ETV Bharat / bharat

ಜೈಪುರದ ಧೂಳಿನ ಹಾದಿಗಳಿಂದ ಜಿನೀವಾ.. ಆಟೋವಾಲಾನ ರೋಚಕ ಪ್ರೇಮ ಕಹಾನಿ

author img

By

Published : Jun 16, 2021, 2:34 PM IST

ಜೈಪುರದ ಧೂಳಿನ ಹಾದಿಗಳಿಂದ ಜಿನೀವಾದಲ್ಲಿನ ಜೀವನಕ್ಕೆ ರಂಜಿತ್ ಸಿಂಗ್ ರಾಜ್ ಸಾಗಿದ ಕಥೆ ರೋಚಕವಾಗಿದೆ. ಆಟೋ ಚಾಲಕರಾಗಿದ್ದ ರಂಜಿತ್, ಇದೀಗ ಜಿನಿವಾದಲ್ಲಿ ವಾಸಿಸುತ್ತಿದ್ದಾರೆ

ಜೈಪುರ (ರಾಜಸ್ಥಾನ): ಜೈಪುರದ ಧೂಳಿನ ಹಾದಿಗಳಿಂದ ಜಿನೀವಾದಲ್ಲಿನ ಜೀವನಕ್ಕೆ ರಂಜಿತ್ ಸಿಂಗ್ ರಾಜ್ ಸಾಗಿದ ಕಥೆ ರೋಚಕವಾಗಿದೆ. ಬಾಲ್ಯದಿಂದಲೂ ಕಷ್ಟವನ್ನೇ ಕಂಡು ಬೆಳೆದಿದ್ದ ರಂಜಿತ್​, ಅವರಿಗೆ ವಿದ್ಯಾವಂತನನ್ನಾಗಿ ಮಾಡಲು ಪಾಲಕರು ಶಾಲೆಗೆ ಸೇರಿಸಿದ್ದರು. ಆದರೆ, ಅವರಿಗೆ ವಿದ್ಯೆಯಲ್ಲಿ ಆಸಕ್ತಿಯಿರಲಿಲ್ಲ.

ಹತ್ತನೆ ತರಗತಿಯಲ್ಲಿ ಫೇಲ್​ ಆದ ರಾಜ್​, 16 ನೇ ವಯಸ್ಸಿನಲ್ಲಿ ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದರು. ಈ ಕೆಲಸವನ್ನು ಅವರು ಜೈಪುರದಲ್ಲಿ ಹಲವಾರು ವರ್ಷಗಳ ಕಾಲ ಮಾಡಿದರು. ಅವರಲ್ಲಿ ಅಡಗಿರುವ ಉದ್ಯಮಶೀಲತೆ ರಾಜ್‌ಗೆ ತಿಳಿದಿರಲಿಲ್ಲ.

ಪ್ರವಾಸಿಗರನ್ನು ಆಕರ್ಷಿಸಲು ಇತರ ಆಟೋ ಚಾಲಕರು ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ಇತರ ವಿದೇಶಿ ಭಾಷೆಗಳನ್ನು ಮಾತನಾಡುತ್ತಿದ್ದರು. ಬಳಿಕ ನಾನು ಇಂಗ್ಲಿಷ್ ಕಲಿಯಲು ಬಯಸಿದೆ.

ಇದು ಪ್ರವಾಸೋದ್ಯಮ ವ್ಯವಹಾರ ಸ್ಥಾಪಿಸಲು ಪ್ರೇರೇಪಿಸಿತು. ರಾಜಸ್ಥಾನದ ಸುತ್ತ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯಲು ಪ್ರಾರಂಭಿಸಿದರು. ಅದೃಷ್ಟ ಎಂಬಂತೆ ಯುವತಿಯೊಬ್ಬಳನ್ನು ಭೇಟಿಯಾದರು. ಅವರ ಜೀವನದ ಬದಲಾವಣೆಯ ಪಥ ಅಂದಿನಿಂದ ಆರಂಭವಾಯಿತು. ಆ ಯುವತಿಯಿಂದ ಅವರ ಬದುಕು ತಿರುವು ಪಡೆದುಕೊಂಡಿತು.

