ETV Bharat / bharat

ಸಹೋದರನಿಗೆ ರಾಖಿ ಕಟ್ಟಲು ಹೋಗ್ತಿದ್ದ ಅಪ್ರಾಪ್ತೆ ಮೇಲೆ ಗ್ಯಾಂಗ್​ ರೇಪ್​.. ಮೂವರು ಕಾಮುಕರಿಂದ ದುಷ್ಕೃತ್ಯ

author img

By

Published : Aug 13, 2022, 8:47 PM IST

ಬೇರೆ ಪ್ರದೇಶದಲ್ಲಿ ವಾಸವಾಗಿದ್ದ ಸಹೋದರನಿಗೆ ರಾಖಿ ಕಟ್ಟಲು ಹೋಗ್ತಿದ್ದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬಿಹಾರದಲ್ಲಿ ನಡೆದಿದೆ.

Gang Rape In Bihar
Gang Rape In Bihar

ಸಿವಾನ್​(ಬಿಹಾರ): ದೇಶಾದ್ಯಂತ ಕಾಮುಕರ ಅಟ್ಟಹಾಸ ಹೆಚ್ಚಾಗಿದ್ದು, ರಕ್ಷಾಬಂಧನದ ದಿನ ಸಹೋದರನಿಗೆ ರಾಖಿ ಕಟ್ಟಲು ತೆರಳುತ್ತಿದ್ದ ಅಪ್ರಾಪ್ತೆ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಿಹಾರದ ಸಿವಾನ್​ ಎಂಬಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

15 ವರ್ಷದ ಬಾಲೆ ತನ್ನ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಪೋಷಕರೊಂದಿಗೆ ಬೇರೆ ಪ್ರದೇಶದಲ್ಲಿದ್ದ ಸಹೋದರನಿಗೆ ರಾಖಿ ಕಟ್ಟುವ ಉದ್ದೇಶದಿಂದ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ದಾರಿಯಲ್ಲಿ ಮೂವರು ಕಾಮುಕರು ಆಕೆಯನ್ನು ಬಲವಂತವಾಗಿ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಆಕೆಯ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಸಿವಾನ್​ ಜಿಲ್ಲೆಯ ಭಗವಾನ್​​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ಕಾಮುಕ ವೈದ್ಯನಿಂದ ಅತ್ಯಾಚಾರ

ಬಾಲಕಿಯ ಧ್ವನಿ ಕೇಳಿಸಿಕೊಂಡಿರುವ ಕೆಲವರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಕಾಮುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಗವಾನ್​​ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ದುಷ್ಕೃತ್ಯ ನಡೆದಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಭಗವಾನ್​​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪವನ್, ಇಮಾಮುದ್ದೀನ್​ ಮತ್ತು ದಿನೇಶ್ ರೈ ಎಂಬಾತನ ಕೈವಾಡವಿರುವುದು ತಿಳಿದು ಬಂದಿದೆ. ಈಗಾಗಲೇ ದಿನೇಶ್​, ಪವನ್​​​ನನ್ನ ಬಂಧನ ಮಾಡಲಾಗಿದ್ದು, ಮತ್ತೋರ್ವ ಆರೋಪಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.