮರದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಟೊಳ್ಳಾದ ಭಾಗವನ್ನು ಮೊದಲು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ನಂತರ ಸತ್ತ ಜೀವಕೋಶಗಳನ್ನು ತೆಗೆಯಲಾಗುತ್ತದೆ. ಇದಾದ ಬಳಿಕ ಅಲ್ಲಿಗೆ ಕೀಟನಾಶಕವನ್ನು ಹಾಕುವ ಮೂಲಕ ಅಲ್ಲಿನ ಕ್ರಿಮಿಯನ್ನು ಕೊಲ್ಲಲಾಗುತ್ತದೆ. ಇದೆಲ್ಲಾ ಆದ ಮೇಲೆ ಟೊಳ್ಳಾದ ಅಥವಾ ಹಾನಿಗೊಳಗಾದ ಭಾಗದಲ್ಲಿ ಕಾಕ್ ಮೆಶ್ ಅನ್ನು ಇರಿಸಲಾಗುತ್ತದೆ ಮತ್ತು ಥರ್ಮಾಕೋಲ್ ಅನ್ನು ಅದರಲ್ಲಿ ತುಂಬಿಸಲಾಗುತ್ತದೆ. ಥರ್ಮಾಕೋಲ್ ತುಂಬಿದ ನಂತರ ಅದರಲ್ಲಿ ಪಿಒಪಿ ಲೇಪನ ಮಾಡಿ ಅದರ ಮೇಲೆ ಗಾಳಿ ನುಸುಳದಂತೆ ಬಿಳಿ ಸಿಮೆಂಟ್ ಹಾಕಲಾಗುತ್ತದೆ.

ಈ ಶಸ್ತ್ರಕ್ರಿಯೆಯ ನಂತರ ಒಳಗೆ ಮರದ ಕೋಶ ರಚನೆಯಾಗುತ್ತದೆ ಮತ್ತು ಟೊಳ್ಳಾದ ಭಾಗವು ತುಂಬುತ್ತದೆ ಮತ್ತು ಆ ಭಾಗ ಮತ್ತೊಮ್ಮೆ ಪುನರುಜ್ಜೀವನಗೊಳ್ಳುತ್ತದೆ ಎಂದು ರಾಘವೇಂದ್ರ ಸಿಂಗ್ ಹೇಳಿದ್ದಾರೆ. ಸ್ಥಳೀಯ ನಾಗರಿಕರು ದುರ್ಬಲ ಮರಗಳ ಚಿಕಿತ್ಸೆಗಾಗಿ ಪೂರ್ವ ನಿಗಮದ ಸಹಾಯವಾಣಿ ಸಂಖ್ಯೆ 155303 ಅನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

Last Updated : Mar 28, 2022, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.