ETV Bharat / bharat

ಪತ್ರಕರ್ತರೂ ಕೂಡಾ ಮುಂಚೂಣಿ ಕಾರ್ಯಕರ್ತರು: ಅಧಿಕಾರ ಸ್ವೀಕಾರಕ್ಕೂ ಮುನ್ನ ಸ್ಟಾಲಿನ್‌ ಘೋಷಣೆ

author img

By

Published : May 4, 2021, 10:50 AM IST

ಒಡಿಶಾ, ಮಧ್ಯಪ್ರದೇಶ, ಬಿಹಾರದ ಬಳಿಕ ಇದೀಗ ತಮಿಳುನಾಡಿನಲ್ಲೂ ಪತ್ರಕರ್ತರನ್ನ​ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಲಾಗಿದೆ.

Stalin declares Journalists as frontline workers in Tamil Nadu
ಎಂ ಕೆ ಸ್ಟಾಲಿನ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಡಿಎಂಕೆ ಹೊರಹೊಮ್ಮಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಪಕ್ಷದ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಪತ್ರಕರ್ತರು ಕೂಡ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದ್ದಾರೆ.

ಯಾರೆಲ್ಲಾ ಮುಂಚೂಣಿ ಕಾರ್ಯಕರ್ತರು?

ಕೋವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್​ಗಳು, ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರನ್ನು ಮಾತ್ರ ಈವರೆಗೆ ಸರ್ಕಾರ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿದೆ.

ಘೋಷಣೆಯ ಪ್ರಾಮುಖ್ಯತೆ ಏನು?

ಆದರೆ ಒಡಿಶಾ, ಮಧ್ಯಪ್ರದೇಶ, ಬಿಹಾರ ಹಾಗೂ ಇದೀಗ ತಮಿಳುನಾಡು ಸರ್ಕಾರ ತಮ್ಮ ರಾಜ್ಯಗಳಲ್ಲಿನ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದ್ದು, ವಿಮೆ, ವ್ಯಾಕ್ಸಿನೇಷನ್​ಗೆ ಮೊದಲ ಆದ್ಯತೆ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಪತ್ರಕರ್ತರು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಸರಳವಾಗಿಯೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತೆ : ಡಿಎಂಕೆ ಚೀಫ್ ಸ್ಟಾಲಿನ್

ಪತ್ರಕರ್ತರೇಕೆ ಮುಂಚೂಣಿ ಕಾರ್ಯಕರ್ತರು?

"ಮಳೆ, ಬಿಸಿಲು, ಪ್ರವಾಹ, ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ನಡುವೆಯೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುದ್ದಿ ಪತ್ರಿಕೆಗಳು, ದೃಶ್ಯ ಮತ್ತು ಶ್ರವಣ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಮಾಧ್ಯಮ ವೃತ್ತಿಪರರನ್ನು ತಮಿಳುನಾಡಿನಲ್ಲಿ ಮುಂಚೂಣಿ ನೌಕರರು ಎಂದು ಪರಿಗಣಿಸಲಾಗುತ್ತದೆ" ಎಂದು ಸ್ಟಾಲಿನ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್​ ಹೋರಾಟದಲ್ಲಿ ಪತ್ರಕರ್ತರೂ ವಾರಿಯರ್ಸ್.. ಮಧ್ಯಪ್ರದೇಶ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.