ETV Bharat / bharat

ಅಕ್ರಮ ಆಸ್ತಿ ಆರೋಪ ಪ್ರಕರಣದ ವರ್ಗಾವಣೆ ಕೋರಿ ಅರ್ಜಿ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್‌

author img

By ETV Bharat Karnataka Team

Published : Nov 3, 2023, 9:32 PM IST

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದ ವಿಚಾರಣೆಯನ್ನು ಹೈದರಾಬಾದ್​ನಿಂದ ಬೇರೆ ರಾಜ್ಯದ ನ್ಯಾಯಾಲಯಕ್ಕೆ ವರ್ಗಾವಣೆ ಕೋರಿ ಅತೃಪ್ತ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ರಘು ರಾಮಕೃಷ್ಣ ರಾಜು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

sc-notice-on-plea-seeking-transfer-of-disproportionate-assets-case-trial-against-andhra cm  Jagan
ಅಕ್ರಮ ಆಸ್ತಿ ಆರೋಪ ಪ್ರಕರಣದ ವರ್ಗಾವಣೆ ಕೋರಿ ಅರ್ಜಿ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್‌

ನವದೆಹಲಿ: ಹೈದರಾಬಾದ್‌ ನ್ಯಾಯಾಲಯದ ಮುಂದೆ ಬಾಕಿ ಇರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದ ವಿಚಾರಣೆಯನ್ನು ಬೇರೆ ಯಾವುದೇ ರಾಜ್ಯದ ನ್ಯಾಯಾಲಯ ಇಲ್ಲವೆ, ಮೇಲಾಗಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ವರ್ಗಾಯಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರ ವಿಚಾರಣೆ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸಿಎಂ ಜಗನ್ ಹಾಗೂ ಸಿಬಿಐಗೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.

ಜಗನ್ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದ ವಿಚಾರಣೆ ವರ್ಗಾವಣೆ ಕೋರಿ ಅತೃಪ್ತ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ರಘು ರಾಮಕೃಷ್ಣ ರಾಜು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌.ವಿ.ಎನ್‌.ಭಟ್ಟಿ ಅವರನ್ನೊಳಗೊಂಡ ಪೀಠವು ಇದರ ವಿಚಾರಣೆ ನಡೆಸಿ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ವಿಳಂಬವಾಗಲು ಕಾರಣವೇನು ಎಂಬುದನ್ನು ವಿವರಿಸುವಂತೆ ತನಿಖಾ ಸಂಸ್ಥೆ ಸಿಬಿಐಗೆ ನೋಟಿಸ್‌ ಜಾರಿ ಮಾಡಿದೆ.

ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ರೋಹನ್ ದಿವಾನ್ ಅವರ ಮೂಲಕ ರಾಮಕೃಷ್ಣ ರಾಜು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಕಾಳಜಿಯುಳ್ಳ ನಾಗರಿಕರಾಗಿದ್ದು, 17ನೇ ಲೋಕಸಭೆಯಲ್ಲಿ ಸಂಸದರಾಗಿ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಹಾಲಿ ಮುಖ್ಯಮಂತ್ರಿಗೆ ಸರಿಹೊಂದುವಂತೆ ಸರ್ಕಾರಿ ಯಂತ್ರವು (ಕೇಂದ್ರೀಯ ತನಿಖಾ ದಳ) ಕುಶಲತೆಯಿಂದ ನಡೆಯುತ್ತಿರುವ ರೀತಿಯು ಅರ್ಜಿದಾರರ ಆತ್ಮಸಾಕ್ಷಿ ಅಲುಗಾಡಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: YSRCP regime.. ಆಂಧ್ರಕ್ಕೆ ಬಂದ ಹೊಸ ಕೈಗಾರಿಕೆಗಳಿಂತ ಬಿಟ್ಟು ಹೋದ ಕಂಪನಿಗಳೇ ಹೆಚ್ಚು..

