ETV Bharat / bharat

ಪರೇಡ್​​​​ನಲ್ಲಿ ಟ್ಯಾಬ್ಲೋಗಳ ಕಲರವ​...ದೆಹಲಿಯ ರಾಜ್​ಪಥದಲ್ಲಿ ದೇಶದ ಸಂಸ್ಕೃತಿಯ ಅನಾವರಣ!

author img

By

Published : Jan 26, 2022, 12:47 PM IST

73 ನೇ ಗಣರಾಜ್ಯೋತ್ಸವದ ಪರೇಡ್​ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು(ಟ್ಯಾಬ್ಲೋ) ದೇಶದ ಗಮನ ಸೆಳೆದಿವೆ. ಈ ಬಾರಿ 12 ರಾಜ್ಯಗಳ ಟ್ಯಾಬ್ಲೋಗಳ ಪರೇಡ್​ಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆಯಾ ರಾಜ್ಯಗಳು ಪ್ರದರ್ಶಿಸಿದ ಟ್ಯಾಬ್ಲೋಗಳ ವಿಶೇಷ ಹೀಗಿದೆ.

tableau
ಟ್ಯಾಬ್ಲೋಗಳ ಪರೇಡ್

ನವದೆಹಲಿ: 73 ನೇ ಗಣರಾಜ್ಯೋತ್ಸವದ ಪರೇಡ್​ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು(ಟ್ಯಾಬ್ಲೋ) ದೇಶದ ಗಮನ ಸೆಳೆದಿವೆ. ಈ ಬಾರಿ 12 ರಾಜ್ಯಗಳ ಟ್ಯಾಬ್ಲೋಗಳ ಪರೇಡ್​ಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಆಯಾ ರಾಜ್ಯಗಳು ಪ್ರದರ್ಶಿಸಿದ ಟ್ಯಾಬ್ಲೋಗಳ ವಿಶೇಷ ಹೀಗಿದೆ.

ಸ್ವಾತಂತ್ರ್ಯ ಹೋರಾಟದ ಪಂಜಾಬ್ ಸ್ತಬ್ಧಚಿತ್ರ

ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್​ನ ಕೊಡುಗೆಯನ್ನು ಈ ಟ್ಯಾಬ್ಲೋದಲ್ಲಿ ಚಿತ್ರಿಸುತ್ತದೆ. ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಲಾಲಾ ಲಜಪತ್​ರಾಯ್​ ಮತ್ತು ಉಧಮ್​ಸಿಂಗ್ ನೇತೃತ್ವದಲ್ಲಿ ಸೈಮನ್​ ಕಮಿಷನ್​ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷ್​ ಸೈನಿಕರು ಥಳಿಸುತ್ತಿರುವುದನ್ನು ಇಲ್ಲಿ ತೋರಿಸಲಾಗಿದೆ.

  • With the theme 'number one in sports', the tableau of Haryana participates in the #RepublicDayParade.

    Out of the 7 medals won by India in Tokyo Olympics 2020, Haryana bagged 4. Similarly, in Paralympics 2020, out of the 19 medals won by the country, the players of Haryana got 6. pic.twitter.com/XAMsJyD6nW

    — ANI (@ANI) January 26, 2022 " class="align-text-top noRightClick twitterSection" data=" ">

ಕ್ರೀಡಾ ಸ್ಫೂರ್ತಿಯ ಹರಿಯಾಣ ಟ್ಯಾಬ್ಲೋ

ಹರಿಯಾಣದ ಟ್ಯಾಬ್ಲೋ ಕ್ರೀಡೆಯ ಕುರಿತಾಗಿ ಚಿತ್ರಿಸಲಾಗಿದೆ. ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಛೋಪ್ರಾ, ಕುಸ್ತಿಪಟುಗಳ ಸ್ಪರ್ಧೆಯನ್ನು ತೋರಿಸಲಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ 7 ಪದಕಗಳಲ್ಲಿ ಹರಿಯಾಣ 4 ಪದಕಗಳನ್ನು ಬಾಚಿಕೊಂಡಿದೆ. 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪಡೆದ 19 ಪದಕಗಳಲ್ಲಿ 6 ಪದಕಗಳನ್ನು ಹರಿಯಾಣದ ಆಟಗಾರರು ಪಡೆದುಕೊಂಡಿದ್ದನ್ನು ಇಲ್ಲಿ ಹೇಳಲಾಗಿದೆ.

ಗೋವಾ ಪರಂಪರೆ ಅನಾವರಣ

ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಭಾಗವಹಿಸಿದ ಗೋವಾ ಟ್ಯಾಬ್ಲೋ, 'ಗೋವಾ ಪರಂಪರೆ' ಥೀಮ್ ಅನ್ನು ಆಧರಿಸಿದೆ. ಟ್ಯಾಬ್ಲೋವು ಫೋರ್ಟ್ ಅಗುಡಾ, ಪಣಜಿಯ ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕ ಮತ್ತು ಡೋನಾ ಪೌಲಾವನ್ನು ಹೊಂದಿದೆ.

