ದೆಹಲಿ ಹೊಸ ಅಬಕಾರಿ ನೀತಿಯನ್ನು ಕೇವಲ ಹಗರಣಕ್ಕಾಗಿ ಸಿದ್ಧಪಡಿಸಲಾಗಿದೆ: ಸುಧಾಂಶು ತ್ರಿವೇದಿ

author img

By

Published : Sep 15, 2022, 9:29 PM IST

HN-NAT

ಆಪ್​ ವಿರುದ್ದ ಮದ್ಯ ಹಗರಣದ ಆರೋಪ ಮಾಡಿರುವ ಬಿಜೆಪಿ, ಹಗರಣದ ಕುರಿತು ಮತ್ತೊಂದು ರಹಸ್ಯ ಕಾರ್ಯಾಚರಣೆ ಮಾಡಿದೆ.

ನವದೆಹಲಿ: ದೆಹಲಿಯ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ರಹಸ್ಯ ಕಾರ್ಯಾಚರಣೆ ಮಾಡಿರುವ ಬಿಜೆಪಿ, ಆಪ್​ ವಿರುದ್ದ ಮದ್ಯ ಹಗರಣದ ಆರೋಪ ಮಾಡಿದೆ.

ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಹೊಸ ಅಬಕಾರಿ ನೀತಿಯಲ್ಲಿ ಆಪ್​ ಪಕ್ಷ ಯಾವ ರೀತಿ ಹಗರಣ ನಡೆಸಿದೆ ಮತ್ತು ಯಾರಿಂದ ಹಣ ಪಡೆದಿದೆ ಎಂಬೆಲ್ಲಾ ಮಾಹಿತಿಗಳು ಲಭ್ಯವಾಗಿದೆ ಎಂದರು.

  • दो लोगों को कैसे मिला 10 हजार करोड़ रुपये का धंधा।

    10 करोड़ लगाकर कैसे कमाए गए 150 करोड़ रुपये।

    देखिए, केजरीवाल सरकार के शराब घोटाले पर एक और सनसनीखेज खुलासा। pic.twitter.com/5SmFgoI1lm

    — BJP (@BJP4India) September 15, 2022 " class="align-text-top noRightClick twitterSection" data=" ">

ಹೊಸ ಅಬಕಾರಿ ನೀತಿಯನ್ನು ಕೇವಲ ಹಗರಣಕ್ಕಾಗಿ ಸಿದ್ಧಪಡಿಸಲಾಗಿದ್ದು, ಹಗರಣಕ್ಕೆ ಮಾತ್ರ ಸಂಪೂರ್ಣ ನೀತಿ ಸಿದ್ಧವಾಗಿದೆ ಎಂದು ಆರೋಪಿಸಿದರು. ಇದೀಗಾ ಪಕ್ಷದ ಹಗರಣ ಬಯಲಿಗೆ ಬಂದಿದ್ದು, ಹಗರಣದಲ್ಲಿ ಸಿಬಿಐ ಒಂಬತ್ತನೆ ಆರೋಪಿ ಎಂದು ಹೆಸರಿಸಿರುವ ಅಮಿತ್ ಅರೋರಾ ಈ ಹಗರಣವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತಾ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಅಲ್ಲದೇ ಹಗರಣದ ಹಣವನ್ನು ಗೋವಾ ಮತ್ತು ಪಂಜಾಬ್ ಚುನಾವಣೆಗಳಲ್ಲಿ ಬಳಸಲಾಗಿದೆ. ಅಬಕಾರಿ ಹೊಸ ನೀತಿ ಅಡಿಯಲ್ಲಿ ಟೆಂಡರ್​ ಪಡೆಯಲು ಆಪ್​ ಸರ್ಕಾರ ಕನಿಷ್ಠ 5 ಕೋಟಿ ಶುಲ್ಕವನ್ನು ನಿಗದಿ ಪಡಿಸಿದ್ದು, ಸಣ್ಣ ಉದ್ಯಮಿಗಳು ಟೆಂಡರ್​ನಲ್ಲಿ ಭಾಗವಹಿಸದಂತೆ ಈ ನೀತಿಯನ್ನು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ.

ಬಿಜೆಪಿ ಆರೋಪಕ್ಕೆ ಸಿಸೋಡಿಯಾ ಸವಾಲು: ದೆಹಲಿಯಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣದ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ಸ್ಟಿಂಗ್ ವಿಡಿಯೋ ಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ತನಿಖಾ ದಳ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಕುಟುಕು ವಿಡಿಯೋ ನಿಜವಾಗಿದ್ದರೆ ಬಂಧನಕ್ಕೂ ಸಿದ್ಧ ಎಂದು ಘೋಷಿಸಿದ್ದಾರೆ.

ಈ ಸಂಬಂಧ ಸಿಬಿಐ ತ್ವರಿತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಸಿಬಿಐ ಕಸ್ಟಡಿಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೆಹಲಿ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿರುವ ಯೋಜಿತ ಸಂಚು ಎಂಬುದು ಎಲ್ಲರಿಗೂ ಗೊತ್ತಾಗಲಿದೆ ಎಂದು ಸಿಸೋಡಿಯಾ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.

ಬಿಜೆಪಿ ಬಿಡುಗಡೆ ಮಾಡಿರುವ ಸ್ಟಿಂಗ್​ ಆಪರೇಷನ್​ ವಿಡಿಯೋವನ್ನು ಸಿಬಿಐಗೆ ನೀಡಬೇಕು. ಸಿಬಿಐ ನಾಲ್ಕು ದಿನಗಳಲ್ಲಿ ತನಿಖೆ ನಡೆಸಿ ನನ್ನನ್ನು ಬಂಧಿಸಬೇಕು. ಈ ಕುಟುಕು ಕಾರ್ಯಾಚರಣೆ ನಿಜವಾಗಿದ್ದರೆ ಸೋಮವಾರದೊಳಗೆ ನನ್ನನ್ನು ಬಂಧಿಸಿ. ಇಲ್ಲದಿದ್ದರೆ ಇದು ಸರ್ಕಾರದ ವಿರುದ್ಧ ನಡೆಸಿರುವ ಸಂಚು ಎಂದು ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮನೀಶ್​ ಸಿಸೋಡಿಯಾಗೆ ಸೇರಿದ ಲಾಕರ್​ ಪತ್ತೆ.. ಸಿಬಿಐಯಿಂದ ಶೋಧ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.