ETV Bharat / bharat

ಲಾಲು ಪ್ರಸಾದ್ ಯಾದವ್ 'ಸಾಮಾಜಿಕ ನ್ಯಾಯದ ಅಚಲ ಯೋಧ': ಸಿಎಂ ಸ್ಟಾಲಿನ್ ಶ್ಲಾಘನೆ

author img

By

Published : Jun 11, 2023, 2:30 PM IST

ಲಾಲು ಪ್ರಸಾದ್ ಯಾದವ್ ಅವರನ್ನು 'ಸಾಮಾಜಿಕ ನ್ಯಾಯದ ಅಚಲ ಯೋಧ' ಎಂದು ಸ್ಟಾಲಿನ್ ಶ್ಲಾಘಿಸಿದ್ದಾರೆ.

Lalu Prasad and Stalin
ಲಾಲು ಪ್ರಸಾದ್ ಯಾದವ್ ,ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಮತ್ತು ಅವರನ್ನು "ಸಾಮಾಜಿಕ ನ್ಯಾಯದ ಅಚಲ ಯೋಧ" ಎಂದು ಬಣ್ಣಿಸಿದ್ದಾರೆ.

ಇಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ 76ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಿಎಂ ಸ್ಟಾಲಿನ್ "ಹಿರಿಯ ರಾಜಕೀಯ ನಾಯಕ ಮತ್ತು ಆರ್‌ಜೆಡಿ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಜನ್ಮದಿನದ ಶುಭಾಶಯಗಳು" ಎಂದು ಟ್ವೀಟ್​ ಮಾಡಿದ್ದಾರೆ.

  • Birthday Greetings to veteran political leader and @RJDforIndia National President Thiru @laluprasadrjd ji.

    The emphasis he gave for 'dignity' (izzat), makes his politics very close to that of our Self-Respect movement helmed by Thanthai Periyar. Be it the reservation for the…

    — M.K.Stalin (@mkstalin) June 11, 2023 " class="align-text-top noRightClick twitterSection" data=" ">

ಘನತೆಗೆ ಅವರು ನೀಡಿದ ಒತ್ತು, ಅವರ ರಾಜಕೀಯವನ್ನು ತಂತೈ ಪೆರಿಯಾರ್ ನೇತೃತ್ವದ ನಮ್ಮ ಸ್ವಾಭಿಮಾನದ ಚಳುವಳಿಗೆ ಹತ್ತಿರವಾಗಿಸುತ್ತದೆ. ಅದು ಹಿಂದುಳಿದ ವರ್ಗಗಳಿಗೆ ಮೀಸಲಾತಿಯಾಗಿರಲಿ ಅಥವಾ ಜಾತಿ ಗಣತಿಗಾಗಿ ಧ್ವನಿ ಎತ್ತುವ ಅಥವಾ ಜಾತ್ಯತೀತತೆಯನ್ನು ಎತ್ತಿ ಹಿಡಿಯುವ, ಲಾಲು ಪ್ರಸಾದ್ ಅವರ ಸ್ಥಿರ ನಿಲುವು ಅವರನ್ನು ಸಾಮಾಜಿಕ ನ್ಯಾಯದ ಅಚಲ ಯೋಧನನ್ನಾಗಿ ಮಾಡುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಯಾದವ್ ಅವರು ಉತ್ತರ ಭಾರತದಲ್ಲಿ ಮಂಡಲ್ ರಾಜಕೀಯವನ್ನು ಬಲಪಡಿಸಲು ಜನರ ಸೇವೆಯಲ್ಲಿ ಇನ್ನೂ ಹಲವು ವರ್ಷಗಳ ಸಕ್ರಿಯವಾಗಿರಲಿ ಎಂದು ಸ್ಟಾಲಿನ್ ಹಾರೈಸಿದರು.

ಲಾಲು ಪ್ರಸಾದ್ ಯಾದವ್ ಜೀವನ ಚರಿತ್ರೆ: ಲಾಲು ಪ್ರಸಾದ್ ಯಾದವ್ ರಾಜ್ಯ ಮತ್ತು ಸಂಸತ್ತಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಲೋಕಸಭೆಯ ಮಾಜಿ ಸಂಸದ ಮತ್ತು ಭಾರತದ ಬಿಹಾರದ ರಾಜಕೀಯ ಪಕ್ಷವಾದ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷರಾಗಿದ್ದಾರೆ.

