ETV Bharat / bharat

ಜಾತಿ ಗಣತಿ ತಡೆ ವಿಚಾರ.. ಶೀಘ್ರ ವಿಚಾರಣೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಬಿಹಾರ ಸರ್ಕಾರ

author img

By

Published : May 5, 2023, 8:04 PM IST

ಪಾಟ್ನಾ ಹೈಕೋರ್ಟ್
ಪಾಟ್ನಾ ಹೈಕೋರ್ಟ್

ಪಾಟ್ನಾ ಹೈಕೋರ್ಟ್ ಗುರುವಾರ ಬಿಹಾರದಲ್ಲಿ ಜಾತಿ ಗಣತಿ ಕಾರ್ಯಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಪಾಟ್ನಾ(ಬಿಹಾರ) : ಜಾತಿ ಗಣತಿ ಕುರಿತು ಶೀಘ್ರ ವಿಚಾರಣೆ ನಡೆಸುವಂತೆ ಬಿಹಾರ ಸರ್ಕಾರ ಶುಕ್ರವಾರ ಪಾಟ್ನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜಾತಿ ಗಣತಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದಲೇ ವಿಚಾರಣೆ ನಡೆಸುವಂತೆ ಸರ್ಕಾರ ಈ ಅರ್ಜಿಯನ್ನು ಸಲ್ಲಿಸಿದೆ. ಗುರುವಾರ ಪಾಟ್ನಾ ಹೈಕೋರ್ಟ್, ತನ್ನ ಮಧ್ಯಂತರ ಆದೇಶದಲ್ಲಿ ಮುಂದಿನ ವಿಚಾರಣೆಯನ್ನ ಜುಲೈ 3 ಕ್ಕೆ ನಿಗದಿ ಮಾಡಿತ್ತು. ಅಲ್ಲಿವರೆಗೂ ಜಾತಿ ಗಣತಿಗೆ ತಕ್ಷಣದ ತಡೆಯಾಜ್ಞೆಯನ್ನು ನೀಡಿತ್ತು.

ಹೈಕೋರ್ಟ್ ತಡೆಯಾಜ್ಞೆ : ಅದರ ನಂತರ ಇಂದು ಬಿಹಾರ ಸರ್ಕಾರದ ಪರವಾಗಿ ಅದರ ಆರಂಭಿಕ ವಿಚಾರಣೆಗಾಗಿ ಮುಖ್ಯ ನ್ಯಾಯಾಧೀಶರಿಗೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಸಾಮಾನ್ಯ ಆಡಳಿತದ ಉಪ ಕಾರ್ಯದರ್ಶಿ ರಜನೀಶ್ ಕುಮಾರ್ ಅಫಿಡವಿಟ್ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಎರಡು ಹಂತಗಳಲ್ಲಿ ಜಾತಿ ಗಣತಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಮನೆಗಳನ್ನು ಗಣತಿ ಮಾಡಿ ವಿಶಿಷ್ಟ ಸಂಖ್ಯೆಗಳನ್ನು ನೀಡಲಾಗಿದೆ. ಎರಡನೇ ಹಂತದ ಸಮೀಕ್ಷೆ ಏಪ್ರಿಲ್ 15ರಿಂದ ಆರಂಭವಾಗಿದೆ. ಮೇ 15ರೊಳಗೆ ಗಣತಿ ಪೂರ್ಣಗೊಳ್ಳಬೇಕಿತ್ತು. ಇದೀಗ ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ನಿಷೇಧ ಹೇರಿದೆ. ಜುಲೈ 3 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.

