ETV Bharat / bharat

ದೆಹಲಿಗೆ ದ್ರಾವಿಡ ನಾಡಿನ ಸಿಎಂ : ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರ ಹೊಮ್ಮುತ್ತಿದ್ದಾರೆಯೇ ಎಂಕೆ ಸ್ಟಾಲಿನ್!?

author img

By

Published : Apr 5, 2022, 7:04 PM IST

ದೆಹಲಿ ಪ್ರವಾಸಕ್ಕೆ ಕೆಲವು ದಿನಗಳ ಮೊದಲು, ಸ್ಟಾಲಿನ್ ಅವರು ಡಿಎಂಕೆ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ, ಡಿಎಂಕೆ ಮತ್ತು ಪಕ್ಷದ ನೀತಿಗಳನ್ನು ಅನುಷ್ಟಾನಗೊಳಿಸುವ ದ್ರಾವಿಡ ಮಾದರಿಯು ರಾಷ್ಟ್ರ ರಾಜಕಾರಣದಲ್ಲಿ ಅನಿವಾರ್ಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿಕೆ ನೀಡಿದ್ದರು..

ಎಂಕೆ ಸ್ಟಾಲಿನ್ ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರಹೊಮ್ಮುತ್ತಿದ್ದಾರೆಯೇ?
ಎಂಕೆ ಸ್ಟಾಲಿನ್ ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರಹೊಮ್ಮುತ್ತಿದ್ದಾರೆಯೇ?

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಇತ್ತೀಚಿನ ರಾಷ್ಟ್ರ ರಾಜಧಾನಿಯ ಭೇಟಿ ರಾಜಕೀಯ ಮಹತ್ವ ಪಡೆದಿದೆ. ಡಿಎಂಕೆಯ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳ ಜೊತೆಗೆ, ಡಿಎಂಕೆ ಮುಖ್ಯಸ್ಥರನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪ್ರಾಬಲ್ಯದ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಾಮರ್ಥ್ಯವಿರುವ ನಾಯಕರಾಗಿ ನೋಡಲಾಗುತ್ತಿದೆ. ಇದರ ಬೆನ್ನಲ್ಲೇ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಿದ್ದಾರೆ ಸ್ಟಾಲಿನ್.

ಹೊಸ ಅಧ್ಯಾಯದತ್ತ ಸ್ಟಾಲಿನ್ : ರಾಷ್ಟ್ರೀಯ ರಾಜಕಾರಣದತ್ತ ತಮ್ಮ ಗಮನವನ್ನು ಹರಿಸಿರುವ ಸ್ಟಾಲಿನ್, ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಹೊಸ ಅಧ್ಯಾಯವನ್ನು ರಚಿಸಲು ಆರಂಭಿಕ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರ ಇತ್ತೀಚಿನ ರಾಷ್ಟ್ರ ರಾಜಧಾನಿ ಪ್ರವಾಸದಲ್ಲಿ ಅವರು ವಿವಿಧ ಪಕ್ಷಗಳ ವ್ಯಾಪಕ ಶ್ರೇಣಿಯ ನಾಯಕರೊಂದಿಗೆ ತೊಡಗಿಸಿಕೊಂಡಿರುವುದು ಇದಕ್ಕೆ ಪುರಾವೆಯಾಗಿ ಕಂಡು ಬಂದಿದೆ. ಡಿಎಂಕೆ ರಾಷ್ಟ್ರೀಯ ರಂಗದಲ್ಲಿ ತನಗಾಗಿ ಒಂದು ಸ್ಥಳವನ್ನು ನಿರ್ಮಾಣ ಮಾಡಿಕೊಳ್ಳಲು ಉತ್ಸುಕವಾಗಿದೆ. ಕಳೆದ ವಾರ ದೆಹಲಿಯಲ್ಲಿ ಡಿಎಂಕೆ ಪಕ್ಷದ ಕಚೇರಿ ಉದ್ಘಾಟನೆಯಲ್ಲಿ ವಿವಿಧ ವಿಭಾಗದ ನಾಯಕರು ಭಾಗವಹಿಸಿದ್ದು, ದ್ರಾವಿಡ ಪ್ರಮುಖರ ಪ್ರಾಮುಖ್ಯತೆಯನ್ನು ಅದು ಸೂಚಿಸಿದೆ.

ಸೋನಿಯಾಗಾಂಧಿ ಭೇಟಿ
ಸೋನಿಯಾ ಗಾಂಧಿ ಭೇಟಿ ಮಾಡಿರುವ ಸ್ಟಾಲಿನ್

ದ್ರಾವಿಡರ ಅಭಿವ್ಯಕ್ತಿ : ದೆಹಲಿ ಪ್ರವಾಸಕ್ಕೆ ಕೆಲವು ದಿನಗಳ ಮೊದಲು, ಸ್ಟಾಲಿನ್ ಅವರು ಡಿಎಂಕೆ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ, ಡಿಎಂಕೆ ಮತ್ತು ಪಕ್ಷದ ನೀತಿಗಳನ್ನು ಅನುಷ್ಟಾನಗೊಳಿಸುವ ದ್ರಾವಿಡ ಮಾದರಿಯು ರಾಷ್ಟ್ರ ರಾಜಕಾರಣದಲ್ಲಿ ಅನಿವಾರ್ಯ ಪಾತ್ರವನ್ನು ವಹಿಸುತ್ತದೆ. 'ಅಣ್ಣಾ-ಕಲೈಂಜರ್ ಅರಿವಾಲಯಂ' ದ್ರಾವಿಡರ ಅಭಿವ್ಯಕ್ತಿಯಾಗಿದೆ.

