ETV Bharat / bharat

ಚೀನಾ ಪೌರೋಹಿತ್ಯದಲ್ಲಿ ಹಗೆತನ ಮರೆತು ಇರಾನ್​-ಸೌದಿ ದೋಸ್ತಿ: ಭಾರತದ ಮೇಲೆ ಪ್ರಭಾವವೇನು?

author img

By

Published : Mar 28, 2023, 10:25 AM IST

ಎರಡು ಶತ್ರು ದೇಶಗಳಾದ ಇರಾನ್​ ಮತ್ತು ಸೌದಿ ಅರೇಬಿಯಾದ ನಡುವೆ ಚೀನಾದ ಪೌರೋಹಿತ್ಯದಲ್ಲಿ ಒಪ್ಪಂದ ಏರ್ಪಟ್ಟಿದೆ. ಇದು ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಪ್ರಶ್ನೆ. ಮಧ್ಯ ಏಷ್ಯಾದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾದ ಮೇಲೆ ಹೆಚ್ಚಿನ ನಿಗಾ ವಹಿಸಬೇಕಿದೆ. ಈ ಬಗ್ಗೆ ಈಟಿವಿ ಭಾರತ್​ ನೆಟ್‌ವರ್ಕ್ ಸಂಪಾದಕ ಬಿಲಾಲ್ ಭಟ್ ವಿಸ್ತೃತವಾಗಿ ಬರೆದಿದ್ದಾರೆ.

ಇರಾನ್​- ಸೌದಿ ದೋಸ್ತಿ
ಇರಾನ್​- ಸೌದಿ ದೋಸ್ತಿ

ಚೀನಾ, ರಷ್ಯಾ ನಡುವೆ ಒಪ್ಪಂದದ ಬಳಿಕ ಶತ್ರು ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಇರಾನ್​ ವ್ಯಾಪಾರ ಒಪ್ಪಂದ ಮಾಡಿಕೊಂಡಿವೆ. ಇದು ಪಶ್ಚಿಮ ಏಷ್ಯಾದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ. ಪ್ರಮುಖ ತೈಲ ರಫ್ತು ರಾಷ್ಟ್ರಗಳ ಮಧ್ಯೆ ನಡೆದ ಒಡಂಬಡಿಕೆ ವಿಶ್ವದ ಈಗಿನ ಪರಿಸ್ಥಿತಿಗೆ ಉತ್ತಮವಾಗಿದ್ದರೂ ಅಮೆರಿಕದ ಪ್ರಭಾವ ಕುಗ್ಗಿಸುವ ಮತ್ತು ಚೀನಾದ ಪ್ರಾಬಲ್ಯ ಹೆಚ್ಚಿಸುವ ಯತ್ನವಾಗಿದೆ ಎಂದು ಬಿಂಬಿತವಾಗಿದೆ.

ತಮ್ಮ ನಡುವಿನ ದೀರ್ಘಕಾಲದ ಹಗೆತನವನ್ನು ಮರೆತು ಉಭಯ ರಾಷ್ಟ್ರಗಳು ಹಿತಾಸಕ್ತಿಗಳನ್ನು ಕಾಪಾಡಲು ಸಜ್ಜಾಗಿವೆ. ಸೌದಿ ಅರೇಬಿಯಾ ಸರ್ಕಾರದ ವಿರುದ್ಧ ಯೆಮೆನ್ ಹೌತಿಗಳು ನಡೆಸುತ್ತಿದ್ದ ದಂಗೆಗೆ ಉತ್ತೇಜನ ನೀಡುತ್ತಿದ್ದ ಇರಾನ್ ಈಗ ಸಂಘರ್ಷವನ್ನು ಕೊನೆಗೊಳಿಸಲು ಮುಂದಾಗಿದೆ. ಅದೇ ರೀತಿ ಇರಾನ್​ನಲ್ಲಿ ಲೆಬನಾನ್ ಮತ್ತು ಸಿರಿಯಾದಲ್ಲಿನ ಘರ್ಷಣೆಗಳು ಸಹ ನಿಲ್ಲಿಸಲು ಸಿದ್ಧವಾಗಿವೆ.

