ETV Bharat / bharat

ಸಿಎಂ ಸ್ಥಾನದಿಂದ ಅಮರೀಂದರ್​ ಸಿಂಗ್‌ರನ್ನ ಕೆಳಗಿಳಿಸಿದ್ದು ಸೋನಿಯಾ ಅಲ್ಲ, 78 ಶಾಸಕರು : ಸುರ್ಜೇವಾಲಾ

author img

By

Published : Oct 2, 2021, 8:31 PM IST

ಪಂಜಾಬ್​ನ 79 ಶಾಸಕರ ಪೈಕಿ 78 ಎಂಎಲ್​ಎಗಳು ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಪತ್ರ ಬರೆದಿದ್ದರು. 78 ಶಾಸಕರು ಒಂದು ಕಡೆ, ಸಿಎಂ ಇನ್ನೊಂದು ಬದಿಯಲ್ಲಿದ್ದಾಗ ನಾವು ಯಾರ ಮಾತು ಕೇಳಬೇಕು? ಎಂದು ಸುರ್ಜೇವಾಲಾ ಪ್ರಶ್ನಿಸಿದರು. ಒಂದು ವೇಳೆ ನಾವು ಸಿಎಂ ಬದಲಾವಣೆ ಮಾಡದಿದ್ದರೆ ಸರ್ವಾಧಿಕಾರಿಗಳೆಂದು ಕರೆಯುತ್ತಿದ್ದರು..

Surjewala
Surjewala

ಚಂಡೀಗಢ(ಪಂಜಾಬ್​​): ಪಂಜಾಬ್​​ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪಕ್ಷದ ಹಿರಿಯ ಮುಖಂಡ ರಂದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿದ್ದಾರೆ. ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು ಸೋನಿಯಾ ಗಾಂಧಿ ಅಲ್ಲ, ಬದಲಾಗಿ ಪಂಜಾಬ್​ನ 78 ಶಾಸಕರು ಎಂದಿದ್ದಾರೆ.

  • When a CM loses MLAs' trust, he should step down from the post. Out of 79, 78 MLAs had written that CM should be changed. If we wouldn't have changed the CM, it would've been termed as dictatorship: Congress leader Randeep Surjewala pic.twitter.com/3wpUEK948u

    — ANI (@ANI) October 2, 2021 " class="align-text-top noRightClick twitterSection" data=" ">

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನ ಅವಮಾನಕರವಾಗಿ ನಡೆಸಿಕೊಂಡಿದೆ ಎಂದು ಅಮರೀಂದರ್ ಸಿಂಗ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, ರಾಜ್ಯದ ಮುಖ್ಯಮಂತ್ರಿ ತಮ್ಮ ಶಾಸಕರ ವಿಶ್ವಾಸ ಕಳೆದುಕೊಂಡಾಗ ಆ ಸ್ಥಾನದಲ್ಲಿ ಉಳಿದುಕೊಳ್ಳಬಾರದು ಎಂದಿದ್ದಾರೆ. ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಪಂಜಾಬ್​​ ಸಿಎಂ ಬದಲಾವಣೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಹಣಕಾಸಿನ ತೊಂದರೆ.. ಹೆಂಡ್ತಿ, ಇಬ್ಬರು ಮಕ್ಕಳ ಕೊಲೆಗೈದು, ನೇಣಿಗೆ ಶರಣಾದ ಗಂಡ..

ಪಂಜಾಬ್​ನ 79 ಶಾಸಕರ ಪೈಕಿ 78 ಎಂಎಲ್​ಎಗಳು ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಪತ್ರ ಬರೆದಿದ್ದರು. 78 ಶಾಸಕರು ಒಂದು ಕಡೆ, ಸಿಎಂ ಇನ್ನೊಂದು ಬದಿಯಲ್ಲಿದ್ದಾಗ ನಾವು ಯಾರ ಮಾತು ಕೇಳಬೇಕು? ಎಂದು ಸುರ್ಜೇವಾಲಾ ಪ್ರಶ್ನಿಸಿದರು. ಒಂದು ವೇಳೆ ನಾವು ಸಿಎಂ ಬದಲಾವಣೆ ಮಾಡದಿದ್ದರೆ ಸರ್ವಾಧಿಕಾರಿಗಳೆಂದು ಕರೆಯುತ್ತಿದ್ದರು ಎಂದರು.

ಪಂಜಾಬ್​ ಕಾಂಗ್ರೆಸ್​​ನಲ್ಲಿ ಕಳೆದ ಕೆಲ ತಿಂಗಳಿಂದ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಅಮರೀಂದರ್ ಸಿಂಗ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೊಸದಾಗಿ ಚರಣ್​ಜಿತ್ ಸಿಂಗ್​ ಚನ್ನಿ ಅಧಿಕಾರ ಸ್ವೀಕರಿಸಿದ್ದಾರೆ. ಇದಾದ ಬಳಿಕ ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.