ಪಕ್ಷದ ಕಾರ್ಯಕರ್ತರ ಭಾವನಾತ್ಮಕ ಬಾಂಧವ್ಯದ ಜೊತೆಗೆ ಸಿದ್ಧಾಂತಗಳು ಭಾರತದ ಇತಿಹಾಸವನ್ನು ದಕ್ಷಿಣದಿಂದ ಬರೆಯಬೇಕು ಎಂದು ಅನೇಕ ಇತಿಹಾಸಕಾರರು ಸತತವಾಗಿ ಒತ್ತಾಯಿಸಿದ್ದಾರೆ. ಅದು 'ಅಣ್ಣಾ-ಕಲೈಂಜರ್ ಅರಿವಾಲಯಂ'ನೊಂದಿಗೆ ಪ್ರಾರಂಭವಾಗಿದೆ ಎಂದು ಉಲ್ಲೇಖಿಸಿದ್ದರು.

ಅರವಿಂದ ಕೇಜ್ರಿವಾಲ್​ ಭೇಟಿ
ಅರವಿಂದ ಕೇಜ್ರಿವಾಲ್​ ಜತೆಗೆ ಸ್ಟಾಲಿನ್

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರ ಮಂತ್ರಿಗಳೊಂದಿಗಿನ ಅವರ ಅಧಿಕೃತ ಭೇಟಿ ಹೊರತಾಗಿ, ಅವರು ಸೋನಿಯಾ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಇತರ ವಿರೋಧ ಪಕ್ಷದ ದಿಗ್ಗಜರನ್ನೂ ಭೇಟಿ ಮಾಡಿದ್ದಾರೆ.

ಡಿಎಂಕೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಬಿಜು ಜನತಾ ದಳದ ನಾಯಕರು ಉಪಸ್ಥಿತರಿದ್ದರು. ಹಾಗೆ ದಳದ ನಾಯಕ ಅಮರ್ ಪಟ್ನಾ ಮತ್ತು ತೆಲುಗು ದೇಶಂ ಪಕ್ಷದ ಸಂಸದ ರಾಮಮೋಹನ್ ನಾಯ್ಡು ಸಹ ಇದ್ದರು.

ಇದನ್ನೂ ಓದಿ: ಪರೀಕ್ಷಾ ಕೊಠಡಿಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿಯ ಖತರ್ನಾಕ್​ ಐಡಿಯಾ: ಅಧಿಕಾರಿಗಳೇ ಬೆಚ್ಚಿಬಿದ್ರು!

ಈ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಹೊರತುಪಡಿಸಿ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷವನ್ನು ರಚಿಸಲು ಪ್ರಯತ್ನಿಸಿದ್ದರು. ಆದರೆ, ಅವರು ಯಶಸ್ವಿಯಾಗಲಿಲ್ಲ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನಿಂದ ಹೊರಗುಳಿಯುವ ಪ್ರಯತ್ನವನ್ನು ಟೀಕಿಸಿದ ಶಿವಸೇನೆ, ಇದು ಬಿಜೆಪಿಗೆ ಮಾತ್ರ ಅನುಕೂಲವಾಗಲಿದೆ ಎಂದು ಹೇಳಿತ್ತು. ಹಾಗೆ ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ವಿರೋಧಿಸದಿದ್ದರೆ ಬಿಜೆಪಿಗೆ ಲಾಭವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದರು.

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಮೊದಲ ಉಪಕ್ರಮ : ಸ್ಟಾಲಿನ್ ಅವರು ಮೋದಿಯವರಿಗಿಂತ ಭಿನ್ನವಾದ ರಾಜಕೀಯ ದೃಷ್ಟಿ ಹೊಂದಿರುವ ಪ್ರಬಲ ನಾಯಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಕಳೆದ ತಿಂಗಳು, ಚೆನ್ನೈನಲ್ಲಿ ನಡೆದ ಸ್ಟಾಲಿನ್ ಅವರ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಭಾಗವಹಿಸಿದ್ದರು. ಇದು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಮೊದಲ ಉಪಕ್ರಮವೆಂದೇ ಪರಿಗಣಿಸಲಾಗಿದೆ.

ಸ್ಟಾಲಿನ್ ಅವರ ದೆಹಲಿ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ಹಿರಿಯ ಕಾರ್ಯಕಾರಿಣಿ, ಸ್ಟಾಲಿನ್ ಅವರ ರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ ಮತ್ತು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಡಿಎಂಕೆ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ವಿಶ್ಲೇಷಕ ರವೀಂದ್ರನ್ ದುರೈಸಾಮಿ ಪ್ರಕಾರ, ತಮಿಳುನಾಡು ರಾಜಕೀಯವು ಇತರ ರಾಜ್ಯಗಳ ರಾಜಕೀಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಆದ್ದರಿಂದ ಡಿಎಂಕೆ ನಾಯಕ ಸ್ಟಾಲಿನ್‌ಗೆ ರಾಷ್ಟ್ರಮಟ್ಟದ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಒಗ್ಗೂಡಿಸುವುದು ಸವಾಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.