ETV Bharat / bharat

ಭೀಕರ ರಸ್ತೆ ಅಪಘಾತ: ಕಾರಿನಲ್ಲೇ ಸಿಲುಕಿ ಪ್ರಾಣತೆತ್ತ ಆರು ಜನ!

author img

By

Published : Feb 13, 2021, 8:10 AM IST

Updated : Feb 13, 2021, 8:54 AM IST

Six people died, Six people died due to collided car and container, Six people died due to collided car and container in Kannauj, Kannauj road accident, Kannauj road accident news, ಆರು ಜನ ಸಾವು, ಕಾರ್​ ಮತ್ತು ಕಂಟೇನೈರ್​ ನಡುವೆ ಅಪಘಾತ, ಅಪಘಾತದಲ್ಲಿ ಆರು ಜನ ಸಾವು, ಕನ್ನೌಜ್​​ನಲ್ಲಿ ಭೀಕರ ರಸ್ತೆ ಅಪಘಾತ, ಕನ್ನೌಜ್​ ರಸ್ತೆ ಅಪಘಾತ, ಕನ್ನೌಜ್​ ರಸ್ತೆ ಅಪಘಾತ ಸುದ್ದಿ,
ಕಾರಿನಲ್ಲೇ ಸಿಲುಕಿ ಪ್ರಾಣತೆತ್ತ ಆರು ಜನ

07:54 February 13

ಕಾರೊಂದು ನಿಂತ ಕಂಟೇನರ್​ಗೆ ಗುದ್ದಿದ ಪರಿಣಾಮ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕನೌಜ್​ನಲ್ಲಿ ನಡೆದಿದೆ.

ಕನೌಜ್​: ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲಗ್ರಾಮದ ಆಗ್ರಾ-ಲಖನೌ ಹೆದ್ದಾರಿಯಲ್ಲಿ ಸಂಭವಿಸಿದೆ. 

ಹೆಚ್ಚು ಮಂಜು ಬಿದ್ದ ಕಾರಣ ಕಾರು ಚಾಲಕನಿಗೆ ರಸ್ತೆ ಬದಿ ನಿಂತ ಕಂಟೇನರ್ ಕಂಡು ಬಂದಿಲ್ಲ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಸಂಬಂಧಪಟ್ಟವರಿಗೆ ಮಾಹಿತಿ ಮುಟ್ಟಿಸಿದರು. 

ಈ ಘಟನೆ ಬಗ್ಗೆ ಕನೌಜ್​ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated :Feb 13, 2021, 8:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.