ETV Bharat / bharat

ಪ್ರಸಕ್ತ ವರ್ಷ ಶಬರಿಮಲೆಯಲ್ಲಿ ದಾಖಲೆಯ 300 ಕೋಟಿ ಆದಾಯ ಸಂಗ್ರಹ: 7 ಕೋಟಿ ಮೌಲ್ಯದ ನಾಣ್ಯಗಳ ಎಣಿಕೆ ಬಾಕಿ

author img

By

Published : Jan 19, 2023, 10:12 PM IST

ಶಬರಿಮಲೆಯಲ್ಲಿ 300 ಕೋಟಿ ಆದಾಯ ಸಂಗ್ರಹ - ಶಬರಿಮಲೆಗೆ ಹರಿಬಂದ ಭಕ್ತ ಸಾಗರ - 7 ಕೋಟಿ ಮೌಲ್ಯದ ನಾಣ್ಯಗಳ ಎಣಿಕೆ ಬಾಕಿ - 2018ರಲ್ಲಿ 260 ಕೋಟಿ ಆದಾಯ, ಪ್ರಸಕ್ತ ವರ್ಷದಲ್ಲಿ 318 ಕೋಟಿ ಇನ್​​ಕಮ್​​

Etv seven-crores-worth-coins-remain-for-counting-sabarimala-all-set-to-achieve-a-record-revenue-this-year
ಪ್ರಸಕ್ತ ವರ್ಷ ಶಬರಿಮಲೆಯಲ್ಲಿ ದಾಖಲೆಯ 300 ಕೋಟಿ ಆದಾಯ ಸಂಗ್ರಹ : 7 ಕೋಟಿ ಮೌಲ್ಯದ ನಾಣ್ಯಗಳ ಎಣಿಕೆ ಬಾಕಿ

ಪತ್ತನಂತಿಟ್ಟ(ಕೇರಳ): ದಕ್ಷಿಣ ಭಾರತದ ಪ್ರಮುಖ ತೀರ್ಥಯಾತ್ರ ಸ್ಥಳವಾದ ಶಬರಿಮಲೆಗೆ ಈ ಬಾರಿ ಭಕ್ತರ ದಂಡೇ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಹೆಚ್ಚುವರಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಮಂಡಲ ಪೂಜೆಯ ಸಂದರ್ಭದಲ್ಲಿ ಸುಮಾರು 29 ಲಕ್ಷ ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದರು.

ಈ ವರ್ಷ ಶಬರಿಮಲೆಗೆ ಹೆಚ್ಚಿನ ಭಕ್ತರೂ ಆಗಮಿಸಿರುವುದಲ್ಲದೇ ಹೆಚ್ಚಿನ ಆದಾಯವು ಹರಿದುಬಂದಿದೆ. ದೇವಾಲಯಕ್ಕೆ ಹರಿದುಬಂದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಕಾಣಿಕೆಗಳ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಗಳಿಂದ ಸಂಗ್ರಹಿಸಿದ ನಾಣ್ಯಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಹಲವು ದಿನಗಳು ಬೇಕಾಗಬಹುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

7 ಕೋಟಿ ಮೌಲ್ಯದ ನಾಣ್ಯ ಎಣಿಕೆ ಬಾಕಿ : ಸುಮಾರು 7 ಕೋಟಿಗೂ ಅಧಿಕ ಮೌಲ್ಯದ ನಾಣ್ಯಗಳ ಎಣಿಕೆ ನಡೆಯಲಿದ್ದು, ನಾಣ್ಯ ಎಣಿಕೆಗೆ ಅರವತ್ತು ಜನರನ್ನು ನಿಯೋಜಿಸಲಾಗಿದೆ. ಅಲ್ಲದೆ ನೀಲಕ್ಕಲ್ ಮತ್ತು ಪಂಬಾದ ಎರಡು ಹುಂಡಿಗಳನ್ನು ಇನ್ನೂ ತೆರೆಯಬೇಕಿದೆ. ಈ ವರ್ಷ ದೇವಾಲಯವು ಸುಮಾರು 318 ಕೋಟಿ ರೂ. ಆದಾಯ ಗಳಿಸಿದ್ದು, ಇನ್ನು ಹುಂಡಿಗಳ ಎಣಿಕೆ ಪೂರ್ಣಗೊಂಡಾಗ 330 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ 2018ರಲ್ಲಿ 260 ಕೋಟಿ ರೂ ಆದಾಯ ಗಳಿಸಿತ್ತು.

