ETV Bharat / bharat

ಹುಷಾರ್​: ಮುಗಿದಿಲ್ಲ Covid 2ನೇ ಅಲೆ, 8 ರಾಜ್ಯಗಳಲ್ಲಿ ಹೆಚ್ಚಾದ ಕೊರೊನಾ; ಎಚ್ಚರಿಕೆ ನೀಡಿದ ಕೇಂದ್ರ

author img

By

Published : Aug 3, 2021, 5:33 PM IST

ದೇಶದಲ್ಲಿ ಕೋವಿಡ್​ನ ಎರಡನೇ ಅಲೆ ಮುಗಿದಿಲ್ಲ ಎಂದು ಕಳೆದ ಕೆಲ ದಿನಗಳಿಂದ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಿದ್ದು, ಕರ್ನಾಟಕದಲ್ಲೂ ಸೋಂಕಿತ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದೆ.

Lav Agarwal
Lav Agarwal

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಪ್ರಮುಖವಾಗಿ 8 ರಾಜ್ಯಗಳು ಈ ತೊಂದರೆಗೊಳಗಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಲವ್​ ಅಗರವಾಲ್​, 44 ಜಿಲ್ಲೆಗಳಲ್ಲಿ ಕೋವಿಡ್​ ಡೆಲ್ಟಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ದೇಶದಲ್ಲಿ ಕೋವಿಡ್​ನ ಎರಡನೇ ಅಲೆ ಮುಗಿದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ: ಭಾರತಕ್ಕೆ ಬಂದ ಕಂಚಿನ ಪದಕ ವಿಜೇತೆ ಸಿಂಧು.. Airportನಲ್ಲೇ ಸಿಕ್ಕಿತು ಅದ್ಧೂರಿ ಸ್ವಾಗತ

ಕಳೆದ ನಾಲ್ಕು ವಾರಗಳಿಂದ 18 ಜಿಲ್ಲೆಗಳಲ್ಲಿ ಕೊರೊನಾ ತೀವ್ರವಾಗಿ ಹಬ್ಬುತ್ತಿದ್ದು, ಕೊರೊನಾ ಮರು ಉತ್ಪಿತ್ತಿ ಪ್ರಮಾಣ(R-factor) ಹೆಚ್ಚಾಗಿದೆ ಎಂದರು. ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಕ್ಷದ್ವೀಪಂ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಪುದುಚೇರಿ ಹಾಗೂ ಕೇರಳದಲ್ಲಿ ಕೋವಿಡ್​​ ಆರ್ಭಟ ತುಸು ಹೆಚ್ಚಾಗಿದ್ದು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಕಡಿಮೆ ಸೋಂಕಿತ ಪ್ರಮಾಣ ಕಂಡು ಬರುತ್ತಿವೆ ಎಂದು ಮಾಹಿತಿ ನೀಡಿದರು.

ಉಳಿದಂತೆ ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಹರಿಯಾಣ, ಗೋವಾ, ದೆಹಲಿ ಹಾಗೂ ಜಾರ್ಖಂಡ್​ನಲ್ಲಿ ಕೋವಿಡ್ ಮರು ಉತ್ಪತ್ತಿ ಪ್ರಮಾಣ ಶೇ 1ರಷ್ಟಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 47.85 ಕೋಟಿ ಕೋವಿಡ್​ ಡೋಸ್​​ ನೀಡಲಾಗಿದ್ದು, 37.26 ಕೋಟಿ ಮೊದಲ ಹಾಗೂ 10.59 ಕೋಟಿ ಎರಡನೇ ಡೋಸ್​​ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.