ETV Bharat / bharat

ರೈಲು ಅಪಘಾತದಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರ ಸಾವು.. 170ಕ್ಕೂ ಹೆಚ್ಚು ಮಂದಿಗೆ ಗಾಯ.. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ

author img

By

Published : Jun 2, 2023, 9:48 PM IST

Updated : Jun 2, 2023, 10:48 PM IST

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್​ ಎಕ್ಸ್​ಪ್ರೆಸ್​​ ರೈಲು ಅಪಘಾತಕ್ಕೀಡಾಗಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರು ರೈಲ್ವೆ ಖಾತೆ ಸಚಿವ ಅಶ್ಬಿನಿ ವೈಷ್ಣವ್​ ಜತೆ ಮಾತನಾಡಿದ್ದಾರೆ. ಪರಿಸ್ಥಿತಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

several-feared-injured-after-coromandel-express-derails-in-odisha
ಒಡಿಶಾದ ಬಾಲಸೋರ್​ನಲ್ಲಿ ಎಕ್ಸ್​ಪ್ರೆಸ್​​ ರೈಲು ಅಪಘಾತ: ಹಲವರಿಗೆ ಗಾಯ

  • Union Railways Minister Ashwini Vaishnaw rushing to the accident site in Balasore, Odisha.

    Hundreds are feared to be injured in accident involving the three trains. pic.twitter.com/SR3qgQUDv3

    — ANI (@ANI) June 2, 2023 " class="align-text-top noRightClick twitterSection" data=" ">

ಭುವನೇಶ್ವರ (ಒಡಿಶಾ): ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್​ ಎಕ್ಸ್​ಪ್ರೆಸ್​​ ರೈಲು ಅಪಘಾತಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 170 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಬಲಸ್ವರ್ ಜಿಲ್ಲೆಯ ಬಹಂಗಾ ಬಳಿ ಎಕ್ಸ್​ಪ್ರೆಸ್​ ರೈಲು ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 4 ಭೋಗಿಗಳು ಹಳಿ ತಪ್ಪಿರುವುದಾಗಿ ತಿಳಿದು ಬಂದಿದೆ.

ಈ ನಡುವೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವರು ಘೋಷಣೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 2 ಲಕ್ಷ ನೀಡುವುದಾಗಿಯೂ ಅಶ್ವಿನಿ ವೈಷ್ಣವ್​ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ ಘೋಷಣೆ ಮಾಡಿದ್ದಾರೆ.

  • Odisha train accident | Union Railways Minister Ashwini Vaishnaw announces ex-gratia compensation of Rs 10 lakhs in case of death of accident victims and Rs 2 lakhs for those with grievous injuries and Rs 50,000 for those with minor injuries. pic.twitter.com/Pr7ddxoVi4

    — ANI (@ANI) June 2, 2023 " class="align-text-top noRightClick twitterSection" data=" ">
  • Odisha train accident | There have been casualties but we haven't yet counted. It was such a violent train involving three trains - two passenger trains and one goods train: Odisha Chief Secretary Pradeep Jena pic.twitter.com/jRxoEUbtxf

    — ANI (@ANI) June 2, 2023 " class="align-text-top noRightClick twitterSection" data=" ">

ಈ ನಡುವೆ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾಗಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದ್ದು,ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ. ಎರಡು ರೈಲುಗಳು ಹಳಿ ತಪ್ಪಿದ್ದು, 600- 700 ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದು, 500 ಜನರು ರೈಲಿನಲ್ಲಿ ಸಿಲುಕಿದ್ದು, ಅವರ ರಕ್ಷಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಪಘಾತದ ಸ್ಥಳದಲ್ಲಿ ಸುಮಾರು 50 ಆಂಬ್ಯುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ. ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (CDMO) ಮತ್ತು ಅವರ ತಂಡವು ಸ್ಥಳದಲ್ಲಿದ್ದು, ಆಂಬ್ಯುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆಗೆ ನಿರ್ದೇಶನ ನೀಡುತ್ತಿದೆ. ಬೇರೆ ಜಿಲ್ಲೆಗಳಿಂದ 50 ವೈದ್ಯರನ್ನು ಕರೆಸಿಕೊಳ್ಳಲಾಗಿದೆ. SCB MCH ನಿಂದ ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಭುವನೇಶ್ವರ ಮತ್ತು ಕಟಕ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸ್ವೀಕರಿಸಲು ಸಿದ್ಧವಾಗಿವೆ ಎಂದು ಒಡಿಶಾ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

