ETV Bharat / bharat

ಮಾದಕ ದ್ರವ್ಯ ವಿರೋಧಿ ಅಭಿಯಾನದ ಲೋಗೋ ಬಿಡುಗಡೆ ಮಾಡಿದ ಸೌರವ್ ಗಂಗೂಲಿ

author img

By

Published : Sep 28, 2022, 9:27 PM IST

Updated : Sep 28, 2022, 9:57 PM IST

ತಿರುವನಂತಪುರಂನಲ್ಲಿ ನಡೆದ ಭಾರತ - ದಕ್ಷಿಣ ಆಫ್ರಿಕಾ ಟಿ-20 ಪಂದ್ಯವನ್ನು ವೀಕ್ಷಿಸಲು ಬಂದ ವೇಳೆ ಸೌರವ್​ ಗಂಗೂಲಿ ಮಾಧಕ ದ್ರವ್ಯ ವಿರೋಧಿ ಅಭಿಯಾನದ ಲೋಗೋ ಬಿಡುಗಡೆ ಮಾಡಿದರು.

ಕೇರಳ ಸರ್ಕಾರದ ಮಾಧಕ ದ್ರವ್ಯ ವಿರೋಧಿ ಲೋಗೋ ಬಿಡುಗಡೆಗೊಳಿಸಿದ ಸೌರವ್ ಗಂಗೂಲಿ
ಕೇರಳ ಸರ್ಕಾರದ ಮಾಧಕ ದ್ರವ್ಯ ವಿರೋಧಿ ಲೋಗೋ ಬಿಡುಗಡೆಗೊಳಿಸಿದ ಸೌರವ್ ಗಂಗೂಲಿ

ತಿರುವನಂತಪುರಂ (ಕೇರಳ) : ಕೇರಳ ಸರ್ಕಾರದ ಡ್ರಗ್ ವಿರೋಧಿ ಅಭಿಯಾನದ ಲಾಂಛನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಬಿಡುಗಡೆ ಮಾಡಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಭಾರತ - ದಕ್ಷಿಣ ಆಫ್ರಿಕಾ ಟಿ-20 ಪಂದ್ಯ ವೀಕ್ಷಿಸಲು ಬಂದ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಲಾಂಛನ ಹಸ್ತಾಂತರಿಸಿದರು.

ಮಾಧಕ ದ್ರವ್ಯ ವಿರೋಧಿ ಅಭಿಯಾನದ ಲೋಗೋ ಬಿಡುಗಡೆ ಮಾಡಿದ ಸೌರವ್ ಗಂಗೂಲಿ

ಈ ವೇಳೆ ಮಾತನಾಡಿದ ಸಿಎಂ, ಸರ್ಕಾರವು ಅಕ್ಟೋಬರ್ 2 ರಂದು ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ ಪ್ರಾರಂಭಿಸುತ್ತಿದೆ. ಸರ್ಕಾರವು ಶಾಲಾ ಹಂತದಿಂದ ಜಾಗೃತಿ ಕಾರ್ಯಕ್ರಮ ನಡೆಸುತ್ತದೆ ಮತ್ತು ಮಾದಕ ವ್ಯಸನದ ಪ್ರಕರಣಗಳನ್ನು ಕಡಿಮೆ ಮಾಡಲು ಶೋಧ ಕಾರ್ಯಾಚರಣೆ ಹೆಚ್ಚಿಸುತ್ತದೆ ಎಂದರು.

ಗಂಗೂಲಿ ಅವರು ಈ ಪ್ರಯತ್ನಕ್ಕೆ ತಮ್ಮ ಹೃತ್ಪೂರ್ವಕ ಬೆಂಬಲವನ್ನು ವ್ಯಕ್ತಪಡಿಸಿದರು. ಮತ್ತು ಕಾರ್ಯಕ್ರಮಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಬಕಾರಿ ಆಯುಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಓದಿ: ಸತ್ಯಮೇವ ಜಯತೇ ಇದು ಕೇವಲ ಆತ್ಮಚರಿತ್ರೆಯಲ್ಲ ಪೊಲೀಸ್ ಇಲಾಖೆಗೆ ಮಾರ್ಗದರ್ಶಿ ಕೈಪಿಡಿ - ಶಂಕರ್​ ಬಿದರಿ

Last Updated : Sep 28, 2022, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.