ETV Bharat / bharat

Spoken English.. ಉತ್ತರ ಪ್ರದೇಶ ಸರ್ಕಾರಿ ಶಿಕ್ಷಕರಿಗೆ ಕಡ್ಡಾಯ ಸ್ಪೋಕನ್​ ಇಂಗ್ಲಿಷ್​ ತರಬೇತಿ

author img

By

Published : Jun 14, 2023, 3:27 PM IST

ಅನೇಕ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಶಿಕ್ಷಕರಿಗೆ ಇಂಗ್ಲಿಷ್​ ಮಾತನಾಡುವ ಸಾಮರ್ಥ್ಯ ಇಲ್ಲದಿರುವುದರಿಂದ ಶಿಕ್ಷಣ ಇಲಾಖೆ ಈ ತರಬೇತಿ ಕಾರ್ಯಕ್ಕೆ ಮುಂದಾಗಿದೆ.

Spoken English Training Program for Uttar Pradesh Government Teachers
Spoken English Training Program for Uttar Pradesh Government Teachers

ಪ್ರಯಾಗ್​ ರಾಜ್​ (ಉತ್ತರ ಪ್ರದೇಶ): ಇಂದಿನ ದಿನದಲ್ಲಿ ಇಂಗ್ಲಿಷ್​ ಕಲಿಕೆ ಅಗತ್ಯತೆ ಹೆಚ್ಚಾಗಿದೆ. ಆದರೆ, ಬಹುತೇಕ ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮ ಇಂಗ್ಲಿಷ್​ ಮಾತನಾಡುವ ಸಾಮರ್ಥ್ಯ ಹೊಂದಿಲ್ಲ. ಈ ಘಟನೆಗಳು ಅನೇಕ ಬಾರಿ ಬಹಿರಂಗಗೊಂಡಿದ್ದು ಇದೆ. ಇದು ಮಕ್ಕಳ ಕಲಿಕೆ ಮಟ್ಟದಲ್ಲಿ ಕೂಡ ಪ್ರಭಾವ ಬೀರುತ್ತದೆ. ಇದನ್ನು ಮನಗಂಡಿರುವ ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಇದರ ಅನುಸಾರ ಉತ್ತರ ಪ್ರದೇಶದಲ್ಲಿನ 7 ಸಾವಿರ ಸರ್ಕಾರಿ ಮತ್ತು ಅನುದಾನಿನ ಮಾಧ್ಯಮಿಕ ಶಾಲೆಯ 8,500 ಇಂಗ್ಲಿಷ್​ ಶಿಕ್ಷಕರಿಗೆ ಸ್ಪೋಕನ್​ ಇಂಗ್ಲಿಷ್​ ತರಬೇತಿ ನೀಡಲು ಮುಂದಾಗಿದೆ.

ಇಂಗ್ಲಿಷ್​ ಶಿಕ್ಷಕರಾಗಿದ್ದರೂ ಅವರ ಇಂಗ್ಲಿಷ್​ ಮಾತನಾಡುವ ಸಾಮರ್ಥ್ಯ ಕಡಿಮೆ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಪ್ರಯಾಗ್​ ರಾಜ್​ನ​​ ಇಂಗ್ಲಿಷ್​ ಭಾಷಾ ತರಬೇತಿ ಸಂಸ್ಥೆ (ಇಎಲ್​ಟಿಐ) ಮತ್ತು ರಾಜ್ಯದ ಶಿಕ್ಷಣ ಸಚಿವಾಲಯ ದೀಕ್ಷಾ ಪೋರ್ಟಲ್​ನಿಂದ 132 ಮಾಡ್ಯುಲಾ ಕೋರ್ಸ್​​ಗಳ ಮೂಲಕ ಶಿಕ್ಷಕರಿಗೆ ಸ್ಪೋಕನ್​ ಇಂಗ್ಲಿಷ್​ (ಇಂಗ್ಲಿಷ್​ ಮಾತನಾಡುವ) ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕ ವಿಜಯ್​ ಕಿರಣ್​ ಆನಂದ್​ ಈ ಸಂಬಂಧ ಆದೇಶವನ್ನು ಜಾರಿ ಮಾಡಿದ್ದಾರೆ. ಆದೇಶದಲ್ಲಿ ಎಲ್ಲಾ ಜಂಟಿ ನಿರ್ದೇಶಕರು ಮತ್ತು ಶಾಲೆಗಳ ಜಿಲ್ಲಾ ಇನ್ಸ್​ಪೆಕ್ಟರ್​​ (ಡಿಐಒಎಸ್​)ಗಳು ಜೂನ್​ 15ರಿಂದ ಆರಂಭವಾಗಲಿರುವ ಈ ತರಬೇತಿ ಕಾರ್ಯಕ್ರಮದ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ತರಬೇತಿ ಕಡ್ಡಾಯ: ಇಎಲ್​ಟಿಐ ಪ್ರಾಂಶುಪಾಲ ಸ್ಕಂದ ಶುಕ್ಲಾ ತಿಳಿಸುವಂತೆ, ಪ್ರತಿ ಮಾಡ್ಯುಲಾ 10 ನಿಮಿಷ ಇದ್ದು, ಕಡೆಗೆ ಅಸೆಸ್ಮೆಂಟ್​​​ ಪರೀಕ್ಷೆ ಹೊಂದಿರುತ್ತದೆ. ಈ ಅಸೆಸ್ಮೆಂಟ್​​ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದವರಿಗೆ ಮಾಡ್ಯುಲಾ ಪೂರ್ಣಗೊಳಿಸಿದವರು ಸರ್ಟಿಫಿಕೆಟ್​ ಪಡೆಯುವ ಮೂಲಕ ಮುಂದಿನ ಹಂತಕ್ಕೆ ಹೋಗಬಹುದು ಎಂದಿದ್ದಾರೆ.

