ETV Bharat / bharat

ಶಿಲ್ಪಾ ಶೆಟ್ಟಿ ತಾಯಿಗೆ ಮೋಸ ಆರೋಪ.. ರೈತನ ವಿರುದ್ಧ ಪ್ರಕರಣ ದಾಖಲು

author img

By

Published : Jul 29, 2021, 5:14 PM IST

Updated : Jul 29, 2021, 5:32 PM IST

ದೇಶಾದ್ಯಂತ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ವಿರುದ್ಧದ Pornography Case ಸದ್ದು ಮಾಡ್ತಿದ್ದರೆ, ಇದೀಗ ಶಿಲ್ಪಾ ಶೆಟ್ಟಿ ಅವರ ತಾಯಿಗೆ ರೈತನೋರ್ವ ಮೋಸ ಮಾಡಿದ್ದಾನೆ ಎಂಬ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಶಿಲ್ಪಾ ಶೆಟ್ಟಿ ತಾಯಿಗೆ ಮೋಸ ಮಾಡಿದ ರೈತ: ಪ್ರಕರಣ ದಾಖಲು

ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಸುದ್ದಿಯಾಗಿದೆ. ಕರ್ಜತ್ ಜಿಲ್ಲೆಯ ರಾಯಗಡ್ ಮೂಲದ ಸುಧಾಕರ್ ಘರೆ ಎಂಬ ರೈತನ ವಿರುದ್ಧ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ ಶೆಟ್ಟಿ ಜುಹು ಪೊಲೀಸರಿಗೆ ವಂಚನೆಯ ದೂರು ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಅವರು ಮೇ 2019 ಮತ್ತು ಫೆಬ್ರವರಿ 2020 ರ ನಡುವೆ ರೈತ ಸುಧಾಕರ್‌ನಿಂದ ಕಾರ್ಜತ್‌ನಲ್ಲಿ ಆಸ್ತಿ ಖರೀದಿಸಿದ್ದರಂತೆ. ಭೂಮಿ ಮತ್ತು ಬಂಗಲೆಯ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಸುಧಾಕರ್ ಅವರು ಸುನಂದಾ ಅವರೊಂದಿಗೆ ವ್ಯವಹರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಆಸ್ತಿಯನ್ನು ಒಟ್ಟು 1 ಕೋಟಿ 6 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತಂತೆ.

ಸುನಂದಾ ಅವರಿಗೆ ಈ ವಿಷಯ ತಿಳಿದ ನಂತರ, ಅವರು ಸುಧಾಕರ್‌ನಿಂದ ಹಣವನ್ನು ವಾಪಸ್​ ನೀಡಬೇಕೆಂದು ಕೋರಿದ್ದಾರೆ. ಆದರೆ ಸುಧಾಕರ್ ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಕೆ ಒಡ್ಡಿದ್ದಾರಂತೆ. ಈ ಕಾರಣಕ್ಕೆ ಸುನಂದಾ ಪೊಲೀಸರ ಮೊರೆ ಹೋಗಿದ್ದಾರೆ.

ದೇಶಾದ್ಯಂತ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ವಿರುದ್ಧದ Pornography Case ಸದ್ದು ಮಾಡ್ತಿದ್ದರೆ, ಇದೀಗ ಶಿಲ್ಪಾ ಶೆಟ್ಟಿ ಅವರ ತಾಯಿಗೆ ರೈತನೋರ್ವ ಮೋಸ ಮಾಡಿದ್ದಾನೆ ಎಂಬ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

Last Updated : Jul 29, 2021, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.