ETV Bharat / bharat

ಹಣಕಾಸಿನ ಬಿಕ್ಕಟ್ಟು: ಎಸ್​ಬಿಐನಿಂದ ಶ್ರೀಲಂಕಾಗೆ ₹7,596 ಕೋಟಿ ಸಾಲ

author img

By

Published : Mar 17, 2022, 9:50 PM IST

ಕಳೆದ ಕೆಲ ತಿಂಗಳಿಂದಲೂ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಇದೀಗ ಹಣಕಾಸಿನ ನೆರವು ನೀಡಿದೆ.

Sri Lanka signs 1 billion USD credit line with India
Sri Lanka signs 1 billion USD credit line with India

ನವದೆಹಲಿ: ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದ ಸಂಕಷ್ಟಕ್ಕೊಳಗಾಗಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 7,596 ಕೋಟಿ ರೂಪಾಯಿ (1 ಬಿಲಿಯನ್​ USD) ಸಾಲ ನೀಡಲು ಮುಂದಾಗಿದೆ. ಇದರಿಂದ ಅಗತ್ಯ ಆಹಾರ, ಔಷಧ ಸೇರಿದಂತೆ ಇತರೆ ಅಗತ್ಯ ವಸ್ತು ಖರೀದಿಗೆ ಬಳಕೆ ಮಾಡಿಕೊಳ್ಳಲಿದೆ.

ಸಾಲ ಒಪ್ಪಂದಕ್ಕಾಗಿ ಎರಡು ದೇಶಗಳು ಇಂದು ಸಹಿ ಹಾಕಿವೆ. ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಎರಡು ದಿನಗಳ ಭಾರತದ ಪ್ರವಾಸದಲ್ಲಿದ್ದು, ಈ ವೇಳೆ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ವಿದೇಶಾಂಗ ಸಚಿವ ಎಸ್​​. ಜೈಶಂಕರ್​​​ ಸೇರಿದಂತೆ ಎಸ್​​ಬಿಐನ ಪ್ರಮುಖ ಅಧಿಕಾರಿಗಳು ಸಭೆ ನಡೆಸಿದರು. ಇದರ ಬೆನ್ನಲ್ಲೇ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇದನ್ನೂ ಓದಿ: ಉಕ್ರೇನ್​​ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ರಾಜಪಕ್ಸೆ ಭೇಟಿ ಮಾಡಿದ್ದು, ಈ ವೇಳೆ ಶ್ರೀಲಂಕಾಗೆ ಭಾರತ ಈ ಹಿಂದಿನಿಂದಲೂ ಆರ್ಥಿಕ ನೆರವು ನೀಡಿರುವುದಕ್ಕೆ ಧನ್ಯವಾದ ತಿಳಿಸಿದ್ದರು. ಈ ಹಿಂದೆ ಕೂಡ ಭಾರತ ಸಿಂಹಳೀಯರಿಗೆ 3,797 ಕೋಟಿ ರೂ. ಸಾಲ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.