ಇದರ ಜೊತೆಗೆ ಇಂಗ್ಲಿಷ್​ ಮಾತನಾಡಲು ಉತ್ತೇಜಿಸಲು ಮತ್ತಷ್ಟು ಪ್ರಯೋಗಿಕ ಚಟುವಟಿಕೆಗಳು ಇವೆ. ಈ ಕೋರ್ಸ್​ಗಳಲ್ಲಿ ಫೋನೊಟಿಕ್ಸ್​​, ಇಂಗ್ಲಿಷ್​​​ ಬೇಸಿಕ್​ ಗ್ರಾಮರ್​, ಸಿಂಟೆಕ್ಸ್​​ ಮತ್ತು ಸಾಮಾನ್ಯ ತಪ್ಪುಗಳ ಕುರಿತ ಶಿಕ್ಷಣ ನೀಡಲಾಗುವುದು. ಈ ಕೋರ್ಸ್​​ಗಳನ್ನು ಬ್ರಿಟಿಷ್​ ಪ್ರೊನೊಸಿಯೆಷನ್​ ಆಧಾರದ ಮೇಲೆ ಸಾಮಾನ್ಯ ಭಾರತೀಯ ಇಂಗ್ಲಿಷ್​ ಮೇಲೆ ಅಭಿವೃದ್ಧಿ ಪಡಿಸಲಾಗಿದೆ.

ಈ ಕೋರ್ಸ್​ ಎಲ್ಲಾ ಇಂಗ್ಲಿಷ್​ ಶಿಕ್ಷಕರಿಗೆ ಕಡ್ಡಾಯವಾಗಿದ್ದು, ಪೋರ್ಟಲ್​ನಲ್ಲಿ ನಾಲ್ಕು ತಿಂಗಳ ಕಾಲ ಲಭ್ಯವಾಗಲಿದೆ. ಈ ಹಿನ್ನೆಲೆ ತರಬೇತುದಾರರು ತಮ್ಮ ಇಂಗ್ಲಿಷ್​ ಮಾತನಾಡುವ ಭಾಷೆ ಕೌಶಲ್ಯ ಹೆಚ್ಚಿಸಿಕೊಳ್ಳಲು ಎಷ್ಟು ಬಾರಿಯಾದರೂ ಈ ಕೋರ್ಸ್​ಗಳನ್ನು ಪಡೆಯಬಹುದಾಗಿದೆ ಎಂದು ಪ್ರಧಾನ ಕಾರ್ಯದರ್ಶಿಗಳು ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು, ಶಿಕ್ಷಕರ ಈ ತರಬೇತಿ ಕಾರ್ಯಕ್ರಮದ ಕುರಿತು ಸ್ಥಿತಿಗತಿ ಮತ್ತು ಪ್ರತಿಯೊಬ್ಬ ಶಿಕ್ಷಕರು ಈ ಕೋರ್ಸ್​ ಪೂರ್ಣಗೊಳಿಸಿದ್ದಾರೆ ಎಂಬುದನ್ನು ತಿಳಿಯಲು ಸಂಬಂಧಿತ ಅಧಿಕಾರಿಗಳು ಫೀಲ್ಡ್​ ಆಫೀಸರ್​​ಗಳಿಗೆ ವರದಿ ಸಲ್ಲಿಕೆ ಮಾಡಬೇಕು ಎಂದು ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ಸಿಎಂ ಯೋಗಿ ಟ್ವಿಟರ್ ಖಾತೆಗೆ 2.5 ಕೋಟಿ ಫಾಲೋವರ್ಸ್​: ಈ ಸಾಧನೆ ಮಾಡಿದ ಮೊದಲ ಸಿಎಂ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.