ETV Bharat / bharat

ಪಿಎಫ್​ಐ ಪ್ರಕರಣ, ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ

author img

By

Published : Oct 18, 2022, 10:02 AM IST

ದೇಶದ ಭದ್ರತಾ ದೃಷ್ಠಿಯಿಂದ ಭಯೋತ್ಪಾದಕರು, ದರೋಡೆಕೋರರು, ಮಾದಕವಸ್ತುಸಾಗಣೆದಾರರ ನಡುವಿರುವ ಸಂಪರ್ಕಜಾಲ ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರದಂದು ಪಂಜಾಬ್, ಹರಿಯಾಣ, ರಾಜಸ್ಥಾನ, ಬಿಹಾರ್​ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೋಧನೆ ನಡೆಸುತ್ತಿದೆ.

Targeting gangs terror nexus  NIA raids multiple places in northern India  NIA raids multiple places in India  NIA raid over PFI case in Patna  ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ  ರಾಷ್ಟ್ರೀಯ ತನಿಖಾ ಸಂಸ್ಥೆ  ಭಾರತ ಹಾಗೂ ವಿದೇಶದಲ್ಲಿರುವ ಭಯೋತ್ಪಾದಕರು  ಡ್ರಗ್​ ಮಾಫಿಯಾ ನಡುವಿರುವ ಸಂಪರ್ಕಜಾಲ  ಗ್ಯಾಂಗ್​ಸ್ಟಾರ್​ಗಳ ಜೊತೆ ಉಗ್ರರ ನಂಟು
ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ

ನವದೆಹಲಿ: ಭಾರತ ಹಾಗೂ ವಿದೇಶದಲ್ಲಿರುವ ಭಯೋತ್ಪಾದಕರು, ದರೋಡೆಕೋರರು, ಡ್ರಗ್​ ಮಾಫಿಯಾ ನಡುವಿರುವ ಸಂಪರ್ಕಜಾಲ ಮತ್ತು ಗ್ಯಾಂಗ್​ಸ್ಟಾರ್​ಗಳ ಜೊತೆ ಉಗ್ರರ ನಂಟು ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರದಂದು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ.

ಅಕ್ಟೋಬರ್ 14 ರಂದು ಡ್ರೋನ್ ಡೆಲಿವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಈ ಹಿಂದೆ ಎನ್‌ಐಎ ಶೋಧ ಕೈಗೊಂಡಿತು. ಎನ್​ಐಎ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಯಾರನ್ನು ಬಂಧಿಸಿಲ್ಲ. ಹಿಂದಿನ ಒಂಭತ್ತು ತಿಂಗಳಲ್ಲಿ, ನೆರೆಯ ಪಾಕಿಸ್ತಾನದಿಂದ 191 ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಇದನ್ನೆಲ್ಲ ಭದ್ರತಾ ಪಡೆಗಳು ಗಮನಿಸುತ್ತಿವೆ. ಇದು ಭಾರತ ಆಂತರಿಕ ಭದ್ರತೆಯ ವಿಷಯಕ್ಕೆ ಧಕ್ಕೆ ತರುವ ವಿಚಾರವನ್ನು ಹುಟ್ಟುಹಾಕಿದೆ ಎನ್ನುತ್ತಿದೆ.

ಪಾಕಿಸ್ತಾನದಿಂದ ಇಂಥ ಅಕ್ರಮ ಕೃತ್ಯಗಳನ್ನು ನಿರ್ವಹಿಸಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲ್ಪಟ್ಟ ಭದ್ರತಾ ಪಡೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿದೆ. ಸೋಮವಾರ ಬೆಳಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಎನ್​ಐಎ ತಿಳಿಸಿದೆ. ಇನ್ನು ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಪಾಟ್ನಾದ ಫುಲ್ವಾರಿ ಷರೀಫ್‌ನ ಎರಡು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ.

ಓದಿ: ಉಗ್ರ ಸಂಘಟನೆ ಜೊತೆ ಶಿಕ್ಷಣ ಸಂಸ್ಥೆ​ ನಂಟು ಶಂಕೆ.. ಕಾಶ್ಮೀರದಲ್ಲಿ ಎನ್​ಐಎ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.