ETV Bharat / bharat

ಪುತ್ರಿ ಸಾರಾ ಬಳಿಕ ಸಚಿನ್​ ತೆಂಡೂಲ್ಕರ್​ಗೆ ಡೀಪ್​ಫೇಕ್​ ತಲೆಬಿಸಿ: ನಕಲಿ ವಿಡಿಯೋ ವಿರುದ್ಧ ಆಕ್ರೋಶ

author img

By ETV Bharat Karnataka Team

Published : Jan 15, 2024, 3:41 PM IST

ಗೇಮಿಂಗ್​ ಆ್ಯಪ್​ ಬಳಸಿ ಹಣ ಗಳಿಸುವಂತೆ ಕ್ರಿಕೆಟ್ ​ದಿಗ್ಗಜ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡುತ್ತಿರುವ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ವಿರುದ್ಧ ಸಚಿನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿನ್​ ತೆಂಡೂಲ್ಕರ್​ ಡೀಪ್​ಫೇಕ್
ಸಚಿನ್​ ತೆಂಡೂಲ್ಕರ್​ ಡೀಪ್​ಫೇಕ್

ಮುಂಬೈ (ಮಹಾರಾಷ್ಟ್ರ) : ನಟಿ ರಶ್ಮಿಕಾ ಮಂದಣ್ಣ, ಸಾರಾ ತೆಂಡೂಲ್ಕರ್​, ಸನ್ನಿ ಲಿಯೋನ್​ ಸೇರಿದಂತೆ ಹಲವು ತಾರೆಯರನ್ನು ಬಾಧಿಸಿದ್ದ ಡೀಪ್​​ಫೇಕ್​ ತಂತ್ರಜ್ಞಾನ ಈಗ, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರನ್ನೂ ಸುತ್ತಿಕೊಂಡಿದೆ. ಹಣ ಗಳಿಸುವ ಗೇಮ್​ ಅಪ್ಲಿಕೇಶನ್ ಬಗ್ಗೆ ಅವರು ಮಾಹಿತಿ ನೀಡುತ್ತಿರುವಂತೆ ಜಾಹೀರಾತೊಂದನ್ನು ಚಿತ್ರಿಸಲಾಗಿದೆ. ಇದು ನಕಲಿ ವಿಡಿಯೋ ಎಂದು ಸ್ವತಃ ಸಚಿನ್​ ಅವರೇ ಹೇಳಿಕೊಂಡಿದ್ದಾರೆ.

  • These videos are fake. It is disturbing to see rampant misuse of technology. Request everyone to report videos, ads & apps like these in large numbers.

    Social Media platforms need to be alert and responsive to complaints. Swift action from their end is crucial to stopping the… pic.twitter.com/4MwXthxSOM

    — Sachin Tendulkar (@sachin_rt) January 15, 2024 " class="align-text-top noRightClick twitterSection" data=" ">

ಇದು ತಂತ್ರಜ್ಞಾನದ ಅತಿರೇಕದ ದುರ್ಬಳಕೆ. ಇದಕ್ಕೆ ಶೀಘ್ರವೇ ಕಡಿವಾಣ ಹಾಕಬೇಕಿದೆ. ಇಂತಹವುಗಳನ್ನು ಕಂಡಾಗ ಭಾರೀ ಬೇಸರವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೋಮವಾರ ಹೇಳಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ನಕಲಿ ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿರುವ ಅವರು, ಈ ವಿಡಿಯೋ ನಕಲಿಯಾಗಿದೆ. ತಂತ್ರಜ್ಞಾನದ ದುರ್ಬಳಕೆ ಆಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ರೀತಿಯ ನಕಲಿ ವಿಡಿಯೋಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಜೊತೆಗೆ ಇಂತಹ ಘಟನೆಗಳ ಬಳಿಕ ಸಾಮಾಜಿಕ ಮಾಧ್ಯಮಗಳು ಎಚ್ಚರಿಕೆ ಮತ್ತು ದೂರುಗಳಿಗೆ ಸ್ಪಂದಿಸುವ ಅಗತ್ಯವಿದೆ. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ತೆಂಡೂಲ್ಕರ್ ಅವರು ನಕಲಿ ವಿಡಿಯೋವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಮಹಾರಾಷ್ಟ್ರ ಸೈಬರ್ ಕ್ರೈಮ್​ಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೂ ಮೊದಲು ತೆಂಡೂಲ್ಕರ್ ಅವರಿಗೆ ಡೀಪ್​ಫೇಕ್​​ ಬಿಸಿ ತಟ್ಟಿತ್ತು.

ಇದನ್ನೂ ಓದಿ: 'ನನ್ನ ಡೀಪ್‌ಫೇಕ್ ಫೋಟೋಗಳು ವೈರಲ್ ಆಗಿವೆ': ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ಬೇಸರ

ಸಾರಾ ತೆಂಡೂಲ್ಕರ್​ಗೂ ಡೀಪ್​ಫೇಕ್​ ಶಾಕ್​: ಇದಕ್ಕೂ ಮೊದಲು ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಸಾರಾ ಅವರಿಗೂ ಡೀಪ್​ಫೇಕ್​ ತಂತ್ರಜ್ಞಾನದ ಬಿಸಿ ಮುಟ್ಟಿತ್ತು. ಅವರ ನಕಲಿ ಚಿತ್ರಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. ನನ್ನ ಹೆಸರಿನಲ್ಲಿ ಕೆಲವರು ಎಕ್ಸ್‌ ವೇದಿಕೆಯಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ. ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದು ಒಳ್ಳೆಯದಲ್ಲ ಎಂದಿದ್ದರು.

ನಮ್ಮ ದೈನಂದಿನ ಚಟುವಟಿಕೆಗಳು, ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಒಂದು ಅದ್ಭುತ ವೇದಿಕೆ. ಆದರೆ, ಕೆಲವರು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಬೇಸರ ತಂದಿದೆ. ನನ್ನ ಡೀಪ್‌ಫೇಕ್ ಫೋಟೋಗಳು ವೈರಲ್ ಆಗುತ್ತಿರುವುದನ್ನು ನೋಡಿದ್ದೇನೆ. ಕೆಲವರು ಎಕ್ಸ್​ನಲ್ಲಿ ನನ್ನ ಹೆಸರಿನ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ. ಎಕ್ಸ್‌ ಸಂಸ್ಥೆ ನಕಲಿ ಖಾತೆಗಳನ್ನು ಗುರುತಿಸಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸತ್ಯ ಮುಚ್ಚಿಟ್ಟು ಮನರಂಜನೆ ಮಾಡಬೇಡಿ. ಪ್ರಾಮಾಣಿಕ, ನಿಜವಾದ ಸಂವಹನ ಪ್ರೋತ್ಸಾಹಿಸಿ ಎಂದು ಸಾರಾ ತೆಂಡೂಲ್ಕರ್ ಹೇಳಿದ್ದರು.

ಇದನ್ನೂ ಓದಿ: ಡೀಪ್​​ಫೇಕ್​​​ ವಿಡಿಯೋ: ದನಿಯೇರಿಸಲು ಹುಡುಗಿಯರಿಗೆ ರಶ್ಮಿಕಾ ಮಂದಣ್ಣ ಸಲಹೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.