ಇಲ್ಲಿಯವರೆಗೂ ನಡೆದಿದ್ದೇನು?: ಬಿಹಾರದಲ್ಲಿ ಕಳೆದ ವರ್ಷವಷ್ಟೇ ಜಾತಿ ಗಣತಿ ಆರಂಭಿಸಲು ನಿತೀಶ್ ಕುಮಾರ್ ಸರ್ಕಾರ ನಿರ್ಧರಿಸಿತ್ತು. ಜೂನ್ 9, 2022 ರಂದು ಬಿಹಾರ ಸರ್ಕಾರವು ಜಾತಿ ಆಧಾರಿತ ಗಣತಿಯನ್ನು ನಡೆಸಲು ಅಧಿಸೂಚನೆ ಹೊರಡಿಸಿತ್ತು. ಗಣತಿಗೆ 500 ಕೋಟಿಗೆ ಸರ್ಕಾರ ಸಂಪುಟದಲ್ಲಿ ಅನುಮೋದನೆ ನೀಡಿದೆ. ಜಾತಿ ಆಧಾರಿತ ಗಣತಿ ಪ್ರಕ್ರಿಯೆಯು 7 ಜನವರಿ 2023 ರಿಂದ ಪ್ರಾರಂಭವಾಯಿತು. ಎರಡನೇ ಹಂತದ ಕಾಮಗಾರಿ ಏಪ್ರಿಲ್ 15ರಿಂದ ಆರಂಭವಾಗಿದೆ. ಮೇ 15ರೊಳಗೆ ಪೂರ್ಣಗೊಳ್ಳಬೇಕಿತ್ತು.

ಇದನ್ನೂ ಓದಿ: ಜಾತಿ ಜನಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್‌.. ನಾಳೆ ಮಧ್ಯಂತರ ಆದೇಶ

ಜಾತಿ ಗಣತಿ ತಡೆಗೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದ್ದವು. ಜನವರಿ 20, 2023 ರಂದು ಸುಪ್ರೀಂ ಕೋರ್ಟ್​ ಅರ್ಜಿಯ ವಿಚಾರಣೆಯನ್ನು ನಿರಾಕರಿಸಿತು. ಅಲ್ಲದೇ, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಜಾತಿ ಗಣತಿಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಎರಡು ದಿನಗಳಲ್ಲಿ ತೀರ್ಪು ನೀಡುವಂತೆ ಪಾಟ್ನಾ ಹೈಕೋರ್ಟ್​ಗೆ ಸೂಚಿಸಿತ್ತು. ಪಾಟ್ನಾ ಹೈಕೋರ್ಟ್ 2 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಗುರುವಾರ ತೀರ್ಪು ನೀಡಿದೆ. ಆದರೆ ಈ ಮಧ್ಯೆ ಎರಡನೇ ಹಂತದ ಜಾತಿ ಗಣತಿ ಕಾರ್ಯ ಅರ್ಧದಷ್ಟು ಮುಗಿದಿದೆ. 215 ಜಾತಿಗಳನ್ನು ಕೋಡ್ ನೀಡಿ ಗಣತಿ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಜಾತಿಗಣತಿಗೆ ನಿರಾಕರಿಸಿತ್ತು: ಬಿಹಾರದಲ್ಲಿ ಎರಡನೇ ಹಂತದ ಜಾತಿ ಆಧಾರಿತ ಜನಗಣತಿ ಪ್ರಾರಂಭವಾಗಿದೆ. ಆದರೆ ಅದಕ್ಕೆ ವಿರೋಧವೂ ಮುಂದುವರೆದಿದೆ. ಒಂದೆಡೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ಲಾಭದ ಲೆಕ್ಕಾಚಾರದಲ್ಲಿದೆ. ಕಳೆದ ವರ್ಷ ಬಿಹಾರದ ರಾಜಕೀಯ ಪಕ್ಷಗಳ ನಿಯೋಗವು ಜಾತಿ ಗಣತಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಜಾತಿಗಣತಿಗೆ ನಿರಾಕರಿಸಿತ್ತು. ನಂತರ ಇದೀಗ ಬಿಹಾರ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ 500 ಕೋಟಿ ರೂ ಖರ್ಚು ಮಾಡಿ ಜಾತಿ ಗಣತಿ ನಡೆಸುತ್ತಿದೆ.

ಇದನ್ನೂ ಓದಿ : ಜುಲೈ 3 ರವರೆಗೆ ಜಾತಿ ಗಣತಿಗೆ ಮಧ್ಯಂತರ ತಡೆ: ಪಾಟ್ನಾ ಹೈಕೋರ್ಟ್ ಆದೇಶ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.