ETV Bharat / bharat

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃವಿಯೋಗ

author img

By

Published : Aug 31, 2022, 5:24 PM IST

Updated : Aug 31, 2022, 7:18 PM IST

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾತೃ ವಿಯೋಗವಾಗಿದೆ. ಇಟಲಿಯಲ್ಲಿ 90 ವರ್ಷದ ಪಾವೊಲಾ ​ಮೈನೋ ನಿಧನರಾಗಿದ್ದಾರೆ. ನಿನ್ನೆಯೇ ಅಂತ್ಯಸಂಸ್ಕಾರವೂ ನೆರವೇರಿದೆ.

Sonia Gandhis mother Mrs Paola Maino passed away
ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃವಿಯೋಗ

ನವದೆಹಲಿ: ಇಟಲಿಯ ತಮ್ಮ ನಿವಾಸದಲ್ಲಿ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ​ಮೈನೋ ಆಗಸ್ಟ್​ 27ರಂದು ನಿಧನರಾಗಿದ್ದಾರೆ ಎಂದು ಪಕ್ಷದ ನಾಯಕ ಜೈರಾಮ್​ ರಮೇಶ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • Smt. Sonia Gandhi’s mother, Mrs. Paola Maino passed away at her home in Italy on Saturday the 27th August, 2022. The funeral took place yesterday.

    — Jairam Ramesh (@Jairam_Ramesh) August 31, 2022 " class="align-text-top noRightClick twitterSection" data=" ">

ಸೋನಿಯಾ ಗಾಂಧಿ ತಮ್ಮ ಆರೋಗ್ಯ ತಪಾಸಣೆಗಾಗಿ ಹೊರ ದೇಶದಲ್ಲಿದ್ದಾರೆ. ಇವರೊಂದಿಗೆ ಪುತ್ರ ರಾಹುಲ್​ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿಯೂ ತೆರಳಿದ್ದಾರೆ. ಆಗಸ್ಟ್​ 23ರಂದು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಪಾವೊಲಾ ​ಮೈನೋ ಅವರನ್ನು ಸೋನಿಯಾ ಭೇಟಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಸೋನಿಯಾ ಅವರೊಂದಿಗಿರುವ ರಾಹುಲ್​ ಶೀಘ್ರವೇ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಸೆಪ್ಟೆಂಬರ್​ 4ರಂದು ದೆಹಲಿಯಲ್ಲಿ ಕಾಂಗ್ರೆಸ್​ ಸಮಾವೇಶ ಆಯೋಜಿಸಿದ್ದು, ಅಂದು ಅವರು ಭಾಷಣ ಮಾಡಲಿದ್ದಾರೆ.

ಆಗಸ್ಟ್​ 28ರಂದು ನಡೆದ ಕಾಂಗ್ರೆಸ್​​ ಕಾರ್ಯಕಾರಣಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ವಿದೇಶದಿಂದಲೇ ಆನ್​ಲೈನ್​ ಮೂಲಕ ಸೋನಿಯಾ, ರಾಹುಲ್​ ಹಾಗೂ ಪ್ರಿಯಾಂಕಾ ಭಾಗವಹಿಸಿದ್ದರು. ಅಂದಿನ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣಾ ದಿನಾಂಕಕ್ಕೆ ಅನುಮೋದನೆ ನೀಡಲಾಗಿತ್ತು.

  • Condolences to Sonia Gandhi Ji on the passing away of her mother, Mrs. Paola Maino. May her soul rest in peace. In this hour of grief, my thoughts are with the entire family.

    — Narendra Modi (@narendramodi) August 31, 2022 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಸಂತಾಪ: ಸೋನಿಯಾ ಅವರ ತಾಯಿ ನಿಧನ ಹೊಂದಿರುವುದಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ

Last Updated :Aug 31, 2022, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.