ETV Bharat / bharat

ಯುಪಿ ಸಿಎಂ ಕಚೇರಿಯ ಟ್ವಿಟರ್​ ಮಧ್ಯರಾತ್ರಿ ಹ್ಯಾಕ್: ಡಿಪಿ ಬದಲಾವಣೆ, 50ಕ್ಕೂ ಹೆಚ್ಚು ಟ್ವೀಟ್​

author img

By

Published : Apr 9, 2022, 9:57 AM IST

ಉತ್ತರಪ್ರದೇಶದ ಸಿಎಂ ಕಚೇರಿಯ ಅಧಿಕೃತ ಟ್ವಿಟರ್​ ಹ್ಯಾಂಡಲ್ ಮಧ್ಯರಾತ್ರಿ ಹ್ಯಾಕ್ ಆಗಿದ್ದು, ಹ್ಯಾಕರ್​ಗಳು ಖಾತೆಯನ್ನು ಹ್ಯಾಕ್ ಮಾಡಿದ ತಕ್ಷಣ ಡಿಪಿಯನ್ನು ಬದಲಾಯಿಸಿದ್ದು, 50ಕ್ಕೂ ಹೆಚ್ಚು ಟ್ವೀಟ್​ಗಳನ್ನು ಮಾಡಿದ್ದರು.

the-official-twitter-handle-of-cm-yogi-was-hacked-in-the-middle-of-the-night
ಯುಪಿ ಸಿಎಂ ಕಚೇರಿಯ ಟ್ವಿಟರ್​ ಮಧ್ಯರಾತ್ರಿ ಹ್ಯಾಕ್: ಡಿಪಿ ಬದಲಾವಣೆ, 50ಕ್ಕೂ ಹೆಚ್ಚು ಟ್ವೀಟ್​

ಲಖನೌ(ಉತ್ತರಪ್ರದೇಶ): ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿಯ ಟ್ವಿಟರ್ ಹ್ಯಾಂಡಲ್ ಮಧ್ಯರಾತ್ರಿ ಹ್ಯಾಕ್ ಆಗಿದ್ದು, ಈಗ ಸರಿಪಡಿಸಲಾಗಿದೆ. ಹ್ಯಾಕರ್​ಗಳು ಖಾತೆಯನ್ನು ಹ್ಯಾಕ್ ಮಾಡಿದ ತಕ್ಷಣ ಡಿಪಿಯನ್ನು ಬದಲಾಯಿಸಿದ್ದು, ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಟ್ವೀಟ್ ಮಾಡಿದ್ದಾರೆ. ಸಿಎಂ ಕಚೇರಿಯ ಖಾತೆಯ ಬಯೋದಲ್ಲಿ Bored Ape Yacht Club ಮತ್ತು Yuga Labs ಸಹ ಸಂಸ್ಥಾಪಕ ಎಂದು ಬರೆಯಲಾಗಿದೆ. ಎರಡೂ ಕಂಪನಿಗಳು ಕ್ರಿಪ್ಟೋ ಕರೆನ್ಸಿ ಕಂಪನಿಗಳಾಗಿವೆ. ಆದ್ರೆ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಮಾಹಿತಿ ಪ್ರಕಾರ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಏಪ್ರಿಲ್ 8ರ ತಡರಾತ್ರಿ 12:40ಕ್ಕೆ ಹ್ಯಾಕರ್​ಗಳು ಹ್ಯಾಕ್ ಮಾಡಿದ್ದಾರೆ. ನಂತರ ಅಧಿಕಾರಿಗಳು ಟ್ವಿಟರ್ ಅನ್ನು ಸಂಪರ್ಕಿಸಿ, ಹ್ಯಾಕ್ ಆಗಿದ್ದ ಟ್ವಿಟರ್​ ಖಾತೆಯನ್ನು ಸುಮಾರು 30 ನಿಮಿಷಗಳಲ್ಲಿ ಸರಿಪಡಿಸಲಾಗಿದೆ. ಈಗ ಎಂದಿನಂತೆ ಸಿಎಂ ಕಚೇರಿಯ ಟ್ವಿಟರ್​ ಕಾರ್ಯನಿರ್ವಹಿಸುತ್ತಿದೆ.

The official Twitter handle of CM Yogi was hacked in the middle of the night
ಹ್ಯಾಕ್ ಆಗಿದ್ದ ಟ್ವಿಟರ್ ಖಾತೆ

ಸಿಎಂ ಸರ್ಕಾರಿ ಕಚೇರಿಯಲ್ಲಿ ಈ ರೀತಿಯ ಹ್ಯಾಕಿಂಗ್ ಆಗಿರುವುದು ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ರಾಜಕಾರಣಿಗಳ ಖಾತೆಯನ್ನು ಹ್ಯಾಕ್ ಮಾಡಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಟ್ವಿಟರ್ ಖಾತೆ ಕೂಡ ಹ್ಯಾಕ್ ಆಗಿತ್ತು.

ಇದನ್ನೂ ಓದಿ: ಶರದ್​ ಪವಾರ್​ ಮನೆ ಮೇಲೆ ಆಕ್ರೋಶಿತ ಸಾರಿಗೆ ನೌಕರರಿಂದ ಕಲ್ಲು, ಶೂಗಳ ತೂರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.