ETV Bharat / bharat

ಒಡಿಶಾದಲ್ಲಿ ಮದುವೆ ಮೆರವಣಿಗೆಗೆ ಟ್ರಕ್ ನುಗ್ಗಿ 6 ಮಂದಿ ದಾರುಣ ಸಾವು: 6 ಜನರ ಸ್ಥಿತಿ ಗಂಭೀರ

author img

By

Published : Jun 28, 2023, 9:10 AM IST

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್​ವೊಂದು ಮದುವೆ ಮೆರವಣಿಗೆಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

accident
ಒಡಿಶಾ ರಸ್ತೆ ಅಪಘಾತ

ಭುವನೇಶ್ವರ, ಒಡಿಶಾ : ಕಿಯೋಂಜಾರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮದುವೆ ಮೆರವಣಿಗೆಯ ಮೇಲೆ ವೇಗವಾಗಿ ಬಂದ ಟ್ರಕ್​ವೊಂದು ಡಿಕ್ಕಿ ಹೊಡೆದಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸತಿಘರ್ ಸಾಹಿ ಬಳಿಯ ಎನ್‌ಎಚ್-20 ರಲ್ಲಿ ಈ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಮಂಗಳವಾರ ತಡರಾತ್ರಿ (ನಸುಕಿನ ಜಾವ 1 ರಿಂದ 1.30 ರ ಸುಮಾರಿಗೆ) ಅಪಘಾತ ಸಂಭವಿಸಿದೆ. ಮದುವೆ ಮೆರವಣಿಗೆಯು ವಧುವಿನ ಸ್ಥಳದ ಮಾರ್ಗವಾಗಿ ಹೋಗುತ್ತಿದ್ದಾಗ, ವೇಗವಾಗಿ ನುಗ್ಗಿ ಬಂದ ಟ್ರಕ್ ಮೆರವಣಿಗೆ ಹೋಗುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಘಟನೆಯಿಂದ 7 ಮಂದಿ ಗಾಯಗೊಂಡಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕಿಯೋಂಜಾರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಕಾಗವಾಡದಲ್ಲಿ ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವ ಸಾವು, 11 ಜನರಿಗೆ ಗಾಯ

ಸತಿಘರ್ ಸಾಹಿ ಮೂಲದ ಕಾರ್ತಿಕ್ ಪಾತ್ರ ಅವರ ಮಗಳಿಗೂ ಹರಿಚಂದನ್‌ಪುರ ಬ್ಲಾಕ್‌ನ ಮನ್‌ಪುರ ಗ್ರಾಮದ ಹಾದಿಬಂಧು ಪಾತ್ರ ಅವರ ಮಗ ಹೇಮಂತ ಪಾತ್ರ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ವಧುವಿನ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿ ಟ್ರಕ್ ಮೆರವಣಿಗೆಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದಾಗ ವರ ಮತ್ತು ವರನ ಕಡೆಯವರು ಡಿಜೆ ಸೌಂಡ್​​ಗೆ ನೃತ್ಯ ಮಾಡುತ್ತಿದ್ದರು. ಸಂಗೀತದೊಂದಿಗೆ ಮುದುವೆ ಮೆರವಣಿಗೆ ಮುಂದೆ ಸಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ : Hit and run: ವಿಜಯನಗರ ಜಿಲ್ಲೆಯಲ್ಲಿ ಹಿಟ್​ ಆ್ಯಂಡ್​ ರನ್​ಗೆ ಇಬ್ಬರು ರೈತರು ಬಲಿ

ಇಬ್ಬರು ರೈತರು ಬಲಿ : ನಿನ್ನೆ ಹಿಟ್ ಆ್ಯಂಡ್​ ರನ್​ಗೆ ಇಬ್ಬರು ರೈತರು ಬಲಿಯಾದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದಿಂದ ಬೆಣ್ಣಿಕಲ್ಲು ರಸ್ತೆ ಮಾರ್ಗಮಧ್ಯೆ ನಡೆದಿತ್ತು. ಕೋಗಳಿ ತಾಂಡಾ ನಿವಾಸಿಗಳಾದ ಟೀಕ್ಯಾ ನಾಯ್ಕ( 51) ಮತ್ತು ನೀಲ್ಯಾ ನಾಯ್ಕ (55) ಮೃತ ರೈತರು. ನಿನ್ನೆ ಬೆಳಗಿನ ಜಾವ ಹೊಲದಲ್ಲಿ ನೀರು ಹಾಯಿಸಲು ಬೈಕ್​ನಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ: ಜೂನ್​ 26 ರಂದು ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇನ್ನುಳಿದ 11 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಸಮೀಪದಲ್ಲಿ ಸಂಭವಿಸಿತ್ತು. ಆಟೋ ಪ್ರಯಾಣಿಕ ವಿನೋದ ಕಾಂಬಳೆ (20) ಮೃತ ವ್ಯಕ್ತಿ. ಉಗಾರ ಗ್ರಾಮದಿಂದ ಐನಾಪುರ ಗ್ರಾಮಕ್ಕೆ ತೆರಳುತಿದ್ದ ಪ್ಯಾಸೆಂಜರ್ ಆಟೋದಲ್ಲಿ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಶ್ರೀಪಾದ ಜಲ್ದೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗವಾಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.