ETV Bharat / bharat

ತಮಿಳುನಾಡಿನಲ್ಲಿ ನಿಲ್ಲದ ಮಳೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, ನೌಕಾಪಡೆಯಿಂದ ಸಹಾಯ

author img

By ETV Bharat Karnataka Team

Published : Dec 20, 2023, 7:57 AM IST

Updated : Dec 20, 2023, 9:13 AM IST

ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ. ಜನರ ರಕ್ಷಣೆಗೆ ನೌಕಾಪಡೆ ಕೂಡಾ ಧಾವಿಸಿದೆ.

Tamil Nadu Southern Districts Heavy Rain Flood Rescue works by India Army Force
ತಮಿಳುನಾಡಿನಲ್ಲಿ ನಿಲ್ಲದ ಮಳೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, ನೌಕಾಪಡೆಯಿಂದ ಸಹಾಯ

ಚೆನ್ನೈ: ಕನ್ಯಾಕುಮಾರಿ ಸಮುದ್ರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ವಿಶೇಷವಾಗಿ ತಿರುನಲ್ವೇಲಿ, ತೂತುಕುಡಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹೀಗೆ ತೊಂದರೆಗೆ ಸಿಲುಕಿರುವ ಸಾರ್ವಜನಿಕರಿಗೆ ಸಹಾಯ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ನೌಕಾಪಡೆಯು ಟುಟಿಕೋರಿನ್ ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡಿದ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸಲು ತಮಿಳುನಾಡು ಸರ್ಕಾರ ಭಾರತೀಯ ನೌಕಾಪಡೆಯ ಸಹಾಯ ಕೋರಿದೆ. ಹೀಗಾಗಿ, ರಾಮನಾಥಪುರಂನ ಐಎನ್‌ಎಸ್ ಪರುಂಡು ನಿಲ್ದಾಣದಿಂದ ಎಎಲ್‌ಎಚ್ ಹೆಲಿಕಾಪ್ಟರ್ ಮೂಲಕ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆಯ ಎರಡು ಟೋರ್ನಿಯರ್ ವಿಮಾನಗಳು ಟುಟಿಕೋರಿನ್ ವಿಮಾನ ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಮಧುರೈ ವಿಮಾನ ನಿಲ್ದಾಣದಲ್ಲಿ ಸನ್ನದ್ದವಾಗಿರಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಲಾಗಿದೆ. ಇಲ್ಲಿಗೆ ಸುಮಾರು 410 ಕೆಜಿ ತೂಕದ ಪರಿಹಾರ ಸಾಮಗ್ರಿಗಳನ್ನು ನೌಕಾಪಡೆಯ ವಿಮಾನಗಳ ಮೂಲಕ ಪೂರೈಕೆ ಮಾಡಲಾಗಿದೆ. ಇಂದು ಸುಮಾರು 3.5 ಟನ್ ತೂಕದ ಪರಿಹಾರ ಸಾಮಗ್ರಿಗಳನ್ನು ಟುಟಿಕೋರಿನ್‌ಗೆ ಕೊಂಡೊಯ್ಯಬೇಕಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ 10 ಸದಸ್ಯರನ್ನೊಳಗೊಂಡ ತಂಡಗಳನ್ನು ನಿಯೋಜಿಸಲಾಗಿದೆ. ಇದುವರೆಗೆ 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, 250 ಕುಟುಂಬಗಳಿಗೆ ಪರಿಹಾರ ಸಾಮಗ್ರಿ ಒದಗಿಸಲಾಗಿದೆ. ಅಲ್ಲದೇ, ಭಾರತೀಯ ನೌಕಾಪಡೆಯ ಡೋರ್ನಿಯರ್ ಏರ್‌ಕ್ರಾಫ್ಟ್, ಎಎಲ್‌ಎಚ್ ಹೆಲಿಕಾಪ್ಟರ್‌ಗಳನ್ನು ನಿರಂತರವಾಗಿ ಪೀಡಿತ ಜನರಿಗೆ ಸಹಾಯ ಮಾಡಲು ನಿಯೋಜಿಸಲಾಗಿದೆ. ನೌಕಾಪಡೆ ಮಾತ್ರ ಭಾರತೀಯ ಸೇನೆ ಕೂಡಾ ರಕ್ಷಣಾ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ತಮಿಳುನಾಡು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿರುನಲ್ವೇಲಿ ಜಿಲ್ಲೆಯಲ್ಲಿ ಪ್ರವಾಹದ ಸಂದರ್ಭದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ.

ದಕ್ಷಿಣದ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ತನ್ನ ಹಡಗುಗಳು ಮತ್ತು ವಿಮಾನಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಐಸಿಜಿ ತಂಡ ಇಂದು ತೂತುಕುಡಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಲುಕಿದ್ದ 200 ಜನರನ್ನು ರಕ್ಷಿಸಿದೆ. ಭಾರತೀಯ ಹವಾಮಾನ ಕೇಂದ್ರದ ಭಾರಿ ಮಳೆಯ ಎಚ್ಚರಿಕೆ ನೀಡಿದೆ. ಹೀಗಾಗಿ ಭಾರತೀಯ ಕೋಸ್ಟ್ ಗಾರ್ಡ್ ನೌಕೆ ಸುಜಯ್, ಮಳೆ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದೆ.

ಇದನ್ನು ಓದಿ: ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಸಿಲುಕಿರುವ 500 ಪ್ರಯಾಣಿಕರ ರಕ್ಷಣೆ

Last Updated : Dec 20, 2023, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.