ಕಾನೂನು ಬಾಹಿರವಾಗಿ ಮತ್ತು ಅನ್ಯಾಯವಾಗಿ ವಿವಿಧ ಕಂಪನಿಗಳನ್ನು ಸಾರ್ವಜನಿಕ ಕಂಪನಿಗಳಿಗಾಗಿ ಪರಿವರ್ತಿಸುವ ಮೂಲಕ ತನ್ನನ್ನು 40,000 ಕೋಟಿ ರೂ.ಗಳಷ್ಟು ಶ್ರೀಮಂತಗೊಳಿಸಿಕೊಂಡ ನಂತರ ಸಾರ್ವಜನಿಕ ಖಜಾನೆಗೆ ನಷ್ಟವನ್ನುಂಟುಮಾಡಿದೆ. ಅಲ್ಲದೇ, ತಮ್ಮ ವಿರುದ್ಧದ ಕ್ರಿಮಿನಲ್ ವಿಚಾರಣೆಯು ಸುಪ್ತವಾಗಿ ಉಳಿಯುತ್ತದೆ. ಅವರ ವಿರುದ್ಧ ಯಾವುದೇ ಫಲಪ್ರದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

2012ರಲ್ಲಿ ಅಕ್ರಮ ಆಸ್ತಿ ಆರೋಪ ಪ್ರಕರಣ ದಾಖಲಾಗಿದೆ. ಇದರಲ್ಲಿ ಸಿಬಿಐ 11 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಇದರ ಪರಿಣಾಮ 11 ಇತರ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಪ್ರತಿವಾದಿ ನಂ.1 ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್​ಗಳು ಪ್ರಕಾರ, ಕಂಪನಿಗಳ ಲಾಭಕ್ಕಾಗಿ ಪ್ರತಿವಾದಿ ನಂ.2 ಜಗನ್ ಮೋಹನ್ ರೆಡ್ಡಿ ಮತ್ತು ಅವರ (ದಿವಂಗತ) ತಂದೆ ರೂಪಿಸಿದ ವಿಸ್ತಾರವಾದ ಯೋಜನೆಯ ಕಥೆಯಾಗಿದೆ. ಪ್ರತಿವಾದಿ ನಂ.2ರಿಂದ ಗಣನೀಯವಾಗಿ ಕಂಪನಿಗಳು ಒಡೆತನ ಮತ್ತು ನಿಯಂತ್ರಣದಲ್ಲಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ ನಂತರ ರೆಡ್ಡಿ, ಕಂಪನಿಗಳ ಪ್ರಮುಖ ನಿರ್ವಹಣಾ ಹುದ್ದೆಗಳಿಂದ ದೂರವಿರಲು ಪ್ರಯತ್ನಿಸಿದರು. ಆದಾಗ್ಯೂ, ಅವರು ಕಾರ್ಪೊರೇಟ್ ಮುಸುಕುಗಳ ಮೂಲಕ ಕಂಪನಿಗಳ ನಿಯಂತ್ರಣ ಮತ್ತು ನಿರ್ವಹಣೆ ಮುಂದುವರೆಸುತ್ತಿದ್ದಾರೆ. ಸಿಬಿಐ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಮುಂದೆ ನೂರಾರು ಮುಂದೂಡಿಕೆಗಳು ಆಗಿವೆ. ಅಲ್ಲದೇ, ರೆಡ್ಡಿ ಅವರಿಗೆ ವಿಚಾರಣೆಯ ಸಮಯದಲ್ಲಿ ಹಾಜರಾಗಲು ಶಾಶ್ವತ ವಿನಾಯಿತಿ ನೀಡಲಾಗಿದೆ. ಸಿಬಿಐನಿಂದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಲ್ಲಿ ಶ್ರದ್ಧೆಯನ್ನು ತೋರಿಸುವ ಯಾವುದೇ ಸಂಕೇತಗಳು ಇಲ್ಲ. ಶಾಶ್ವತ ವಿನಾಯಿತಿ ನೀಡುವ ಹೈಕೋರ್ಟ್‌ನ ಆದೇಶವನ್ನು ಸಿಬಿಐ ಪ್ರಶ್ನಿಸಿಲ್ಲ ಎಂದು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ. (ಪಿಟಿಐ)

ಇದನ್ನೂ ಓದಿ: ದಿವಾಳಿತನದ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂಮಿ ಆಂಧ್ರ ಸಿಎಂ ಮತ್ತು ಕಂಪನಿ ಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.