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಫುಲ್ವಾರಿಯಾ ಪ್ರದೇಶದಲ್ಲಿ 11 ಜೂನ್ 1948 ರಂದು ಕುಂದನ್ ರೈ ಅವರ ಮಗನಾಗಿ ಜನಿಸಿದರು. ಉನ್ನತ ಶಿಕ್ಷಣಕ್ಕಾಗಿ ಪಾಟ್ನಾಗೆ ತೆರಳುವ ಮೊದಲು ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡಿದರು.ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ರಾಜಕೀಯ ಜೀವನ: ಯಾದವ್ ಅವರು ಕಾಲೇಜಿನಲ್ಲಿದ್ದಾಗ ರಾಜಕೀಯದತ್ತ ಮೊದಲ ಹೆಜ್ಜೆ ಇಟ್ಟರು. 1970 ರಲ್ಲಿ, ಅವರು ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (PUSU) ಅಧ್ಯಕ್ಷರಾದರು.

ಲೋಕಸಭೆಯ ಅತ್ಯಂತ ಕಿರಿಯ ಸದಸ್ಯ: ಕೇವಲ 29 ನೇ ವಯಸ್ಸಿನಲ್ಲಿ, ಅವರು ಜನತಾ ಪಕ್ಷದ ಟಿಕೆಟ್‌ನಲ್ಲಿ 9 ನೇ ಲೋಕಸಭೆಗೆ ಆಯ್ಕೆಯಾದಾಗ ಲೋಕಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರಾದರು. 1980ರಲ್ಲಿ, ಅವರು ಬಿಹಾರ ರಾಜ್ಯ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದರು ಮತ್ತುಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC)ಅಭ್ಯರ್ಥಿಯನ್ನು ಸೋಲಿಸಿದರು. 1985 ರಲ್ಲಿ, ಅವರು ಸ್ಥಾನಕ್ಕೆ ಮರು ಆಯ್ಕೆಯಾದರು.

ಅಲ್ಪಸಂಖ್ಯಾತರ ನಾಯಕ: ಅವರು ಕೆಳಜಾತಿಗಳು ಮತ್ತು ಇತರ ಅಲ್ಪಸಂಖ್ಯಾತರ ನಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಕೆಳಹಂತದ ಹಿಂದೂ ಜಾತಿಗಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ಬೆಂಬಲದೊಂದಿಗೆ ಯಾದವ್ ಬಿಹಾರದಲ್ಲಿ ಜನಪ್ರಿಯ ನಾಯಕರಾದರು.

ಬಿಹಾರದ ಮುಖ್ಯಮಂತ್ರಿ: ಲಾಲು ಪ್ರಸಾದ್ ಅವರು 2 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲು 10 ಮಾರ್ಚ್ 1990 ರಿಂದ 3 ಏಪ್ರಿಲ್ 1995 ರವರೆಗೆ ಐದು ವರ್ಷಗಳ ಅವಧಿಗೆ. ಬಳಿಕ ಅವರು 4 ಏಪ್ರಿಲ್ 1995 ರಿಂದ 25 ಜುಲೈ 1997 ರವರೆಗೆ ಮೂರು ವರ್ಷಗಳ ಅವಧಿಗೆ ಎರಡನೇ ಬಾರಿ ಬಿಹಾರದ ಸಿಎಂ ಆಗಿ ಆಯ್ಕೆಯಾದರು.

ಆರ್‌ಜೆಡಿ ರಚನೆ: 1996 ರಲ್ಲಿ ಮೇವು ಹಗರಣದ ಬಗ್ಗೆ ಜನತಾ ದಳದಲ್ಲಿ ನಾಯಕತ್ವದ ಬಂಡಾಯ ಪ್ರಾರಂಭವಾಯಿತು. ಸಿಎಂ ಸ್ಥಾನದಿಂದ ಕೆಳಗಿಳಿಯಲು ಬಲವಾದ ಒತ್ತಡದ ಬಳಿಕ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರು ಜುಲೈ 1997 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಯಾದವ್ ನಂತರ ಜನತಾ ದಳದೊಂದಿಗೆ ಸಂಬಂಧವನ್ನು ಮುರಿದು ತಮ್ಮದೇ ಆದ ಪಕ್ಷವಾದ ರಾಷ್ಟ್ರೀಯ ಜನತಾ ದಳ (RJD) ಅನ್ನು ಸ್ಥಾಪಿಸಿದರು. 1998 ರಲ್ಲಿ ಅವರು ಲೋಕಸಭೆಗೆ ಮರು ಆಯ್ಕೆಯಾದರು.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐನಿಂದ ಲಾಲು ಯಾದವ್ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.