ETV Bharat / bharat

ಎಸ್​ಐಟಿ ಎದುರು ನರೇಶ್​​ಗೌಡ ಹಾಗೂ ಶ್ರವಣ್ ಪ್ರತ್ಯಕ್ಷ: ಸಿಡಿ ಕೇಸ್​ ಕಿಂಗ್​ಪಿನ್​ಗಳು ಹೇಳಿದ್ದಿಷ್ಟು..!

author img

By

Published : Jun 12, 2021, 8:04 PM IST

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಸಂಬಂಧ ನರೇಶ್ ಗೌಡ ಹಾಗೂ ಶ್ರವಣ್ ಮಧ್ಯಾಹ್ನ ಆಡುಗೋಡಿಯಲ್ಲಿ ಎಸ್​ಐಟಿ ಎದುರು ವಿಚಾರಣೆಗೆ ವಕೀಲರ ಜೊತೆ ಹಾಜರಾಗಿದ್ದರು. ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಸತತ ಮೂರು ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಿದರು. ನರೇಶ್ ಹಾಗೂ ಶ್ರವಣ್ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಯಿತು. ವಿಚಾರಣೆ ವೇಳೆ ಸಂತ್ರಸ್ತ ಯುವತಿ ಬಗೆಗೆ ಕೆಲ ಮಹತ್ವದ ಮಾಹಿತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

shravan
ಎಸ್​ಐಟಿ ವಿಚಾರಣೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರೂವಾರಿಗಳು ಎಂದು ಹೇಳಲಾಗ್ತಿರುವ ನರೇಶ್ ಗೌಡ ಮತ್ತು ಶ್ರವಣ್ ಎಸ್​ಐಟಿ ಮುಂದೆ ವಿಚಾರಣೆಗೆ ಎದುರಿಸಿದ್ದಾರೆ. ಈ ಇಬ್ಬರ ಮೇಲೆ ಸದಾಶಿವನಗರ ಠಾಣೆಯಲ್ಲಿ ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಕೇಸ್‌ ದಾಖಲಾಗಿತ್ತು. ಇದೀಗ ಕೋರ್ಟ್ ಆದೇಶದಂತೆ ವಿಚಾರಣೆಗೆ ಹಾಜರಾಗಿದ್ದರು. ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಆರೋಪ ಪ್ರಕರಣದಲ್ಲಿ ಇಬ್ಬರು ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆರೋಪಿಗಳು 5 ದಿನಗಳ ಒಳಗೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಕೂಡ ಸೂಚಿಸಿತ್ತು.

ನ್ಯಾಯಾಲಯ ಆದೇಶ ನೀಡಿದ 5ನೇ ದಿನ, ಅಂದರೆ ಕೊನೆಯ ದಿನವಾದ ಶನಿವಾರ ಆರೋಪಿಗಳು ವಿಚಾರಣೆ ಎದುರಿಸಲು ಆಡುಗೋಡಿ ಟೆಕ್ನಿಕಲ್ ಸೆಲ್​ಗೆ ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಆರೋಪಿಗಳು ಎಸ್​ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದರು. ಎಸ್​ಐಟಿ ಕೂಡ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿತ್ತು.

ದಾಖಲೆ ಪರಿಶೀಲಿಸಿ ವಿಚಾರಣೆ ನಡೆಸಿದ ತನಿಖಾಧಿಕಾರಿ :

ಆರೋಪಿಗಳು ಹಾಜರಾಗುತ್ತಿದ್ದಂತೆ ತನಿಖಾಧಿಕಾರಿಗಳು ದಾಖಲಾತಿಗಳ ಪರಿಶೀಲನೆ ಮೇಲಧಿಕಾರಿಗಳಿಗೆ ವಿಚಾರ ಮುಟ್ಟಿಸಿ ಚರ್ಚೆ ನೆಡೆಸಿದ್ದರು. ವಿಚಾರಣೆ ಮಧ್ಯಾಹ್ನ ಸುಮಾರು 2 ಗಂಟೆಯ ನಂತರ ಪ್ರಾರಂಭವಾಗಿದ್ದು, ಮೊದಲು ಆರೋಪಿಗಳ ಹುಟ್ಟಿದ ದಿನಾಂಕ, ವಿದ್ಯಾಭ್ಯಾಸ, ತಂದೆ, ತಾಯಿ, ಊರು, ಓದಿದ ಶಾಲೆಗಳು, ಮೊದಲು ಎಲ್ಲಿ ಕೆಲಸ ಪ್ರಾರಂಭಿಸಿದ್ದು, ಕೆಲಸ ಮಾಡಿದ ಸಂಸ್ಥೆಗಳು, ಆದಾಯದ ಮೂಲ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಎಸ್​ಐಟಿ ಕಲೆ ಹಾಕಿತು.

