ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್​.. 75 ರ ಆಕೃತಿಯಲ್ಲಿ ಹಾರಾಡಿದ ಜಾಗ್ವಾರ್ಸ್​

author img

By

Published : Jan 26, 2022, 3:34 PM IST

spectacular-flypast

Spectacular fly-past by 75 aircraft in Delhi: ಐದು ರಫೇಲ್​ ಯುದ್ಧ ವಿಮಾನಗಳು 'ವಿನಾಶ್​' ರಚನೆ ಮಾಡಿದರೆ, ಒಂದು ರಫೇಲ್​, ಎರಡು ಜಾಗ್ವಾರ್​ಗಳು ಮತ್ತು ಎರಡು ಮಿಗ್​-29 ಮತ್ತು ಎರಡು SU-30ಎಂಕೆಐ ಯುದ್ಧ ವಿಮಾನಗಳು 'ಬಾಜ್​' ಮಾದರಿ ರಚನೆ ಮಾಡಿದವು.

ನವದೆಹಲಿ: ದೆಹಲಿಯ ರಾಜ್​ಪಥ್​ನಲ್ಲಿ ದೇಶದ ಮಿಲಿಟರಿ ಶಕ್ತಿ ಪ್ರದರ್ಶನ ಎಲ್ಲರ ಮೈಜುಮ್ಮೆನ್ನಿಸಿತು. 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಭಾರತೀಯ ಯುದ್ಧ ವಿಮಾನಗಳು 75 ರ ಆಕೃತಿಯಲ್ಲಿ ವೈಮಾನಿಕ ಪ್ರದರ್ಶನ ನಡೆಸಿದ್ದು ರೋಮಾಂಚನಕಾರಿಯಾಗಿತ್ತು.

ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್​

ಭಾರತೀಯ ವಾಯುಪಡೆಯ 75 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ನಡೆಸಿದ 'ಅದ್ಭುತ ಫ್ಲೈಪಾಸ್ಟ್' ರಾಜ್‌ಪಥ್‌ನಲ್ಲಿ ಸಂಚಲನ ಸೃಷ್ಟಿಸಿದವು.

ವಿಂಟೇಜ್ ಮತ್ತು ಆಧುನಿಕ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಾದ ರಫೇಲ್, ಸುಖೋಯ್, ಜಾಗ್ವಾರ್, Mi-17, ಸಾರಂಗ್, ಅಪಾಚೆ ಮತ್ತು ಡಕೋಟಾ ರಾಹತ್ ಯುದ್ಧ ವಿಮಾನಗಳು ಮೇಘನಾ, ಏಕಲವ್ಯ, ತ್ರಿಶೂಲ್, ತಿರಂಗ, ವಿಜಯ್ ಮತ್ತು ಅಮೃತ್ ಸೇರಿದಂತೆ ವಿವಿಧ ಮಾದರಿಯಲ್ಲಿ ಹಾರಾಟ ನಡೆಸಿ ಅದ್ಭುತ ಪ್ರದರ್ಶನ ನೀಡಿದವು.

ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್​

ಐದು ರಫೇಲ್​ ಯುದ್ಧ ವಿಮಾನಗಳು 'ವಿನಾಶ್​' ರಚನೆ ಮಾಡಿದರೆ, ಒಂದು ರಫೇಲ್​, ಎರಡು ಜಾಗ್ವಾರ್​ಗಳು, ಎರಡು ಮಿಗ್​-29 ಮತ್ತು ಎರಡು ಸು-30ಎಂಕೆಐ ಯುದ್ಧ ವಿಮಾನಗಳು 'ಬಾಜ್​' ಮಾದರಿ ರಚನೆ ಮಾಡಿದವು.

ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್​

ನೌಕಾಪಡೆಯ p-8ಐ ಮತ್ತು ಮಿಗ್​ 29ಕೆ ಗಳು ​'ವರುಣ್​' ಆಕೃತಿಯಲ್ಲಿ ಫ್ಲೈಪಾಸ್ಟ್​ ನಡೆಸಿದವು. ಮೂರು Su-30 MKI ವಿಮಾನಗಳು 'ತ್ರಿಶೂಲ್' ರಚನೆಯಲ್ಲಿ ಹಾರಾಟ ನಡೆಸಿದರೆ, 17 ಜಾಗ್ವಾರ್‌ ವಿಮಾನಗಳು 75 ರ ಆಕೃತಿಯಲ್ಲಿ ಹಾರಾಟ ನಡೆಸಿ ನೆರೆದವರ ಕಣ್ಮನ ಸೆಳೆದವು.

ಇದನ್ನೂ ಓದಿ: 73ನೇ ಗಣರಾಜ್ಯೋತ್ಸವ; ಪರೇಡ್​ನಲ್ಲಿ ಗಮನ ಸೆಳೆದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.