ETV Bharat / bharat

ನೇರ ಮದುವೆ ದಿಬ್ಬಣಕ್ಕೆ ನುಗ್ಗಿದ ಕಾರು: ಓರ್ವ ಸ್ಥಳದಲ್ಲೇ ಸಾವು, 31 ಜನರಿಗೆ ಗಂಭೀರ ಗಾಯ

author img

By

Published : Feb 11, 2023, 6:35 PM IST

ಉತ್ತರಾಖಂಡ್​ನ ಹರಿದ್ವಾರದಲ್ಲಿ ರಸ್ತೆಯಲ್ಲಿ ಹೊರಟಿದ್ದ ಮದುವೆ ದಿಬ್ಬಣಕ್ಕೆ ಕಾರೊಂದು ನುಗ್ಗಿದ ಘಟನೆ ಜರುಗಿದೆ.

scorpio-car-collided-with-wedding-procession-in-haridwar
ನೇರ ಮದುವೆ ದಿಬ್ಬಣಕ್ಕೆ ನುಗ್ಗಿದ ಕಾರು: ಓರ್ವ ಸ್ಥಳದಲ್ಲೇ ಸಾವು, 31 ಜನರಿಗೆ ಗಂಭೀರ ಗಾಯ

ಹರಿದ್ವಾರ (ಉತ್ತರಾಖಂಡ್​): ಮದುವೆ ಮೆರವಣಿಗೆ ತೆರಳಿದ್ದಾಗ ದುರಂತವೊಂದು ನಡೆದಿದೆ. ರಸ್ತೆಯಲ್ಲಿ ಡಿಜೆ ಸುದ್ದಿಗೆ ನೃತ್ಯ ಮಾಡುತ್ತಾ ಹೋಗುತ್ತಿದ್ದವರಿಗೆ ವೇಗವಾಗಿ ಬಂದು ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ, ಇತರ 31 ಜನರು ಗಾಯಗೊಂಡಿದ್ದಾರೆ. ಉತ್ತರಾಖಂಡ್​ನ ಹರಿದ್ವಾರದಲ್ಲಿ ಈ ದುರ್ಘಟನೆ ವರದಿಯಾಗಿದೆ.

ಇಷ್ಟಕ್ಕೂ ನಡೆದಿದ್ದೇನು?: ಹರಿದ್ವಾರದ ಬಹದರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ನಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮದುವೆ ಮೆರವಣಿಗೆಯೊಂದು ಹೊರಟಿತ್ತು. ರಾತ್ರಿ 10.30ರವರೆಗೆ ಆರಂಭವಾದ ಮೆರವಣಿಗೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಬಂದು - ಬಗಳದವರು ಸಂತೋಷದಿಂದ ಪಾಲ್ಗೊಂಡಿದ್ದರು. ರಸ್ತೆ ಬದಿಯಲ್ಲಿ ಡಿಜೆ ಹಚ್ಚಿಕೊಂಡು ಅನೇಕರು ಯುವಕರು ಕುಣಿದು ಕುಪ್ಪಳಿಸುತ್ತಾ ಸಾಗುತ್ತಿದ್ದರು. 12 ಗಂಟೆ ಸುಮಾರಿಗೆ ಮೆರವಣಿಗೆಯು ಧನೋರಿ ರಸ್ತೆಯಲ್ಲಿರುವ ಸರ್ದಾರ್​ ಫಾರ್ಮ್​ ಹೌಸ್ ಬಳಿಗೆ ತಲುಪಿತ್ತು. ಇದೇ ವೇಳೆ ಸ್ಕಾರ್ಪಿಯೋ ಕಾರು ಮಯನಂತೆ ಬಂದಿದೆ.

