ETV Bharat / bharat

ಫೋಟೋ ತೆಗೆದುಕೊಳ್ಳಲು ಹೋಗಿ ಅಲೆಯ ಹೊಡೆತಕ್ಕೆ ಸಿಲುಕಿದ ಆರು ಮಂದಿ ಸ್ನೇಹಿತರು: ಒಬ್ಬ ಸಾವು

author img

By

Published : Aug 21, 2023, 11:06 AM IST

Six youths were washed away in the sea: ಬಂಡೆ ಮೇಲೆ ನಿಂತು ಫೋಟೋ ತೆಗೆದುಕೊಳ್ಳುವಾಗ ಅಲೆಯ ಹೊಡೆತಕ್ಕೆ ಸಿಲುಕಿ ಆರು ಮಂದಿ ಸ್ನೇಹಿತರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Six youths were washed away in the sea
ನೀರಿನಲ್ಲಿ ಕೊಚ್ಚಿ ಹೋದ ಸ್ನೇಹಿತರು

ಅಚ್ಯುತಪುರ (ಆಂಧ್ರಪ್ರದೇಶ) : ವೀಕೆಂಡ್​ ವೇಳೆ ಬೀಚ್‌ನಲ್ಲಿ ಮೋಜು ಮಸ್ತಿ ಮಾಡಲು ಬಂದಿದ್ದ ಆರು ಮಂದಿ ಸ್ನೇಹಿತರು ಅನಿರೀಕ್ಷಿತವಾಗಿ ಅಲೆಯ ಹೊಡೆತಕ್ಕೆ ಸಿಲುಕಿದ ಘಟನೆ ಅನಕಾಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದಲ್ಲಿ ಭಾನುವಾರ ನಡೆದಿದೆ. ಸಮುದ್ರದ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ರಾಂಬಿಲ್ಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿಶಾಖಪಟ್ಟಣದ ಕಟ್ಟೋಜು ಸಾಯಿ (19), ಕಟ್ಟೋಜು ಕಾವ್ಯಾ (17), ಸಾಯಿ ಪ್ರಿಯಾಂಕಾ (27), ಸಿಂಹಾಚಲಂನ ಗನ್ನವರಪು ರವಿಶಂಕರ್ (28), ಅಲ್ಲಿಪುರದ ಕಂಡಿಪಲ್ಲಿ ಫಣೀಂದ್ರ (25), ಕಂಡಿಪಲ್ಲಿ ಸಾಯಿಕಿರಣ್ (25) ಎಂಬುವರು ಭಾನುವಾರ ಬೆಳಗ್ಗೆ ವಿಹಾರಕ್ಕೆಂದು ರಾಂಬಿಲ್ಲಿ ಮಂಡಲದ ಸೀತಾಪಾಲೆಂ ಬೀಚ್‌ಗೆ ಬಂದಿದ್ದರು. ಬೀಚ್​ನಲ್ಲಿ ಮೋಜು ಮಸ್ತಿ ಮಾಡಿದ ಆರು ಮಂದಿ, ಬಳಿಕ ಸಮುದ್ರಕ್ಕೆ ಸ್ನಾನಕ್ಕೆ ಎಂದು ತೆರಳಿದ್ದರು.

ದಡಕ್ಕೆ ಹೊಂದಿಕೊಂಡಿದ್ದ ಬಂಡೆಯ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದಾಗ ಏಕಾಏಕಿ ದೊಡ್ಡ ಅಲೆಯೊಂದು ಬಂದು ಬಡಿದಿದ್ದು, ಆರು ಮಂದಿ ಸ್ನೇಹಿತರು ಸಮುದ್ರಕ್ಕೆ ಬಿದ್ದಿದ್ದಾರೆ. ಯುವಕರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ ಸುತ್ತಮುತ್ತಲಿನವರು ಜೋರಾಗಿ ಕೂಗಿದ್ದಾರೆ. ಬಳಿಕ, ಅಲ್ಲೇ ದಡದಲ್ಲಿದ್ದ ಮೀನುಗಾರರು ಕಟ್ಟೋಜು ಸಾಯಿ ಹೊರತುಪಡಿಸಿ ಉಳಿದ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಯಿ ಪ್ರಿಯಾಂಕಾ ಉಪ್ಪು ನೀರು ಕುಡಿದು ಪ್ರಜ್ಞಾಹೀನಳಾಗಿದ್ದು, ಉಳಿದ ನಾಲ್ವರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಇದನ್ನೂ ಓದಿ : ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ವಾಹನಗಳು - ದೇಶಾದ್ಯಂತ ಮುಂಗಾರು ಅಬ್ಬರ: ವಿಡಿಯೋ

ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಸಾಯಿ ಮೃತ ದೇಹ ಅಚ್ಯುತಪುರಂ ಮಂಡಲದ ಪುಡಿಮಾಡಕದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ರಾಂಬಿಲ್ಲಿ ಎಸ್‌ಐ ಡಿ.ದಿನಬಂಧು ಮತ್ತು ಅಚ್ಯುತಪುರಂ ಎಸ್‌ಐ ಸನ್ಯಾಸಿ ನಾಯ್ಡು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಸಾಯಿ ಮೃತದೇಹವನ್ನು ಅನಕಾಪಲ್ಲಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೋಮಾ ಸ್ಥಿತಿಗೆ ತಲುಪಿದ್ದ ಸಾಯಿ ಪ್ರಿಯಾಂಕಾ ಅವರಿಗೆ ಅನಕಾಪಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ : Watch video : ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವಾಹನಗಳು : ಮನೆಗಳಿಗೆ ಕೆಸರು ನುಗ್ಗಿ ಜನರ ಪರದಾಟ

ಇನ್ನು ವಾರಾಂತ್ಯ ಹಾಗೂ ಕಾರ್ತಿಕ ಮಾಸದಲ್ಲಿ ವಿಶಾಖಪಟ್ಟಣಂ ಜಿಲ್ಲೆಯ ತಾಂತಾಡಿ-ವಡಪಾಲೆಂ, ಪುಡಿಮಾಡಕ, ಅಚ್ಯುತಪುರಂ ಮಂಡಲದ ಸೀತಾಪಾಲೆಂ, ರಾಂಬಿಲ್ಲಿಯ ವದನರಸಪುರ, ಕೊತ್ತಪಟ್ಟಣಂ, ವಡಚೀಪುರುಪಲ್ಲಿ, ಪರವಾಡದ ತಿಕ್ಕವಾನಿಪಾಲೆಂ, ಎಸ್.ರಾಯವರಂನ ರೇವುಪೋಳವರಂಗಳಿಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಆದರೆ, ಕೆಲವರು ಕರಾವಳಿ ಭಾಗದಲ್ಲಿ ಸ್ನಾನ ಮಾಡಲು ತೆರಳಿ ಅವಘಡಗಳಿಗೆ ತುತ್ತಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಮೀನುಗಾರಿಕೆ ಇಲಾಖೆ, ಕಂದಾಯ, ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕಾರವಾರ : ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಟ, ಬೀಚ್ ಸಿಬ್ಬಂದಿಯಿಂದ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.