ETV Bharat / bharat

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ: ಹರಿಯಾಣದಲ್ಲಿ 'ಕೈ'ಗೆ ಕುದುರೆ ವ್ಯಾಪಾರದ ಭೀತಿ

author img

By

Published : Jun 1, 2022, 3:30 PM IST

ಜೂ.10ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ​​ಶಾಸಕರ ಕುದುರೆ ವ್ಯಾಪಾರದ ಆತಂಕ ಕಾಡುತ್ತಿದೆ. ಇತ್ತ, ಬಿಜೆಪಿಯು ಚುನಾವಣೆ ರಾಜ್ಯಗಳಿಗೆ ತನ್ನ ಉಸ್ತುವಾರಿಗಳನ್ನು ನೇಮಿಸಿದೆ.

Rajya Sabha polls
ರಾಜ್ಯಸಭೆ ಚುನಾವಣೆ ಕಸರತ್ತು

ನವದೆಹಲಿ: ರಾಜಸಭೆ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರದ ಭೀತಿ ಎದುರಾಗಿದ್ದು, ಹರಿಯಾಣದಲ್ಲಿ ಕಾಂಗ್ರೆಸ್​ ತನ್ನ ಶಾಸಕರನ್ನು ರೆಸಾರ್ಟ್​ಗೆ ಕಳುಹಿಸಲು ಮುಂದಾಗಿದೆ. ಕಾಂಗ್ರೆಸ್​ ಆಡಳಿತವಿರುವ ಛತ್ತೀಸ್​ಗಢದಲ್ಲಿ ಈಗಾಗಲೇ ರೂಮ್​ಗಳು ಸಹ ಬುಕ್​ ಆಗಿವೆ ಎಂದು ವರದಿಯಾಗಿದೆ.

ಜೂ.10ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಹರಿಯಾಣದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್​ ಮಕೇನ್​​ ಸ್ಪರ್ಧಿಸಿದ್ದಾರೆ. ಆದರೆ, ಪಕ್ಷವು ರಾಜ್ಯದ ಹೊರಗಿನವರನ್ನು ಕಣಕ್ಕಿಳಿಸಿರುವ ಕಾರಣ ಅತೃಪ್ತಿ ಉಂಟಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಶಾಸಕರ ಕುದುರೆ ವ್ಯಾಪಾರದ ಆತಂಕವೂ ಕಾಂಗ್ರೆಸ್​ಗೆ ಕಾಡುತ್ತಿದೆ.

ಆದ್ದರಿಂದ ನಾಳೆಯಿಂದ (ಗುರುವಾರ) ಛತ್ತೀಸ್​ಗಢದ ರೆಸಾರ್ಟ್​ವೊಂದರಲ್ಲಿ ರೂಮ್​ ಬುಕ್​ ಮಾಡಲಾಗಿದೆ ಎನ್ನಲಾಗ್ತಿದೆ. ಆದರೆ, ಯಾವಾಗ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.

  • BJP has appointed Narendra Singh Tomar as in charge of Rajya Sabha elections for Rajasthan, Gajendra Singh Shekhawat for Haryana, G Kishan Reddy for Karnataka, and Ashwini Vaishnaw for Maharashtra. pic.twitter.com/c00hbuWG1B

    — ANI (@ANI) June 1, 2022 " class="align-text-top noRightClick twitterSection" data=" ">

ಬಿಜೆಪಿಯಿಂದ ಉಸ್ತುವಾರಿಗಳ ನೇಮಕ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯಾ ರಾಜ್ಯಗಳಿಗೆ ತನ್ನ ಉಸ್ತುವಾರಿಗಳನ್ನು ನೇಮಿಸಿದೆ. ಕರ್ನಾಟಕದ ಉಸ್ತುವಾರಿಯಾಗಿ ಕೇಂದ್ರ ಸಚಿವ ಕೆ.ಕಿಶನ್​ ರೆಡ್ಡಿ ಅವರನ್ನು ನೇಮಿಸಲಾಗಿದೆ. ಇತ್ತ, ರಾಜಸ್ಥಾನ-ನರೇಂದ್ರ ಸಿಂಗ್​ ತೋಮರ್​, ಹರಿಯಾಣ-ಗಜೇಂದ್ರ ಸಿಂಗ್​ ಶೇಖಾವತ್​ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾಗಿ ಅಶ್ವಿನಿ ವೈಷ್ಣವ್​ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ ಗಾಂಧಿ, ಪುತ್ರ ರಾಹುಲ್​​ಗೆ ಸಮನ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.