ETV Bharat / bharat

ಗೋದ್ರಾ ಹತ್ಯಾಕಾಂಡದಲ್ಲಿ ಮೋದಿಗೆ ಕ್ಲೀನ್​ಚಿಟ್​ ನೀಡಿದ್ದಕ್ಕೆ ಎಹ್ಸಾನ್​ ಜಾಫ್ರಿ ಕುಟುಂಬ ಆಕ್ಷೇಪ

author img

By

Published : Aug 13, 2022, 1:19 PM IST

ಗೋದ್ರಾ ಗಲಭೆ ಪ್ರಕರಣದಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತಿತರರಿಗೆ ಕ್ಲೀನ್​ಚಿಟ್​ ನೀಡಿದ್ದಕ್ಕೆ ಅಂದು ಹತ್ಯೆಗೀಡಾದ ಮಾಜಿ ಸಂಸದ ಎಹ್ಸಾನ್​ ಜಾಫ್ರಿ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ತೀರ್ಪನ್ನೂ ಒಪ್ಪಲಾಗಲ್ಲ ಎಂದಿದ್ದಾರೆ.

gujarat-riots
ಗೋದ್ರಾ ಹತ್ಯಾಕಾಂಡದಲ್ಲಿ ಮೋದಿಗೆ ಕ್ಲೀನ್​ಚಿಟ್

ನವದೆಹಲಿ: 2002 ಗುಜರಾತ್​ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮತ್ತಿತರರಿಗೆ ಎಸ್​ಐಟಿ ಕ್ಲೀನ್​ಚಿಟ್​ ನೀಡಿದ್ದಕ್ಕೆ ಗಲಭೆಯಲ್ಲಿ ಹತ್ಯೆಗೀಡಾದ ಕಾಂಗ್ರೆಸ್​ನ ಮಾಜಿ ಸಂಸದ ಎಹ್ಸಾನ್​ ಜಾಫ್ರಿ ಅವರ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ವಿಚಾರಣೆಗೂ ಮೊದಲೇ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಸುಪ್ರೀಂ ಕೋರ್ಟ್​ ವಿರುದ್ಧವೂ ಆಕ್ಷೇಪಿಸಿದೆ.

ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಮೃತ ಸಂಸದರ ಪುತ್ರ ತನ್ವೀರ್ ಎಹ್ಸಾನ್ ಜಾಫ್ರಿ, ವಿಚಾರಣೆ ನಡೆಸದೇ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್​ ನಿರ್ಧಾರ ತಪ್ಪು. ತನ್ನ ತಾಯಿ ಸಲ್ಲಿಸಿದ ಮನವಿಯನ್ನು ಸಹ ಆಲಿಸದೇ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಿದೆ ಎಂದರು.

ಅಂದಿನ ಘಟನೆಯ ಬಗ್ಗೆ ಪುರಾವೆಗಳು, ಪೊಲೀಸರ ಅಫಿಡವಿಟ್ ಮತ್ತು ಪತ್ರಿಕೆಯ ವರದಿಗಳನ್ನು ಸಾಕ್ಷ್ಯಗಳನ್ನಾಗಿ ಕೋರ್ಟ್​ ಮುಂದೆ ಪ್ರಸ್ತುತಪಡಿಸಿದ್ದೇವೆ. ಗಲಭೆಯ ತೀವ್ರತೆಯನ್ನು ಗಮನಿಸಿದರೆ ರಾಜ್ಯ ಸರ್ಕಾರ ಅದರಲ್ಲಿ ಭಾಗಿಯಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ, ನ್ಯಾಯಾಲಯವು ಅರ್ಜಿಯನ್ನು ಆಲಿಸುವ ಬದಲು ನಮ್ಮ ವಿರುದ್ಧವೇ ತೀರ್ಪಿತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆ ನಡೆಸಿದಾಗಲೇ ಸಾಕ್ಷ್ಯಗಳ ವಿಶ್ವಾಸಾರ್ಹತೆ ಬಯಲಾಗುತ್ತದೆ. ಸುಪ್ರೀಂಕೋರ್ಟ್​ನ ಈ ನಿರ್ಧಾರ ಬಡವರು ಮತ್ತು ಕೆಳಸ್ಥರದವರು ನ್ಯಾಯಕ್ಕಾಗಿ ಅದರ ಬಳಿಗೆ ಹೋಗುವುದನ್ನೇ ಅನುಮಾನದಿಂದ ನೋಡಬೇಕಾಗುತ್ತದೆ ಎಂದು ಹೇಳಿದರು. 2002 ರ ಫೆಬ್ರವರಿಯಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ಈಚೆಗಷ್ಟೇ ನಿರ್ದೋಷಿಗಳು ಎಂದು ಹೇಳಿ ಕ್ಲೀನ್ ಚಿಟ್ ನೀಡಿತ್ತು.

ಇದನ್ನು ಪ್ರಶ್ನಿಸಿ ಹತ್ಯೆಯಾದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಪರವಾಗಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿತ್ತು. ಇದೀಗ ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್​ ಮತ್ತು ಮಾಜಿ ಪೊಲೀಸ್​ ಅಧಿಕಾರಿ ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.

ಓದಿ: ಚಿಕನ್ ಪೀಸ್ ನಲ್ಲಿ ಜೈಲಿನ ಖೈದಿಗಳಿಗೆ ಗಾಂಜಾ ಸಾಗಾಟ.. ಆರೋಪಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.