132 ಗಾಯಾಳುಗಳನ್ನು ಸೊರೊ ಸಿಎಚ್‌ಸಿ, ಗೋಪಾಲ್‌ಪುರ ಸಿಎಚ್‌ಸಿ ಮತ್ತು ಖಾಂತಪದ ಪಿಎಚ್‌ಸಿಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಾಲಸೋರ್​ ಎಂಡಿ 47 ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಹಿನ್ನೆಲೆಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ತಾತ್ಕಾಲಿಕ ಸಹಾಯವಾಣಿ ಸಂಖ್ಯೆ 044- 2535 4771 ಆಗಿದ್ದು, ಈ ನಂಬರಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಒಡಿಶಾದ ಬಾಲಸೋರ್‌ನ ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ. ಮೂರು ರೈಲುಗಳು ಅಪಘಾತಕ್ಕೆ ಒಳಗಾಗಿವೆ. ಈ ಭೀಕರ ಅಪಘಾತದಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರು ಟ್ವೀಟ್​ ಮಾಡಿ ವಿಷಯ ತಿಳಿಸಿದ್ದಾರೆ.

ಒಡಿಶಾ ಸಿಎಂರಿಂದಲೂ ಪರಿಸ್ಥಿತಿ ಮೇಲೆ ನಿಗಾ: ಈ ನಡುವೆ, ಒಡಿಶಾ ಸಿಎಂ ಅವರು, ಅಲ್ಲಿನ ಸಚಿವರಾದ ಪ್ರಮೀಳಾ ಮಲ್ಲಿಕ್ ಮತ್ತು ವಿಶೇಷ ಪರಿಹಾರ ಆಯುಕ್ತರಿಗೆ (ಎಸ್‌ಆರ್‌ಸಿ) ತಕ್ಷಣ ಅಪಘಾತ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಸಚಿವರು ಮತ್ತು ಎಸ್‌ಆರ್‌ಸಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ.

  • Odisha train accident | I have just reviewed the situation about this truly tragic railway accident. I will be visiting the spot tomorrow morning: Odisha CM Naveen Patnaik pic.twitter.com/ig5fHOXsKH

    — ANI (@ANI) June 2, 2023 " class="align-text-top noRightClick twitterSection" data=" ">

ಇನ್ನು ರೈಲ್ವೆ ಭೋಗಿಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿಲುಕಿ ಹಾಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ತಂಡಗಳು ಸ್ಥಳಕ್ಕೆ ತೆರಳಿವೆ. ಬಾಲಸೋರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಆಡಳಿತ ಅಧಿಕಾರಿಗಳು ಜೊತೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.

ನವೀನ್​ ಪಟ್ನಾನಾಯಕ್​ ಹೇಳಿದ್ದೇನು?: ಈ ರೈಲ್ವೇ ಅಪಘಾತದ ಬಗ್ಗೆ ತಿಳಿಯಿತು. ಈಗಷ್ಟೇ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಹೆಚ್ಚುವರಿ ರಕ್ಷಣಾ ತಂಡವು, ಅಗ್ನಿಶಾಮಕ ಮತ್ತು ವಿಪತ್ತು ಪ್ರತಿಕ್ರಿಯೆ ಅಕಾಡೆಮಿ ಭುವನೇಶ್ವರದ ಮುಂಗಡ ರಕ್ಷಣಾ ಸಾಧನಗಳೊಂದಿಗೆ ರೈಲು ಅಪಘಾತ ಸ್ಥಳಕ್ಕೆ ತೆರಳಿದೆ. ಈ ತಂಡದಲ್ಲಿ 26 ಸದಸ್ಯರು ಇದ್ದಾರೆ ಎಂದು ಒಡಿಶಾ ಸರ್ಕಾರ ಹೇಳಿದೆ.

ಅಪಘಾತ ಸ್ಥಳ ತಲುಪಿದ ಅಧಿಕಾರಿಗಳು: ಪ್ರಸ್ತುತ ಘಟನಾ ಸ್ಥಳದಲ್ಲಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಮತ್ತು ಎಸ್​ಆರ್​ಸಿಗೆ ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ಸ್ಥಳಕ್ಕೆ ತಲುಪಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ.

