ETV Bharat / bharat

ಟೂಲ್​​ ಕಿಟ್​ ಪ್ರಕರಣ: ಛತ್ತೀಸಗಢ ಪೊಲೀಸರಿಂದ ಸಂಬಿತ್ ಪಾತ್ರಾಗೆ ನೋಟಿಸ್​

author img

By

Published : May 23, 2021, 9:54 PM IST

ಕಾಂಗ್ರೆಸ್​ ಲೆಟರ್​ ಹೆಡ್​ ನಕಲಿ ಮಾಡಿ ಟೂಲ್​ ಕಿಟ್​​ ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಛತ್ತೀಸಗಢದಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್​ ಸಿಂಗ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯಿಂದ ನೋಟಿಸ್​ ಜಾರಿಯಾಗಿದೆ.

Sambit Patra
Sambit Patra

ರಾಯ್ಪುರ್​(ಛತ್ತೀಸ್​​ಗಢ): ಟೂಲ್​ ಕಿಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾಗೆ ಛತ್ತೀಸಗಢ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿವಿಲ್​ ಲೈನ್ಸ್​​ ಪೊಲೀಸ್​ ಠಾಣೆಯಲ್ಲಿ ಮೇ 19ರಂದು ಇವರ ವಿರುದ್ಧ ದೂರು ದಾಖಲಾಗಿದೆ.

ಕಾಂಗ್ರೆಸ್​​ನ ನಕಲಿ ಲೆಟರ್​ಹೆಡ್​ ಬಳಸಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್​​ ಸಿಂಗ್​​, ವಕ್ತಾರ ಸಂಬಿತ್​ ಪಾತ್ರಾ ಮತ್ತು ಇತರರು ನಕಲಿ ಟೂಲ್​ಕಿಟ್ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ದೂರಿನ ಮೇರೆಗೆ ಸಿವಿಲ್​ ಲೈನ್ಸ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಂಡರೆ 'ಬಿಯರ್ ಫ್ರೀ'​​... ಆಫರ್ ಎಲ್ಲಿ ಗೊತ್ತಾ?

ಕಳೆದ ಕೆಲ ದಿನಗಳಿಂದ ಟೂಲ್​ಕಿಟ್​ ಬಿಜೆಪಿ-ಕಾಂಗ್ರೆಸ್​ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ಆರೋಪ-ಪ್ರತ್ಯಾರೋಪ ಸರ್ವೆ ಸಾಮಾನ್ಯವಾಗಿದೆ. ರಾಯ್ಪುರ್​ ಪೊಲೀಸರು ತಿಳಿಸಿರುವ ಪ್ರಕಾರ ಸಂಬಿತ್ ಪಾತ್ರಾ ವಿಡಿಯೋ ಕಾನ್ಫ್​ರೆನ್ಸ್ ಮೂಲಕ ಭಾನುವಾರ ಸಂಜೆ 4 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಒಂದು ವೇಳೆ ಹಾಜರಾಗದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ರಮಣ್​​ ಸಿಂಗ್​ಗೂ ನೋಟಿಸ್ ಜಾರಿಯಾಗಿದ್ದು, ಸೋಮವಾರ ಮಧ್ಯಾಹ್ನ 12:30ರೊಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.