ETV Bharat / bharat

ಕೊನೆಗೂ ಮೌನ ಮುರಿದ ಶಿಲ್ಪಾಶೆಟ್ಟಿ.. ಪತಿ ಕುಂದ್ರಾ ಮಾಜಿ ಪತ್ನಿ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ..

author img

By

Published : Jun 14, 2021, 4:45 PM IST

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಜ್​ಕುಂದ್ರಾ ತನ್ನ ಮೊದಲ ಪತ್ನಿಯೊಂದಿಗಿನ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಾಜಿ ಪತ್ನಿ ಕವಿತಾ ಲಂಡನ್​ನಲ್ಲಿದ್ದಾಗ ಅವರ ಸಹೋದರಿಯ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದರು..

ಶಿಲ್ಪಾಶೆಟ್ಟಿ
ಶಿಲ್ಪಾಶೆಟ್ಟಿ

ಹೈದರಾಬಾದ್ : ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ಕುಂದ್ರಾ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಪತ್ನಿ ಕವಿತಾ ಅವರ ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಶಿಲ್ಪಾಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇಂದು ಇನ್ಸ್​ಟಾಗ್ರಾಂನಲ್ಲಿ ‘ಒಳ್ಳೆಯ ಮನುಷ್ಯನಿಗೆ ನೋವುಂಟಾದಾಗ, ಒಳ್ಳೆಯವರೆಲ್ಲರೂ ಅವನೊಂದಿಗೆ ನೋವು ಅನುಭವಿಸುತ್ತಾರೆ- ಯೂರಿಪೆಡ್ಸ್​​ ’ ಎಂಬ ವಾಕ್ಯವನ್ನು ಬರೆದಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಜ್​ಕುಂದ್ರಾ ತನ್ನ ಮೊದಲ ಪತ್ನಿಯೊಂದಿಗೆ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಾಜಿ ಪತ್ನಿ ಕವಿತಾ ಲಂಡನ್​ನಲ್ಲಿದ್ದಾಗ ಅವರ ಸಹೋದರಿಯ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದರು.

ಇಂಗ್ಲೆಂಡ್​​ನ ನಮ್ಮ ಮನೆಯಲ್ಲಿ ನಾನು, ಅಪ್ಪ ಮತ್ತು ತಂಗಿ ಇದ್ದೆವು. ಅವಳ ಅಕ್ಕ ಹಾಗೂ ಅವರ ಪತಿ ಬೇರೊಂದು ಮನೆಯಲ್ಲಿ ವಾಸವಿದ್ದರು. ನಾನು ಬ್ಯುಸಿನೆಸ್ ಟ್ರಿಪ್ ಹೋದಾಗ ಆಕೆ, ಅವರ ಭಾವನೊಂದಿಗೆ ಸಲುಗೆಯಿಂದ ಬೆರೆಯುತ್ತಿದ್ದಳು. ಈ ಬಗ್ಗೆ ನನ್ನ ಕುಟುಂಬದವರು ಹಾಗೂ ನನ್ನ ಡ್ರೈವರ್​ ಸಹ ನನ್ನ ಗಮನಕ್ಕೆ ತಂದಿದ್ದರು. ಆದರೂ, ನಾನು ಅವರ ಮಾತನ್ನು ನಂಬಲಿಲ್ಲ ಎಂದರು.

ಇದನ್ನೂ ಓದಿ:ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಶೂಟಿಂಗ್​ ಪುನಾರಂಭ

ಆದರೆ, ಅವರು ಒಟ್ಟಿಗೆ ಕೆಲಸಕ್ಕೆ ಹೋಗಿ, ಒಂದೇ ಕೋಣೆಯಲ್ಲಿ ಇರುತ್ತಿದ್ದುದನ್ನು ನಾನು ಗಮನಿಸಿದ್ದೆ. ಹಾಗಾಗಿ, ವಿಚ್ಛೇದನ ಪಡೆದುಕೊಂಡೆ ಎಂದಿದ್ದಾರೆ. ಈ ಹಿಂದಿನ ಸಂದರ್ಶನವೊಂದರಲ್ಲಿ ಕವಿತಾ, ನನ್ನ ಮತ್ತು ಕುಂದ್ರಾ ಸಂಬಂಧ ಮುರಿಯುಲು ಶಿಲ್ಪಾಶೆಟ್ಟಿಯೇ ಕಾರಣ ಎಂದು ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.