ದೆಹಲಿ ಜೈಲಿನಿಂದ ಸುಕೇಶ್​ ಚಂದ್ರಶೇಖರ್​​ ಸ್ಥಳಾಂತರ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

author img

By

Published : Nov 21, 2022, 5:43 PM IST

ದೆಹಲಿ ಜೈಲಿನಿಂದ ಸುಕೇಶ್​ ಚಂದ್ರಶೇಖರ್​​ ಸ್ಥಳಾಂತರ ಅರ್ಜಿ; ಕೇಂದ್ರವನ್ನು ಕೇಳಿದ ಸುಪ್ರೀಂ ಕೋರ್ಟ್​​

ಮಂಡೋಲಿ ಕಾರಾಗೃಹದಲ್ಲಿ ಸುಕೇಶ್​ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿ ಅವರಿಗೆ ಜೀವ ಭಯ ಇದೆ ಎಂಬ ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಈ ವಾದ ಆಲಿಸಿದ ನ್ಯಾ. ಅಜಯ್​ ರಸ್ತೋಗಿ ಮತ್ತು ಸಿಟಿ ರವಿ ಕುಮಾರ್​ ಪೀಠ, ಚಂದ್ರಶೇಶರ್​ ಅವರ ಎರಡು ಪ್ರತ್ಯೇಕ ಅರ್ಜಿಯನ್ನು ಆಲಿಸಿದೆ.

ನವದೆಹಲಿ: ಇಲ್ಲಿನ ಮಂಡೋಲಿ ಜೈಲಿನಿಂದ ತಮ್ಮನ್ನು ಸ್ಥಳಾಂತರಿಸಿ ದೇಶದ ಇತರ ಜೈಲಿಗೆ ಸ್ಥಳಾಂತರ​ ಮಾಡುವಂತೆ ಕೋರಿ ವಂಚಕ ಸುಕೇಶ್​ ಚಂದ್ರಶೇಖರ್​ ಮನವಿ ಕುರಿತು ಸುಪ್ರೀಂ ಕೋರ್ಟ್​ ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರತಿಕ್ರಿಯೆ ಕೋರಿದೆ.

ಮಂಡೋಲಿ ಕಾರಾಗೃಹದಲ್ಲಿ ಸುಕೇಶ್​ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿ ಅವರಿಗೆ ಜೀವ ಭಯ ಇದೆ ಎಂಬ ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಈ ವಾದ ಆಲಿಸಿದ ನ್ಯಾ. ಅಜಯ್​ ರಸ್ತೋಗಿ ಮತ್ತು ಸಿಟಿ ರವಿ ಕುಮಾರ್​ ಅವರನ್ನ ಒಳಗೊಂಡ ಪೀಠ, ಚಂದ್ರಶೇಶರ್​ ಅವರ ಎರಡು ಪ್ರತ್ಯೇಕ ಅರ್ಜಿಯನ್ನು ಆಲಿಸಿದೆ. ಈ ವೇಳೆ ಜೈಲಿನಿಂದ ಶಿಫ್ಟ್​ ಮಾಡುವುದು ಮತ್ತು ಅವರ ವಕೀಲರನ್ನು ಭೇಟಿ ಮಾಡುವಂತೆ ತಿಳಿಸಿದೆ.

ದೇಶಾದ್ಯಂತ ಆರು ನಗರಗಳಲ್ಲಿ ಅವರ ವಿರುದ್ಧ 28 ಪ್ರಕರಣಗಳು ಬಾಕಿ ಉಳಿದಿವೆ. ಈ ಸಂಬಂಧ ಅವರು ದೆಹಲಿ ಜೈಲು ನಿಯಮಗಳ ಅಡಿ ವಾರಕ್ಕೆ ಎರಡು ಬಾರಿ 30 ನಿಮಿಷಗಳಂತೆ ಪ್ರತಿದಿನ 60 ನಿಮಿಷಗಳ ಕಾಲ ತಮ್ಮ ವಕೀಲರನ್ನು ಭೇಟಿ ಮಾಡಬೇಕಾಗುತ್ತದೆ ಎಂದು ಸುಕೇಶ್​​​​​​​ ಪರ ವಕೀಲರು ಹೇಳಿದರು.

ದೆಹಲಿಯ ಜೈಲು ಸಚಿವ ಸತ್ಯೇಂದ್ರ ಜೈನ್ ಅವರು 10 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ ಬಳಿಕ ಜೈಲಿನಲ್ಲಿ ಅವರಿಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಪರ ವಕೀಲರು ಕೋರ್ಟ್​ ಗಮನಕ್ಕೆ ತಂದರು. ಆದರೆ ಸುಕೇಶ್​ ಪರ ವಕೀಲರ ಆರೋಪಗಳನ್ನು ಎಎಪಿ ನಿರಾಕರಿಸಿದರು.

ಇನ್ನು ಇದೇ ವೇಳೆ ನ್ಯಾಯಾಲಯ ಸುಕೇಶ್​ ಚಂದ್ರಶೇಖರ್​ಗೆ ಹೆಚ್ಚುವರಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎಂದಿದೆ. ಈ ಸಂಬಂಧ ಸುಕೇಶ್​ ಪರ ವಕೀಲರನ್ನು ಪೀಠ ತರಾಟೆಗೆ ತೆಗೆದುಕೊಂಡಿತು.

ಇದನ್ನು ಓದಿ:ಶ್ರದ್ಧಾ ಮರ್ಡರ್ ಕೇಸ್​: ಆರೋಪಿ ಅಫ್ತಾಬ್​ಗೆ ನಡೆಯದ ನಾರ್ಕೊ ಟೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.