ETV Bharat / bharat

25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಭೂಗತ ಪಾತಕಿ ಛೋಟಾ ಶಕೀಲ್ ಗ್ಯಾಂಗ್​ನ ​​ಶೂಟರ್​ ಬಂಧನ

25 ವರ್ಷದಿಂದ ತಲೆ ಮರೆಸಿಕೊಂಡಿದ್ದ ಶೂಟರ್​ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.

ಲಾಯಿಕ್ ಅಹ್ಮದ್ ಫಿದಾ ಹುಸೇನ್ ಶೇಖ್
ಲಾಯಿಕ್ ಅಹ್ಮದ್ ಫಿದಾ ಹುಸೇನ್ ಶೇಖ್
author img

By

Published : Jul 29, 2023, 1:54 PM IST

ಮುಂಬೈ (ಮಹಾರಾಷ್ಟ್ರ): ಭೂಗತ ಪಾತಕಿ ಛೋಟಾ ಶಕೀಲ್ ಗ್ಯಾಂಗ್​ನ ಶೂಟರ್ 'ಲಾಯಿಕ್ ಅಹ್ಮದ್ ಫಿದಾ ಹುಸೇನ್ ಶೇಖ್​'ನನ್ನು ಪೈದೋನಿ ಪೊಲೀಸರು ಥಾಣೆ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಜಾಮೀನಿನ ಮೇಲೆ ಹೊರಬಂದ ಈತ ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಶಾರ್ಪ್ ಶೂಟರ್ ಶೇಖ್ ತನ್ನ ಸಹಚರನ ಸಹಾಯದಿಂದ ಮತ್ತೊಬ್ಬ ಗ್ಯಾಂಗ್​ಸ್ಟಾರ್​ ಮುನ್ನಾ ಧಾರಿ ಎಂಬುವನನ್ನು ಏಪ್ರಿಲ್ 2, 1997 ರಂದು ಕೊಲೆ ಮಾಡಿದ್ದನು. ಮುನ್ನಾ ಧಾರಿ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯನಾಗಿದ್ದ. ಪೊಲೀಸರು ಲಾಯಿಕ್ ಅಹ್ಮದ್ ಫಿದಾ ಹುಸೇನ್ ಶೇಖ್ ವಿರುದ್ಧ ಐಪಿಸಿ ಸೆಕ್ಷನ್ 302, 34 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 25 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಬಂಧಿಸಿದ್ದರು. ನ್ಯಾಯಾಲಯವು 1998 ರಲ್ಲಿ ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

ಜೈಲಿನಿಂದ ಬಿಡುಗಡೆಯಾದ ನಂತರ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಲಾಯಿಕ್​ ಶೆಕ್​ ತಲೆ ಮರೆಸಿಕೊಂಡಿದ್ದ. ನ್ಯಾಯಾಲಾಯ ಪಲಾಯನಗೊಂಡ ಆರೋಪಿ ಎಂದು ಘೋಷಿಸಿತ್ತು. ಕಾರಣ ಶೇಖ್ ಅವರನ್ನು ಪರಾರಿಯಾದ ವ್ಯಕ್ತಿ ಎಂದು ಘೋಷಿಸಲಾಯಿತು. ಸುಮಾರು 25 ವರ್ಷಗಳ ಕಾಲ ನಾಪತ್ತೆಯಾಗಿದ್ದ. ಆರೋಪಿ ಪತ್ತೆಗಾಗಿ ಮುಂಬೈ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದರು.

ಈ ವೇಳೆ ಶೇಖ್ ಮುಂಬ್ರಾದಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಮುಂಬ್ರಾದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಅಲ್ಲಿ ಶೇಖ್ ಪತ್ತೆಯಾಗಿರಲಿಲ್ಲ. ಬಳಿಕ ಶೇಖ್ ಥಾಣೆ ನಗರದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಪಡೆದು ಪೊಲೀಸರು ಆರೋಪಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ ನಿನ್ನೆ ಥಾಣೆ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಹತ್ಯೆ ಪ್ರಕರಣದಿಂದ ಛೋಟಾ ರಾಜನ್​ ಖುಲಾಸೆ: ಏತನ್ಮಧ್ಯೆ, ಕಾರ್ಮಿಕ ಮುಖಂಡ ಕಾಮ್ರೇಡ್ ದತ್ತಾ ಸಾಮಂತ್ ಹತ್ಯೆ ಪ್ರಕರಣದಿಂದ ಭೂಗತ ಪಾತಕಿ ಛೋಟಾ ರಾಜನ್ ಖುಲಾಸೆಗೊಂಡಿದ್ದಾನೆ. 1997 ರಲ್ಲಿ ಕಾಮ್ರೇಡ್ ದತ್ತಾ ಸಾಮಂತ್ ಕೊಲೆಯಾಗಿತ್ತು. ಭೂಗತ ಪಾತಕಿ ಛೋಟಾ ರಾಜನ್ ಹತ್ಯೆಯ ಆರೋಪಿಯಾಗಿದ್ದ ಎಂಉ ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದಿಂದ ಛೋಟಾ ರಾಜನ್​ನನ್ನ ಖುಲಾಸೆಗೊಳಿಸಿದೆ.

ಜನವರಿ 16, 1997 ರಂದು, ಡಾ. ದತ್ತಾ ಸಾಮಂತ್ ಪೊವೈನಿಂದ ಘಾಟ್ಕೋಪರ್ ಕಡೆಗೆ ಪ್ರಯಾಣಿಸುತ್ತಿದ್ದರು. ಪಂತನಗರಕ್ಕೆ ತೆರಳುತ್ತಿದ್ದ ವೇಳೆ ಪದ್ಮಾವತಿ ರಸ್ತೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು. ಪೊಲೀಸರ ಪ್ರಕಾರ, ನಾಲ್ವರು ಅಪರಿಚಿತ ಆರೋಪಿಗಳು ಬೈಕ್‌ನಲ್ಲಿ ಬಂದು ದತ್ತಾ ಸಾಮಂತ್ ಮೇಲೆ 17 ಗುಂಡುಗಳನ್ನು ಹಾರಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: 1988ರಲ್ಲಿ ಚೇರನ್​ ಸಾರಿಗೆ ಸಂಸ್ಥೆ ವಂಚನೆ ಪ್ರಕರಣ.. ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, ₹ 3 ಕೋಟಿ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.