ETV Bharat / bharat

ಬೂಸ್ಟರ್​ ಡೋಸ್​ ನೀಡಲು ಕೋವಿಶೀಲ್ಡ್​ಗೆ ಅನುಮತಿ ನೀಡಿ: ಸೀರಂ ಸಂಸ್ಥೆಯಿಂದ ಡಿಸಿಜಿಐಗೆ ಪತ್ರ

author img

By

Published : Dec 1, 2021, 10:44 PM IST

ಕರೋನಾ ಹೊಸ ರೂಪಾಂತರಿ ತಳಿ ಭೀತಿ ಮತ್ತು ದೇಶದಲ್ಲಿ ಲಸಿಕೆ ಸಾಕಷ್ಟು ದಾಸ್ತಾನಿರುವ ಕಾರಣ ಜನರಿಗೆ ಬೂಸ್ಟರ್​ ಡೋಸ್​ಗೆ ಅನುಮೋದನೆ ನೀಡಬೇಕು ಎಂದು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ, ಭಾರತದ ಔಷಧ ನಿಯಂತ್ರಕ ಸಂಸ್ಥೆಯನ್ನು ಕೋರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

serum institute
ಸೀರಂ ಸಂಸ್ಥೆಯಿಂದ ಡಿಸಿಜಿಐಗೆ ಪತ್ರ

ನವದೆಹಲಿ: ಕರೋನಾ ಹೊಸ ರೂಪಾಂತರಿ ತಳಿ ಭೀತಿ ಮತ್ತು ದೇಶದಲ್ಲಿ ಲಸಿಕೆ ಸಾಕಷ್ಟು ದಾಸ್ತಾನಿರುವ ಕಾರಣ ಜನರಿಗೆ ಕೋವಿಶೀಲ್ಡ್​ ಲಸಿಕೆಯ ಬೂಸ್ಟರ್​ ಡೋಸ್​ಗೆ(3ನೇ ಡೋಸ್​) ಅನುಮೋದನೆ ನೀಡಬೇಕು ಎಂದು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ, ಭಾರತದ ಔಷಧ ನಿಯಂತ್ರಕ ಸಂಸ್ಥೆಯನ್ನು ಕೋರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿರುವ ಭೀತಿ ದೂರವಾಗಿಲ್ಲ. ಅನೇಕ ರಾಷ್ಟ್ರಗಳು ಕೊರೋನಾದಿಂದ ಬಚಾವ್​ ಆಗಲು ಬೂಸ್ಟರ್​ ಡೋಸ್​ ನೀಡಲು ಮುಂದಾಗಿವೆ. ಇಂಗ್ಲೆಂಡ್​ನಲ್ಲಿ ಅಲ್ಲಿನ ಸರ್ಕಾರ ಈಗಾಗಲೇ ಆಸ್ಟ್ರಾಜೆನಿಕಾ ಲಸಿಕೆಯ ಬೂಸ್ಟರ್​ ಡೋಸ್​ ಅನ್ನು ಜನರಿಗೆ ನೀಡಲು ಮುಂದಾಗಿದೆ.

ಭಾರತದಲ್ಲೂ ಬೂಸ್ಟರ್​ ಡೋಸ್​ ನೀಡಲು ಅನುಮೋದಿಸಿ ಎಂದು ಸೀರಮ್​ ಸಂಸ್ಥೆಯ ಪ್ರಕಾಶ್ ಕುಮಾರ್ ಸಿಂಗ್ ಡಿಸಿಜಿಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. 2 ಡೋಸ್​ ಪಡೆದ ಜನರು ಮೂರನೇ ಬೂಸ್ಟರ್​ ಡೋಸ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ದೇಶದಲ್ಲಿ ಲಸಿಕೆ ಕೊರತೆಯೂ ಇಲ್ಲ ಎಂದು ಸಿಂಗ್​ ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರವೂ ಕೂಡ ಬೂಸ್ಟರ್​ಡೋಸ್​ನ ಅಗತ್ಯತೆ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ತಜ್ಱರ ಸಲಹೆ ಕೇಳಿದೆ ಎಂದು ತಿಳಿದು ಬಂದಿದೆ. ಅಲ್ಲದೇ, 2 ಡೋಸ್​ ಪಡೆದ ಜನರಿಗೆ ಮೂರನೇ ಡೋಸ್​(ಬೂಸ್ಟರ್​ ಡೋಸ್​) ನೀಡುವ ಬಗ್ಗೆ ನಿಮ್ಮ ನಿಲುವು ಏನು ಎಂದು ದೆಹಲಿ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿತ್ತು.

ಇತ್ತೀಚೆಗೆ ಕೇರಳ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢ ಸರ್ಕಾರ ಕರೋನಾ ಲಸಿಕೆಯ ಬೂಸ್ಟರ್ ಡೋಸ್‌ ನೀಡಲು ಪರಾಮರ್ಶಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.