ಈಗ ಆ ಯುವತಿಯೇ ರಾಜ್​ ಅವರನ್ನು ಮದುವೆಯಾಗಿದ್ದಾರೆ. ರಾಜ್ ಅವರ ಪತ್ನಿ ಭಾರತದಾದ್ಯಂತ ಪ್ರಯಾಣಿಸಲು ಬಂದಿದ್ದರು. ರಾಜ್ ಅವರ ಪ್ರಯಾಣ ಮಾರ್ಗದರ್ಶಿಯಾಗಿದ್ದರು. ಜೈಪುರದ ಸುತ್ತಲೂ ಓಡಾಡಿಸಿದರು. ಬಳಿಕ ಪ್ರೀತಿಯಲ್ಲಿ ಬಿದ್ದರು.

ಮೊದಲು ಸಿಟಿ ಪ್ಯಾಲೇಸ್‌ನಲ್ಲಿ ಭೇಟಿಯಾಗಿದ್ದರು. ಅವರು ತನ್ನ ಗೆಳತಿಯೊಬ್ಬಳೊಂದಿಗೆ ಭಾರತದಾದ್ಯಂತ ಪ್ರಯಾಣಿಸಲು ಬಂದಿದ್ದರು. ಪರಸ್ಪರ ಇಷ್ಟಪಡಲು ಪ್ರಾರಂಭಿಸಿದರು. ಮಾತನಾಡಲು ಪ್ರಾರಂಭಿಸಿದರು. ಆದರೆ, ಬಳಿಕ ಯುವತಿ ಫ್ರಾನ್ಸ್‌ಗೆ ಮರಳಿದರು. ಸ್ಕೈಪ್ ಮೂಲಕ ಸಂಪರ್ಕದಲ್ಲಿದ್ದರು.

ನಂತರ ತಮ್ಮ ಪ್ರೇಯಸಿಯನ್ನು ಭೇಟಿಯಾಗಲು ರಾಜ್ ಫ್ರಾನ್ಸ್‌ಗೆ ಹೋಗಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ, ವೀಸಾ ಅರ್ಜಿ ತಿರಸ್ಕರಿಸಲ್ಪಟ್ಟಿತು. ಆದರೆ, ಅಂತಿಮವಾಗಿ ಫ್ರಾನ್ಸ್‌ಗೆ ಹೋಗಲು ಮೂರು ತಿಂಗಳ ಪ್ರವಾಸಿ ವೀಸಾ ನೀಡಿದರು. ಅದರ ನಂತರ ಅನೇಕ ಪ್ರವಾಸಗಳನ್ನು ಮಾಡಿದರು.

2014 ರಲ್ಲಿ ಅವರಿಬ್ಬರು ಮದುವೆಯಾದರು. ಈಗ ಈ ದಂಪತಿಗೆ ಮುದ್ದಾದ ಮಗುವಿದೆ. ರಾಜ್ ನಂತರ ಫ್ರೆಂಚ್ ರಾಯಭಾರ ಕಚೇರಿಯೊಂದಿಗೆ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದರು.

ಬಳಿಕ ನವದೆಹಲಿಯ ದಿ ಅಲೈಯನ್ಸ್ ಫ್ರಾನ್ಸ್‌ನಲ್ಲಿ ಫ್ರೆಂಚ್ ತರಗತಿಗಳನ್ನು ತೆಗೆದುಕೊಂಡು ಪ್ರಮಾಣಪತ್ರವನ್ನು ಪಡೆದುಕೊಂಡರ ರಾಜ್​, ಈಗ ದೀರ್ಘಾವಧಿಯ ವೀಸಾ ಪಡೆದಿದ್ದಾರೆ. ರಾಜ್ ಪ್ರಸ್ತುತ ಪತ್ನಿ ಜತೆ ಜಿನೀವಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.