ನೇರ ದಿಬ್ಬಣಕ್ಕೆ ನುಗ್ಗಿದ ಕಾರು: ರಸ್ತೆ ಬದಿಯಲ್ಲಿ ಸಂಭ್ರಮದಿಂದ ಮದುವೆ ಮೆರವಣಿಗೆ ಸಾಗುತ್ತಿತ್ತು. ಆಗ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ನೇರವಾಗಿ ಮೆರವಣಿಗೆಗೆ ನುಗ್ಗಿದೆ. ಕುಣಿಯುತ್ತಾ ಸಾಗುತ್ತಿದ್ದವರ ಮೇಲೆ ನೋಡು ನೋಡುತ್ತಿದ್ದ ಏಕಾಏಕಿ ಕಾರು ಗುದ್ದಿಕೊಂಡು ಹೋಗಿದೆ. ಇದರ ಪರಿಣಾಮ ಮದುವೆ ಸಮಾರಂಭದ ಖುಷಿಯಲ್ಲಿದ್ದವರೆಗೆ ಅರೆ ಕ್ಷಣ ಏನಾಗುತ್ತಿದೆ ಎಂದು ಗೊತ್ತೇ ಆಗಿಲ್ಲ.

ಮತ್ತೊಂದೆಡೆ, ಕಾರು ಗುದ್ದಿದ ರಭಸಕ್ಕೆ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ಸಾಗರ್ ಪ್ರದೇಶದ ನಿವಾಸಿ ರೈಸಿ ಎಂದು ಗುರುತಿಸಲಾಗಿದೆ. ಅಲ್ಲದೇ, ಮೆರವಣಿಗೆಯಲ್ಲಿ ಸಾಗುತ್ತಿದ್ದ ಇತರ 31 ಜನರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ಮದುವೆ ಸಂಭ್ರಮದಲ್ಲಿ ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನಶೆಯಲ್ಲಿದ್ದ ಕಾರು ಚಾಲಕ ಸೇರಿ ಐವರು: ಮದುವೆ ಮೆರವಣಿಗೆಗೆ ನುಗ್ಗಿದ ಕಾರಿನಲ್ಲಿ ಚಾಲಕ ಸೇರಿ ಐವರು ಸಂಚರಿಸುತ್ತಿದ್ದರು. ಚಾಲಕ ಸಮೇತವಾಗಿ ಎಲ್ಲರೂ ಸಹ ಮದ್ಯದ ನಶೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಕಾರು ಬೆನ್ನಟ್ಟಿ ಆಕ್ರೋಶಿತ ಜನರು ಹಿಡಿದಿದ್ದಾರೆ. ಅಲ್ಲದೇ, ಸ್ಕಾರ್ಪಿಯೋ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಎಲ್ಲರಿಗೂ ಹಿಗ್ಗಾಮುಗ್ಗಾ ಥಳಿಸಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಐವರ ಪೈಕಿ ಕಾರಿನ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈತನನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈತ ಸಂಘಕ್ಕೆ ಸೇರಿದ ಕಾರು?: ಮದುವೆ ದಿಬ್ಬಣಕ್ಕೆ ಗುದ್ದಿದ ಕಾರು ರೈತ ಸಂಘಟನೆಯಾದ ಭಾರತೀಯ ಕಿಸಾನ್ ಯೂನಿಯನ್​ನ ಸದಸ್ಯರೊಬ್ಬರಿಗೆ ಸೇರಿದೆ. ಸ್ಕಾರ್ಪಿಯೋ ಚಾಲಕ ಸಹರಾನ್‌ಪುರ ಜಿಲ್ಲೆಯ ಕಿಸಾನ್ ಯೂನಿಯನ್​ನ ಕಾರ್ಯದರ್ಶಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಬಹದರಾಬಾದ್ ಪೊಲೀಸ್ ಠಾಣಾಧಿಕಾರಿ ನಿತೇಶ್ ಶರ್ಮಾ ಪ್ರತಿಕ್ರಿಯಿಸಿದ್ದು, ಸದ್ಯ ಇಡೀ ಘಟನೆ ಕುರಿತಾಗಿ ಚಾಲಕ ಸೇರಿ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಪರಿಚಯ: ಮದುವೆಯಾಗುವುದಾಗಿ ನಂಬಿಸಿ ವರ್ತಕನಿಗೆ ವಂಚಿಸಿದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.