ಘಟನೆಯಲ್ಲಿ ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಒಡಿಶಾ ಅಗ್ನಿಶಾಮಕ ಸೇವೆಗಳ ಡಿಜಿ ಸುಧಾಂಶು ಸಾರಂಗಿ ಅವರು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್‌ಆರ್‌ಸಿ ಒಡಿಶಾ ಮತ್ತು ಹಿರಿಯ ಅಧಿಕಾರಿಗಳಾದ ಹೇಮಂತ್ ಶರ್ಮಾ, ಬಲ್ವಂತ್ ಸಿಂಗ್, ಅರವಿಂದ್ ಅಗರ್ವಾಲ್, ಅಗ್ನಿಶಾಮಕ ಸೇವೆಗಳ ಡಿಜಿ ಬಹನಾಗಾದಲ್ಲಿದ್ದು, ರೈಲು ಅಪಘಾತದ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ: ಬಾಲಸೋರ್ ಮತ್ತು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜು ಮತ್ತು ಎಲ್ಲ ಆಸ್ಪತ್ರೆಗಳನ್ನ ಹೈ ಅಲರ್ಟ್ ನಲ್ಲಿ ಇರಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮೂರು NDRF ಘಟಕಗಳು, 4 ODRAF ಘಟಕಗಳು ಮತ್ತು 60 ಆಂಬ್ಯುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ. ಬಾಲಾಸೋರ್ ವೈದ್ಯಕೀಯ ಕಾಲೇಜಿನಿಂದ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಇನ್ನು ಗಾಯಗೊಂಡ ಹತ್ತು ಪ್ರಯಾಣಿಕರಿಗೆ ಬಾಲಸೋರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • Odisha train accident | Bhubaneswar: CM Naveen Patnaik arrives at the Special Relief Commissioner (SRC) control room to take stock of the relief operation in the aftermath of a train derailment in Balasore district. pic.twitter.com/S2ogBJOs0D

    — ANI (@ANI) June 2, 2023 " class="align-text-top noRightClick twitterSection" data=" ">

ಪ್ರಧಾನಿ ಟ್ವೀಟ್​, ರೈಲ್ವೆ ಸಚಿವರೊಂದಿಗೆ ಮಾತುಕತೆ: ಅಪಘಾತದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರು ರೈಲ್ವೆ ಖಾತೆ ಸಚಿವ ಅಶ್ಬಿನಿ ವೈಷ್ಣವ್​ ಜತೆ ಮಾತನಾಡಿದ್ದಾರೆ. ಪರಿಸ್ಥಿತಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

  • Prime Minister Narendra Modi expresses grief over a train accident in Odisha's Balasore district, speaks with Union Railways minister Ashwini Vaishnaw and takes stock of the situation. pic.twitter.com/QhY1ZOmhq0

    — ANI (@ANI) June 2, 2023 " class="align-text-top noRightClick twitterSection" data=" ">

ಘಟನೆ ಬಗ್ಗೆ ಸಂತಾಪ ವ್ಯಕ್ತೊಪಡಿಸಿದ ರಾಷ್ಟ್ರಪತಿ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

  • "Deeply anguished to know about the loss of lives in an unfortunate rail accident in Balasore, Odisha," tweets President of India Droupadi Murmu pic.twitter.com/3MlPYFl1nl

    — ANI (@ANI) June 2, 2023 " class="align-text-top noRightClick twitterSection" data=" ">

ಧಂಖರ್ ಟ್ವೀಟ್​: "ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ" ಎಂದು ಭಾರತದ ಉಪಾಧ್ಯಕ್ಷ ಜಗದೀಪ್ ಧಂಖರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • "Deeply anguished by the loss of lives in a train accident in Balasore, Odisha," tweets Vice President of India Jagdeep Dhankhar pic.twitter.com/P06TB7xaJT

    — ANI (@ANI) June 2, 2023 " class="align-text-top noRightClick twitterSection" data=" ">

ಇದನ್ನು ಓದಿ: ಒಡಿಶಾದ ಬಾಲಸೋರ್​ನಲ್ಲಿ ಕೋರಮಂಡಲ್​ ಎಕ್ಸ್​ಪ್ರೆಸ್​​ ರೈಲು ಅಪಘಾತ: ಹಲವರಿಗೆ ಗಂಭೀರ ಗಾಯ

Last Updated : Jun 2, 2023, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.