ETV Bharat / bharat

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್​ ರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ

author img

By ETV Bharat Karnataka Team

Published : Dec 7, 2023, 1:32 PM IST

Updated : Dec 7, 2023, 2:47 PM IST

Revanth reddy swearing ceremony: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ರೇವಂತ್​ ರೆಡ್ಡಿ
ರೇವಂತ್​ ರೆಡ್ಡಿ

ಹೈದರಾಬಾದ್​: ಇಲ್ಲಿನ ಎಲ್​ಬಿ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲೆ ತಮಿಳಸೈ ಸೌಂದರ್ಯರಾಜನ್​ ಅವರು ಪ್ರಮಾಣ ವಚನ ಬೋಧಿಸಿದರು.

ರೇವಂತ್​ ರೆಡ್ಡಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಜೊತೆಗೆ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಮೂರನೇವರಾಗಿ ಉತ್ತಮ್ ಕುಮಾರ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ದಾಮೋದರ ರಾಜನರಸಿಂಹ, ಕೋಮಟಿ ರೆಡ್ಡಿ ವೆಂಕಟ ರೆಡ್ಡಿ, ದುಡ್ಡಿಲ್ಲ ಶ್ರೀಧರಬಾಬು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಸಹ ನೂತನ ಸಚಿವರಾಗಿ ಅಧಿಕಾರದ ಗೌಪ್ಯತೆಯನ್ನು ರಾಜ್ಯಪಾಲರಿಂದ ಪಡೆದುಕೊಂಡರು.

ಕೊಂಡಾ ಸುರೇಖಾ, ಪೊನ್ನಂ ಪ್ರಭಾಕರ್ ಸಚಿವರಾಗಿ ಅಧಿಕಾರದ ಗೌಪ್ಯತೆ ಪಡೆದುಕೊಂಡರು. ರಾಜ್ಯಪಾಲ ತಮಿಳಿಸೈ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ವಿಶೇಷ ವಾಹನದಲ್ಲಿ ಸೋನಿಯಾ, ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿ ಎಲ್ ಬಿ ಸ್ಟೇಡಿಯಂಗೆ ಬಂದರು. ಇವರಿಗೆ ಸಿಎಂ ರೇವಂತ ರೆಡ್ಡಿ ಸಾತ್​ ನೀಡಿದರು. ಇದೇ ವೇಳೆ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್​ ಹಾಜರಿದ್ದರು. ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಎಬಿವಿಪಿಯಲ್ಲಿ ಬೆಳೆದ ರೇವಂತ್​ ರೆಡ್ಡಿ ಸಂಘಟನಾ ಚತುರ; ಹೀಗಿದೆ ಸಿಎಂ ಸ್ಥಾನದವರೆಗಿನ ರಾಜಕೀಯ ಹಾದಿ

Last Updated : Dec 7, 2023, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.