ETV Bharat / bharat

ಬಿಜೆಪಿ ವಾಷಿಂಗ್ ಮಷಿನ್‌ನಲ್ಲಿ ಭ್ರಷ್ಟಾಚಾರದ ಕಲೆ ತೊಳೆಯುತ್ತೆ: ಬಿಹಾರದ ಡಿಸಿಎಂ ತೇಜಸ್ವಿ ಯಾದವ್

author img

By

Published : Jul 11, 2023, 9:46 PM IST

ಉದ್ಯೋಗಕ್ಕಾಗಿ ಭೂ ಹಗರಣದ ಕುರಿತು ಚಾರ್ಜ್ ಶೀಟ್ ಸಲ್ಲಿಕೆಯಾದಾಗಿನಿಂದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದೆ. ಇದೇ ವೇಳೆ ತೇಜಸ್ವಿ ಯಾದವ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Bihar Politics
ಬಿಜೆಪಿ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟಾಚಾರದ ಕಲೆ ತೊಳೆಯುತ್ತೆ: ಬಿಹಾರದ ಡಿಸಿಎಂ ತೇಜಸ್ವಿ ಯಾದವ್

ಪಾಟ್ನಾ: ''ಬಿಜೆಪಿ ಭ್ರಷ್ಟಾಚಾರದ ಕಳಂಕವನ್ನು ವಾಷಿಂಗ್ ಮೆಷಿನ್​ನಲ್ಲಿ ತೊಳೆಯುತ್ತದೆ'' ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದರು. ''ಪ್ರತಿಪಕ್ಷಗಳ ನಾಯಕರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಭ್ರಷ್ಟರಾಗುತ್ತಾರೆ. ಆದರೆ, ಬಿಜೆಪಿ ಜೊತೆ ಹೋದ ತಕ್ಷಣ ವಾಷಿಂಗ್ ಮಷಿನ್​ನಲ್ಲಿ ತೊಳೆದು ಪ್ರಾಮಾಣಿಕರನ್ನಾಗಿಸುತ್ತಾರೆ'' ಎಂದು ತೀವ್ರ ವಾಗ್ದಾಳಿ ನಡೆಸಿದರು.

"ನನ್ನನ್ನು ಭ್ರಷ್ಟ ಎಂದು ಕರೆಯಲು ನಾನು ಏನು ಅಪರಾಧ ಮಾಡಿದ್ದೇನೆ. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಛಗನ್ ಭುಜಬಲ್ ಮತ್ತು ಅಜಿತ್ ಪವಾರ್ ಅವರನ್ನು ಹಾರ ಹಾಕಿ ಸ್ವಾಗತಿಸುತ್ತಿದೆ. ಅವರು ಭ್ರಷ್ಟರಲ್ಲ ಏಕೆಂದರೆ ಬಿಜೆಪಿ ವಾಷಿಂಗ್ ಮಷಿನ್ ಅಲ್ಲವಾ? ಆದರೆ, ಸದ್ಯ ಅವರ ವಾಷಿಂಗ್ ಮಾಡುವ ಪುಡಿ ಖಾಲಿಯಾಗಿದೆ. ಜೊತೆಗೆ ಶೀಘ್ರದಲ್ಲೇ ಅವರ ಉತ್ಪಾದನೆ ನಿಲ್ಲುತ್ತದೆ" ಎಂದು ಚಾಟಿ ಬೀಸಿದರು.

ನನ್ನ ವಿರುದ್ಧದ ಆರೋಪಗಳು ಸುಳ್ಳು: ''ತಮ್ಮ ವಿರುದ್ಧ ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್​ಗೂ ಹಾಗೂ ತನಗೆ ಯಾವುದೇ ಸಂಬಂಧವಿಲ್ಲ. ಈ ವಿಷಯದಲ್ಲಿ ತನ್ನನ್ನು ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ನಾವು ಹೆದರುವುದಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ತೇಜಸ್ವಿ ಅವರು 1989 ರಲ್ಲಿ ಜನಿಸಿದರು. ಈ ವಿಷಯವು 2004-2009 ರ ನಡುವೆ ಇದೆ. ಆ ಸಮಯದಲ್ಲಿ ಅವರು ವಯಸ್ಕರಾಗಿರಲಿಲ್ಲ.

ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ಭಯ: ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್ ಅವರು, ''ದೇಶದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನ ಆರಂಭವಾದಾಗಿನಿಂದಲೂ ಬಿಜೆಪಿಗೆ ಭಯವಿದೆ. ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಏನು ಮಾಡಲು ಆಗುವುದಿಲ್ಲ. ದೇಶದ ಜನತೆ ಈಗ ಅವರನ್ನು ಗುರುತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ತೇಜಸ್ವಿ ಯಾದವ್ ಗರಂ ಆದರು.

