ETV Bharat / bharat

ಪ್ರಚೋದನಕಾರಿ ಬಟ್ಟೆ ಧರಿಸಿದ್ದರಿಂದ ಇದು ಲೈಂಗಿಕ ಕಿರುಕುಳ ಆಗುವುದಿಲ್ಲ.. ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ

author img

By

Published : Aug 17, 2022, 2:15 PM IST

Updated : Aug 17, 2022, 2:33 PM IST

ಕೋಯಿಕ್ಕೋಡ್ ನ್ಯಾಯಾಲಯವು ಲೈಂಗಿಕ ಕಿರುಕುಳ ಪ್ರಕರಣ ಎದುರಿದುತ್ತಿದ್ದ 74 ವರ್ಷದ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ವಿಚಾರಣೆ ವೇಳೆ ನ್ಯಾಯಾಲಯ ಕೆಲವು ಹೇಳಿಕೆಗಳನ್ನು ನೀಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

Sexual assault will not stand if the woman is wearing a sexually provocative dress; says a sessions court judgment
Sexual assault will not stand if the woman is wearing a sexually provocative dress; says a sessions court judgment

ಕೋಯಿಕ್ಕೋಡ್ (ಕೇರಳ): ಮಹಿಳೆಯೊಂದಿಗೆ ದುರ್ನಡತೆ ಮತ್ತು ಲೈಂಗಿಕ ಕಿರುಕುಳ ಆರೋಪ ಪ್ರಕರಣ ಎದುರಿಸುತ್ತಿರುವ ಖ್ಯಾತ ಬರಹಗಾರ ಮತ್ತು ಹೋರಾಟಗಾರ ಸಿವಿಕ್ ಚಂದನ್​ಗೆ ಕೋರ್ಟ್​​ ಜಾಮೀನು ನೀಡಿದೆ. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೇರಳದ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯವು ಕೆಲವು ಟಿಪ್ಪಣಿಗಳನ್ನು ಮಾಡಿದೆ. ಈ ವಿಚಾರ ಕೇರಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಿವಿಕ್ ಚಂದ್ರನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್ ಕೃಷ್ಣಕುಮಾರ್ ಅವರ ಪೀಠ, ಮಹಿಳೆಯು ಲೈಂಗಿಕವಾಗಿ ಪ್ರಚೋದನಕಾರಿ ಉಡುಗೆ ಧರಿಸಿರುವುದರಿಂದ ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 354A ಅಡಿಯಲ್ಲಿ ಮೇಲ್ಮನವಿ ಸಲ್ಲಿಕೆ ಅರ್ಜಿ ಸಲ್ಲಿಸಿದರೂ ನಿಲ್ಲುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೇ 74 ವರ್ಷ ವಯಸ್ಸಿನ ಮತ್ತು ದೈಹಿಕವಾಗಿ ಅಶಕ್ತರಾಗಿರುವ ವ್ಯಕ್ತಿಯೊಬ್ಬರು ಬಲವಂತವಾಗಿ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಬಹುದು ಎಂದು ನಂಬುವುದು ಕಷ್ಟ ಎಂದು ಸಹ ನ್ಯಾಯಾಲಯ ಉಲ್ಲೇಖಿಸಿದೆ. ಅಲ್ಲದೇ ಆರೋಪಿ ಸಿವಿಕ್ ಚಂದ್ರನ್ ಅವರು ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿದ ಛಾಯಾಚಿತ್ರಗಳನ್ನು ಗಮನಿಸಿದರೆ, ಮೂಲ ದೂರುದಾರ ಸ್ವತಃ ಲೈಂಗಿಕವಾಗಿ ಪ್ರಚೋದಿಸುವ ಬಟ್ಟೆಗಳನ್ನು ಧರಿಸಿದ್ದರು ಎಂದು ತೋರುತ್ತದೆ ಎಂದು ಉಲ್ಲೇಖಿಸಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿ ಆದೇಶ ಕೊಟ್ಟಿದೆ.

ಸದ್ಯ ನ್ಯಾಯಮೂರ್ತಿ ಎಸ್ ಕೃಷ್ಣಕುಮಾರ್ ಅವರು ತಮ್ಮ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಿರುವ ಈ ಹೇಳಿಕೆಗಳು ಕೇರಳದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಇನ್ನು ಸಿವಿಕ್ ಚಂದ್ರನ್ ಅವರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದರು. ಸದ್ಯ ಜಾಮೀನ ಮೇಲೆ ಹೊರ ಬಂದಿದ್ದಾರೆ.

ಇದನ್ನು ಓದಿ:ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು..ಕೇಂದ್ರ, ಚುನಾವಣಾ ಆಯೋಗದ ಅಭಿಪ್ರಾಯ ಕೇಳಿದ ಸುಪ್ರೀಂ

Last Updated :Aug 17, 2022, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.