ETV Bharat / bharat

ಕಾರುಗಳಲ್ಲಿ 3 ಕೋಟಿಗೂ ಅಧಿಕ ನಗದು ಪತ್ತೆ: ನಾಲ್ವರ ಬಂಧನ

author img

By

Published : Oct 12, 2022, 7:24 PM IST

ಕಾರ್ಯಾಚರಣೆ ನಡೆಸಿ ಸಿರೋಹಿ ಪೊಲೀಸರು ಬುಧವಾರ ಎರಡು ಕಾರುಗಳಲ್ಲಿದ್ದ, 3 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕಾರುಗಳಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

CASH RECOVERED FROM TWO CARS
ಕಾರುಗಳಲ್ಲಿ ಹಣ ಪತ್ತೆ

ಸಿರೋಹಿ (ರಾಜಸ್ಥಾನ): ಇಲ್ಲಿನ ಅಬು ರೋಡ್​ ರಿಕೋ ಪೊಲೀಸ್​​ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಎರಡು ಕಾರುಗಳಲಿದ್ದ ಸುಮಾರು 3 ಕೋಟಿಗೂ ಅಧಿಕ ನಗದನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ. ನೋಟುಗಳ ಎಣಿಕೆ ನಡೆಯುತ್ತಿದ್ದು, ಇದುವರೆಗೂ 3 ಕೋಟಿಯಷ್ಟು ಮಾತ್ರವೇ ಎಣಿಸಲಾಗಿದ್ದು, ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಂಪೂರ್ಣ ಎಣಿಕೆ ಬಳಿಕವೇ ಪತ್ತೆಯಾದ ಒಟ್ಟು ಹಣವೆಷ್ಟು ಎಂಬುದು ತಿಳಿಯಲಿದೆ.

ಕಾರಿನಲ್ಲಿ ಸಿಕ್ಕಿರುವ ಹಣದ ಮೊತ್ತ ಮೂರು ಕೋಟಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಎಸ್ಪಿ ಮಮತಾ ಗುಪ್ತಾ ಅವರ ಸೂಚನೆಯ ಮೇರೆಗೆ, ಅಬು ರೋಡ್ ರಿಕೊ ಎಸ್‌ಎಚ್‌ಒ ಹರ್ಚಂದ್ ದೇವಾಸಿ ನೇತೃತ್ವದಲ್ಲಿ ರಾಜಸ್ಥಾನ-ಗುಜರಾತ್ ಗಡಿಯ ಮಾವಲ್ ಪೋಸ್ಟ್‌ನಲ್ಲಿ ಎರಡು ಕಾರುಗಳನ್ನು ಪರಿಶೀಲಿಸಲಾಗಿತ್ತು. ಈ ವೇಳೆ ಕಾರಿನ ಸೀಟಿನ ಕೆಳಗೆ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಎರಡೂ ಕಾರಿನಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಎರಡು ಉದ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ: 41 ಕೋಟಿ ಅಕ್ರಮ ಹಣ ಪತ್ತೆ

ಸಿಒ ಯೋಗೇಶ್ ಶರ್ಮಾ, ಹರಚಂದ್ ದೇವಸಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಬಂಧಿತ ಆರೋಪಿಗಳು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸರಿಯಾದ ಉತ್ತರವನ್ನು ನೀಡಿಲ್ಲ. ಈ ಹಣ ಹವಾಲಾ ಆಗಿರಬಹುದು ಎಂಬ ಮಾಹಿತಿ ಬಯಲಿಗೆ ಬಂದಿದೆ. ಜೋಧ್‌ಪುರದಿಂದ ಆದಾಯ ತೆರಿಗೆ ಇಲಾಖೆಯ ತಂಡವನ್ನು ಕರೆಸಲಾಗಿದ್ದು, ನಂತರ ತನಿಖೆ ನಡೆಸಿ ವಿಷಯ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.