ETV Bharat / bharat

'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್‌ ಅವರನ್ನೊಮ್ಮೆ ನೋಡಿ!

author img

By

Published : Apr 7, 2022, 8:23 PM IST

ಸದಾ ಒಂದಿಲ್ಲೊಂದು 'ವಿಭಿನ್ನ' ಕಾರಣಗಳಿಂದ ಟ್ರೋಲ್​​ಗೊಳಗಾಗುವ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್​, ಇಂದು ಮತ್ತೊಂದು ವಿಚಾರಕ್ಕಾಗಿ ಮುನ್ನಲೆಗೆ ಬಂದಿದ್ದಾರೆ.

Shashi Tharoor, NCP MP Supriya Sule
Shashi Tharoor, NCP MP Supriya Sule

ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್​ ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್​​​ ಅಬ್ದುಲ್ಲಾ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ ಗುಸು ಗುಸು ಮಾತನಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಸದಾ ಒಂದಿಲ್ಲೊಂದು 'ವಿಭಿನ್ನ' ಕಾರಣಗಳಿಂದ ಟ್ರೋಲ್​​​ಗೊಳಗಾಗುವ ಶಶಿ ತರೂರ್​ ಇದೀಗ ಮತ್ತೆ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಸಂಸತ್ತಿನಲ್ಲಿ ಸಂಸದೆ ಸುಪ್ರಿಯಾ ಸುಳೆ ಜೊತೆ ಮಾತನಾಡುತ್ತಾ ಕುಳಿತುಕೊಂಡಿದ್ದ ಭಂಗಿ.

ಸದನದಲ್ಲಿ ಫಾರೂಕ್​​ ಅಬ್ದುಲ್ಲಾ ಮಾತನಾಡುತ್ತಿದ್ದಾಗ ಅವರ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಶಶಿ ತರೂರ್​​ ಹಾಗೂ ಸುಪ್ರಿಯಾ ಸುಳೆ ಗುಸು ಗುಸು ಮಾತನಾಡುತ್ತಿದ್ದರು. ಶಶಿ ತರೂರ್ ತಾವು ಕುಳಿತುಕೊಂಡ ಡೆಸ್ಕ್ ಮೇಲೆ ಎರಡೂ ಕೈಗಳನ್ನಿಟ್ಟುಕೊಂಡು, ಅದರ ಮೇಲೆ ತಮ್ಮ ಮುಖವನ್ನಿಟ್ಟು ಮುಗುಳ್ನಗುತ್ತಾ ಮಾತನಾಡುತ್ತಿದ್ದರು. ಈ ವಿಡಿಯೋಗೆ 'ಪುಷ್ಪಾ' ಚಿತ್ರದ ಶ್ರೀವಲ್ಲಿ ಹಾಡು ಹಾಕಿ, ವೈರಲ್​ ಮಾಡಲಾಗಿದೆ.

ಈ ಹಿಂದೆ ಕೂಡ ಮಹಿಳಾ ಸಂಸದೆಯರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಶಶಿ ತರೂರ್​, ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ? ಎಂಬ ಶೀರ್ಷಿಕೆ ನೀಡಿದ್ದರು. ಇದಕ್ಕೆ ಇನ್ನಿಲ್ಲದ ಟೀಕೆ ವ್ಯಕ್ತವಾಗಿತ್ತು. ಬಳಿಕ ಅವರು ಸ್ಪಷ್ಟನೆ ನೀಡಬೇಕಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.