ಮಂಡಲಪೂಜೆ ಋತುವಿನಲ್ಲಿ 222 ಕೋಟಿ ಸಂಗ್ರಹ : ಈ ಬಾರಿಯ ವಾರ್ಷಿಕ ಮಂಡಲ ಪೂಜೆ ಋತುವಿನಲ್ಲಿ ಅಂದಾಜು 29 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಮಾರು 222.98 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿತ್ತು.

ಶಬರಿಮಲೆಯಲ್ಲಿ 41 ದಿನಗಳ ಕಾಲ ನಡೆಯುವ ಮಂಡಲ ಪೂಜೆಯು ನವೆಂಬರ್​​ 17ರಂದು ಆರಂಭವಾಗಿತ್ತು. ಅಯ್ಯಪ್ಪನ ಭಕ್ತರು ಮಂಡಲ ಪೂಜೆ ನಡೆಯುವ 41 ದಿನಗಳ ಮೊದಲು ವ್ರತವನ್ನಾಚರಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಕಳೆದ ಬಾರಿಗಿಂತ ಶೇ.20ರಷ್ಟು ಭಕ್ತರು ಹೆಚ್ಚುವರಿಯಾಗಿ ದೇವರ ಸನ್ನಿಧಿಗೆ ಆಗಮಿಸಿದ್ದರು ಎಂದು ಆಡಳಿತ ಮಂಡಳಿ ತಿಳಿಸಿತ್ತು.

70 ಕೋಟಿ ಹುಂಡಿ ಕಾಣಿಕೆ ಸಂಗ್ರಹ : ಕೋವಿಡ್​ ಹಿನ್ನಲೆ ಶಬರಿಮಲೆ ಯಾತ್ರಾರ್ಥಿಗಳಿಗೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟದಲ್ಲಿ ಕುಸಿತ ಕಂಡಿತ್ತು. ಆದರೂ ಈ ಬಾರಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಇದರಿಂದ ದೇವಸ್ಥಾನಕ್ಕೆ ಸುಮಾರು 39 ದಿನಗಳಲ್ಲಿ 222.98 ಕೋಟಿ ರೂ ಕಾಣಿಕೆ ಸಂಗ್ರಹವಾಗಿತ್ತು. ಇನ್ನು ಹುಂಡಿಯಲ್ಲೇ ಸುಮಾರು 70.10 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದರು.

ದೇವಾಲಯದ ಕಾಣಿಕೆ ಎಣಿಕೆ ವಿಳಂಬದಿಂದಾಗಿ ಲಕ್ಷಾಂತರ ಮೌಲ್ಯದ ನೋಟುಗಳು ಹಾನಿಗೊಳಗಾದ ಹಿನ್ನೆಲೆ ಕೇರಳ ಹೈಕೋರ್ಟ್ ತಿರುವಾಂಕೂರು ದೇವಸ್ವಂ ಮಂಡಳಿಯಿಂದ ವರದಿ ಕೇಳಿದೆ. ದೇವಸ್ಥಾನದ ಕಾಣಿಕೆ ಎಣಿಕೆಯಲ್ಲಿ ಏನಾದರೂ ಲೋಪ ಉಂಟಾಗಿದೆಯೇ ಎಂಬ ಬಗ್ಗೆ ವರದಿ ನೀಡುವಂತೆ ವಿಜಿಲೆನ್ಸ್ ವಿಭಾಗಕ್ಕೆ ಸೂಚಿಸಿದೆ.ಇನ್ನು ಜನವರಿ 20 ರಂದು ಮಕರವಿಳಕ್ ಋತುವಿನ​ ಶಬರಿಮಲೆ ಯಾತ್ರೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ: 39 ದಿನಗಳಲ್ಲಿ 222 ಕೋಟಿ ರೂ ಕಾಣಿಕೆ ಸಂಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.