ದೇವಾಲಯಗಳ ಪ್ರದರ್ಶಿಸಿದ ಉತ್ತರಾಖಂಡ

ಉತ್ತರಾಖಂಡದ ಟ್ಯಾಬ್ಲೋ ಹೇಮಕುಂಡ್ ಸಾಹಿಬ್ ಗುರುದ್ವಾರ, ದೋಬ್ರಾ- ಚಂಟಿ ಸೇತುವೆ ಮತ್ತು ಬದರಿನಾಥ ದೇವಾಲಯವನ್ನು ಒಳಗೊಂಡಿದೆ.

ಬುಡಕಟ್ಟು ಚಳವಳಿಯ ಗುಜರಾತ್‌ ಟ್ಯಾಬ್ಲೋ

ಗುಜರಾತ್‌ನ ಟ್ಯಾಬ್ಲೋ 'ಗುಜರಾತ್‌ನ ಬುಡಕಟ್ಟು ಚಳುವಳಿ'ಯ ಥೀಮ್​ ಹೊಂದಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಬುಡಕಟ್ಟು ಜನಾಂಗದವರ ಸ್ವಾತಂತ್ರ್ಯ ಹೋರಾಟದ ರಣೋತ್ಸಾಹವನ್ನು ಇಲ್ಲಿ ಹೇಳಲಾಗಿದೆ.

ಮೇಘಾಲಯ ಟ್ಯಾಬ್ಲೋದಲ್ಲಿ ಬಿದರಿನ ಕಲೆ

ಮೇಘಾಲಯದ ಟ್ಯಾಬ್ಲೋದಲ್ಲಿ ಬಿದರಿನ ಕಲೆಯನ್ನು ಅನಾವರಣ ಮಾಡಲಾಗಿದೆ. ಮಹಿಳೆಯೊಬ್ಬರು ಬಿದಿರಿನ ಬುಟ್ಟಿಯನ್ನು ನೇಯುತ್ತಿರುವುದು ಮತ್ತು ರಾಜ್ಯದ ಅನೇಕ ಬಿದಿರು ಮತ್ತು ಕಬ್ಬಿನ ಉತ್ಪನ್ನಗಳನ್ನು ಟ್ಯಾಬ್ಲೋ ಹೊಂದಿದೆ.

ಭಾರತೀಯ ವಾಯುಪಡೆಯ ಟ್ಯಾಬ್ಲೋ

ಭಾರತೀಯ ವಾಯುಪಡೆಯ ಟ್ಯಾಬ್ಲೋವು 'ಭವಿಷ್ಯಕ್ಕಾಗಿ ಭಾರತೀಯ ವಾಯುಪಡೆಯ ಪರಿವರ್ತನೆ' ಎಂಬ ಥೀಮ್ ಅನ್ನು ಪ್ರದರ್ಶಿಸಲಾಗಿದೆ. ಇದು ಮಿಗ್​-21, ಗ್ನಾಟ್​, ಲಘು ಯುದ್ಧ ವಿಮಾನ, ರಾಡಾರ್ ಮತ್ತು ರಫೇಲ್ ವಿಮಾನಗಳ ಮಾದರಿಯನ್ನು ತೋರಿಸಲಾಗಿದೆ. ಇದರ ಮೇಲೆ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಅವರನ್ನು ಕಾಣ ಬಹುದಾಗಿದೆ.

  • Tableau of UP showcases achievement through skill development &employment via 'One District One Product', based on new micro, small & medium enterprise policy & industrial development policy of the state govt. Development in Kashi Vishwanath corridor also exhibited.#RepublicDay pic.twitter.com/r2eUNtWZv0

    — ANI (@ANI) January 26, 2022 " class="align-text-top noRightClick twitterSection" data=" ">

ಉತ್ತರಪ್ರದೇಶದ ಟ್ಯಾಬ್ಲೋದಲ್ಲಿ ಕಾಶಿ ವಿಶ್ವನಾಥ

ಉತ್ತರಪ್ರದೇಶ ರಾಜ್ಯವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ನೀತಿ ಮತ್ತು ಕೈಗಾರಿಕಾ ಅಭಿವೃದ್ಧಿ ನೀತಿಯ ಆಧಾರದ ಮೇಲೆ 'ಒಂದು ಜಿಲ್ಲೆ ಒಂದು ಉತ್ಪನ್ನ'ದ ಥೀಮ್​ ಹೊಂದಿರುವ ಟ್ಯಾಬ್ಲೋವನ್ನು ಪ್ರದರ್ಶಿಸಿದೆ. ಅಲ್ಲದೇ ಕಾಶಿ ವಿಶ್ವನಾಥ ಕಾರಿಡಾರ್‌ನ ಅಭಿವೃದ್ಧಿಯನ್ನೂ ಇದು ಹೊಂದಿದೆ.

ಇದಲ್ಲದೇ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಅರುಣಾಚಲ ಪ್ರದೇಶ, ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರದ ಟ್ಯಾಬ್ಲೋಗಳು ಕೂಡ ಗಮನ ಸೆಳೆದಿವೆ.

ಇದನ್ನೂ ಓದಿ: Republic Day: ಗಣರಾಜ್ಯೋತ್ಸವ ಪರೇಡ್​ನಲ್ಲಿ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.