ಆರೋಪಿ ಶ್ರವಣ್​ ಹೇಳಿಕೆ:

ಮಾಧ್ಯಮದಲ್ಲಿದ್ದ ಕಾರಣ ನರೇಶ್​ ನನಗೆ ಪರಿಚಯ ಎಂದಿರುವ ಶ್ರವಣ್, ಕಾಲೇಜಿನ ಪ್ರತಿಭಟನೆಯೊಂದರಲ್ಲಿ ಸಿಡಿ ಯುವತಿಯ ಪರಿಚಯವಾಯಿತು. ನಾವು ಯಾರ ಬಳಿಯೂ ಹಣಕ್ಕೆ ಡಿಮ್ಯಾಂಡ್‌ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನ್ಯಾಯ ಕೊಡಿಸಲು ಮುಂದಾಗಿದ್ದೆವು ಎಂದು ಎಸ್​​ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್​ ಹೇಳಿಕೆ ನೀಡಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಆರೋಪಿ ನರೇಶ್ ಹೇಳಿಕೆ:

ಘಟನೆಗೆ ಮೊದಲು ಮಾಜಿ ಮಂತ್ರಿಯ ಸಿಡಿ ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ ಎಂದು ನರೇಶ್ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ಹೇಳಿದ್ದಾನೆ. ಯುವತಿ ನನಗೆ ಶ್ರವಣ್ ಮತ್ತು ಓರ್ವ ಯುವತಿ ಮುಖಾಂತರ ಪರಿಚಯವಾಗಿದ್ದು, ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದಳು. ನನ್ನನ್ನು ಆಕೆ ಅಣ್ಣ ಎಂದು ಸಹ ಕರೆಯುತಿದ್ದಳು ಎಂದು ನರೇಶ್ ಎಸಿಪಿ ಧರ್ಮೇಂದ್ರರಿಗೆ ಮಾಹಿತಿ ನೀಡಿದ್ದಾನೆ.

ಮುಂದುವರಿದು ಪ್ರಕರಣದ ನಾನಾ ಮಜಲುಗಳನ್ನು ತೆರೆದಿಟ್ಟಿರುವ ನರೇಶ್ ಪ್ರಭಾವಿಯೊಬ್ಬರು ನನಗೆ ಅನ್ಯಾಯ ಮಾಡಿದ್ದಾರೆ. ಮೋಸ ಮಾಡಿದ್ದಾರೆ ಅಂತ ಬಂದಿದ್ದಳು. ನನಗೆ ನ್ಯಾಯ ಕೊಡಿಸಿ ಎಂದಿದ್ದಳು. ಆ ಪ್ರಭಾವಿ ವ್ಯಕ್ತಿಗೆ ಬುದ್ಧಿ ಕಲಿಸಬೇಕು ಎಂದಿದ್ದಳು. ನಾನು ಮೀಡಿಯಾದಲ್ಲಿ ಕೆಲಸ ಮಾಡುತಿರುವುದಕ್ಕೆ ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಆಕೆಯ ಹೇಳಿಕೆ ವಿಚಾರ ಬಿಟ್ಟು ವಿಡಿಯೋ ಬಗ್ಗೆ, ಯಾವುದೇ ವಸೂಲಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ನರೇಶ್ ಹೇಳಿದ್ದಾರೆ.

ನನಗೆ ಹಲವರ ಕಾಟ್ಯಾಂಕ್ಟ್ ಇದೆ. ನಾನು ಮಾಧ್ಯಮದಲ್ಲಿ ಕೆಲಸ ಮಾಡುತಿದ್ದೆ ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೇನೆ. ಮಿನಿಸ್ಟರ್ ಗಳು, ಎಂಎಲ್ಎಗಳು ಹಾಗೂ ಹಲವರನ್ನು ಹಲವು ಬಾರಿ ಸಂಪರ್ಕ ಮಾಡಿದ್ದೇನೆ. ಆದರೆ, ವಿಡಿಯೋ ಬಗ್ಗೆ ನನಗೆ ಏನು ಗೊತ್ತಿಲ್ಲ. ವಸೂಲಿ ವಿಚಾರವೂ ಗೊತ್ತಿಲ್ಲ ಎಂದು ನರೇಶ್ ಇದೇ ವೇಳೆ ಸ್ಪಷ್ಟ ನುಡಿಗಳಲ್ಲಿ ಎಸ್​ಐಟಿ ಅಧಿಕಾರಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರ ಹೇಳಿಕೆಗಳನ್ನೂ ಎಸ್‌ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ದಾಖಲಿಸಿಕೊಂಡಿದ್ದಾರೆ. ಈ ವೇಳೆ, ಅವರಿಬ್ಬರ ಮೊಬೈಲ್‌ಗಳನ್ನ ವಶಕ್ಕೆ ಪಡೆದು, ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಮುಂದಿನ ವಿಚರಣೆಯ ದಿನಾಂಕ ಮತ್ತು ಸಮಯದ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಟ್ರಾವೆಲ್ ಹಿಸ್ಟರಿ ರಿವೀಲ್ ಮಾಡದ ಆರೋಪಿಗಳು: ಎಸ್​​ಐಟಿಗೆ ಬರುವ ವೇಳೆಯೂ ಸಿಡಿ ಕೇಸ್ ಕಿಂಗ್ ಪಿನ್ಸ್ ನರೇಶ್ ಗೌಡ ಶ್ರವಣ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಮಜೆಸ್ಟಿಕ್ ನಿಂದ ಬಂದ ಆರೋಪಿಗಳು ಎಲ್ಲಿಯೂ ತಮ್ಮ ಟ್ರಾವೆಲ್ ಹಿಸ್ಟರಿ ರಿವೀಲ್ ಮಾಡಿಲ್ಲ ಎಂದು ಗೊತ್ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.