ವಿಧಾನಸಭೆಯಲ್ಲಿನ ಗದ್ದಲಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ: ಮುಂಗಾರು ಅಧಿವೇಶನದ ಎರಡನೇ ದಿನ ಪ್ರತಿಪಕ್ಷಗಳ ಗದ್ದಲಕ್ಕೆ ಸಂಬಂಧಿಸಿದಂತೆ ಡಿಸಿಎಂ, ''ಬಿಜೆಪಿ ಶಾಸಕರಿಗೂ ಸದನದ ಕಲಾಪಕ್ಕೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ಚರ್ಚಿಸಲು ಅವರು ಬಯಸುವುದಿಲ್ಲ. ಇದೇ ಕಾರಣಕ್ಕೆ ಪದೇ ಪದೆ ಸದನದ ಕಲಾಪಕ್ಕೆ ಅನಗತ್ಯ ಅಡ್ಡಿಯನ್ನು ಉಂಟು ಮಾಡುತ್ತಿದ್ದಾರೆ ಎಂದರು.

ಶಿಕ್ಷಕರ ಪ್ರತಿಭಟನೆ ಕುರಿತು ತೇಜಸ್ವಿ ಹೇಳಿದ್ದೇನು?: ಶಿಕ್ಷಕರ ಕೈಪಿಡಿಯಲ್ಲಿ ಬಿಜೆಪಿಯವರು ತಪ್ಪು ಮಾತನಾಡುತ್ತಿದ್ದಾರೆ ಎಂದು ತೇಜಸ್ವಿ ಹೇಳಿದ್ದಾರೆ. ಶಿಕ್ಷಕರಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ನಿತೀಶ್ ಅವರೇ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಇದರಲ್ಲಿ ಏನೇ ಆಗಲಿ ಸಿಎಂ ಮಾಡ್ತಾರೆ. ಬಿಜೆಪಿ ಇದನ್ನೇ ದೊಡ್ಡ ವಿಷಯವಾಗಿ ಮಾಡುತ್ತಿದ್ದು, ಅದು ತಪ್ಪು. ನಮ್ಮ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ. ಯುವಕರಿಗೆ ಉದ್ಯೋಗ ನೀಡುವುದು. ಜೊತೆಗೆ ಆರೋಗ್ಯ ಇಲಾಖೆಯಲ್ಲಿಯೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ತೇಜಸ್ವಿ ಯಾದವ್ ರಾಜೀನಾಮೆಗೆ ಬಿಜೆಪಿ ಹಠ: ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಬಿಜೆಪಿ ಹಠ ಹಿಡಿದಿದ್ದು, ತೇಜಸ್ವಿ ಯಾದವ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವವರೆಗೂ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಸೋಮವಾರವೇ ಘೋಷಿಸಿತ್ತು. ಮಂಗಳವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಹೊರಗೆ ಹಾಗೂ ಸದನದೊಳಗೆ ಪ್ರತಿಪಕ್ಷಗಳ ಗದ್ದಲ ಎದ್ದಿತ್ತು.

ಬಿಜೆಪಿ ಮೊದಲು ಸದನದ ಹೊರಗೆ ಗದ್ದಲವನ್ನು ಸೃಷ್ಟಿಸಿತು. ''ನಿತೀಶ್‌ ಕುಮಾರ್‌ಗೆ ನಾಚಿಕೆಯಾಗಬೇಕು, ಆರೋಪಪಟ್ಟಿ ಹೊಂದಿರುವ ಉಪಮುಖ್ಯಮಂತ್ರಿ ಅವರನ್ನು ವಜಾಗೊಳಿಸಬೇಕು'' ಎಂಬ ಘೋಷಣೆಗಳನ್ನು ಕೂಗಿ ಬಹಳ ಹೊತ್ತು ಪ್ರತಿಭಟನೆ ನಡೆಸಲಾಯಿತು. ನಂತರ ಸದನದ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯರು ಬಾವಿಗಿಳಿದು ಗದ್ದಲ ಎಬ್ಬಿಸಿದರು.

ಇದನ್ನೂ ಓದಿ: ಎನ್‌ಸಿಪಿ ಹಿರಿಯ ನಾಯಕ ಛಗನ್ ಭುಜಬಲ್‌ಗೆ ಜೀವ ಬೆದರಿಕೆ ಕರೆ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.