ಪಶ್ಚಿಮ ಏಷ್ಯಾದಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. 2019 ರಲ್ಲಿ ಸೌದಿ ತೈಲ ಸ್ಥಾವರದ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸದೇ ಇದ್ದಾಗ, ಚೀನಾ ವಿಶೇಷ ಕಾಳಜಿ ವಹಿಸಿತ್ತು. ಅದರ ಪ್ರಯತ್ನಗಳು ಪ್ರಶಂಸೆಗೆ ಒಳಗಾಗಿದ್ದವು. ಅಮೆರಿಕದ ಪಡೆಗಳು ಅಫ್ಘಾನಿಸ್ತಾನವನ್ನು ರಾತ್ರೋರಾತ್ರಿ ಖಾಲಿ ಮಾಡಿದಾಗ, ತಾಲಿಬಾನಿಗಳು ದೇಶವನ್ನು ಆಕ್ರಮಿಸಿಕೊಂಡರು.

ಅಮೆರಿಕದ ಬದಲಿಗೆ ಆ ಪ್ರದೇಶದಲ್ಲಿ ಸೌದಿ ಅರೇಬಿಯಾವನ್ನು ಪರ್ಯಾಯವಾಗಿ ತರಲು ಅಫ್ಘಾನಿಸ್ತಾನದೊಂದಿಗೆ "ದೋಹಾ" ಒಪ್ಪಂದ ಮಾಡಿಕೊಳ್ಳಲಾಯಿತು. ಇದು ಅಮೆರಿಕ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ಕಿತ್ತುವ ಕಾರ್ಯವನ್ನು ಸುಗಮಗೊಳಿಸಿತು.

ಉಕ್ರೇನ್​ ಕಡೆಗೆ ಅಮೆರಿಕ ದೃಷ್ಟಿ: ಅಫ್ಘನ್​ನಿಂದ ಹೊರಬಂದ ಬಳಿಕ ಅಮೆರಿಕ ಉಕ್ರೇನ್​ ಮೇಲೆ ಹೆಚ್ಚಿನ ದೃಷ್ಟಿ ನೆಟ್ಟಿದೆ. ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ಜಾಗತಿಕ ಬೆಲೆ ಏರಿಕೆ ಮತ್ತು ತೈಲ ದರವನ್ನು ತಗ್ಗಿಸಲು ಬೈಡನ್​ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ. ಯುದ್ಧದ ಪರಿಣಾಮಗಳನ್ನು ತಡೆಯಲು ಯತ್ನಿಸುವ ಭಾಗವಾಗಿ ರಷ್ಯಾಕ್ಕೆ ಬೆಂಬಲವಾಗಿ ನಿಂತಿದ್ದ ಸೌದಿ ಅರೇಬಿಯಾ ಸರ್ಕಾರದ ಜೊತೆಗೆ ತೈಲ ಒಪ್ಪಂದಕ್ಕೆ ಮುಂದಾಗಿತ್ತು. ತೈಲ ಬೆಲೆ ಕಡಿಮೆ ಮಾಡಲು ಇದು ನೆರವಾಗುತ್ತದೆ ಎಂದು ಭಾವಿಸಲಾಗಿತ್ತು.

ಇದೇ ವೇಳೆ ಚೀನಾ ತನ್ನ ಮಿತ್ರ ರಾಷ್ಟ್ರ ರಷ್ಯಾದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು. ಇದು ವಿಶ್ವದ ಗಮನ ಸೆಳೆಯಿತು. ಯುದ್ಧ ಸಾರಿರುವ ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದರ ಮಧ್ಯೆ ರಷ್ಯಾದ ಬೆನ್ನಿಗೆ ಪರೋಕ್ಷವಾಗಿ ಚೀನಾ ನಿಂತಿತು. ಇದಲ್ಲದೇ, ರಷ್ಯಾ ಮತ್ತು ಸೌದಿ ಅರೇಬಿಯಾ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ತೈಲ ಬೆಲೆಯ ಹೆಚ್ಚಳ ಮಾಡುವುದು ಇದರ ಉದ್ದೇಶ. ಇದಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ರಷ್ಯಾಕ್ಕೆ ನೆರವಾದ ಒಪ್ಪಂದ: ರಷ್ಯಾ ಇದರಲ್ಲಿ ಒಮ್ಮುಖವಾಗಿ ನಡೆದುಕೊಂಡಿದೆ. ಪ್ರತಿ ಸದಸ್ಯ ರಾಷ್ಟ್ತಗಳೊಂದಿಗೆ ಕ್ರಮಬದ್ಧವಾಗಿ ತನ್ನ ಯೋಜನೆಗಳಲ್ಲಿ ಕೆಲಸ ಮಾಡಿದೆ. ಒಪ್ಪಂದ ಮಾಡಿಕೊಂಡ ರಾಷ್ಟ್ರಗಳು ಅಮೆರಿಕವನ್ನು ತಮ್ಮ ಸಾಮಾನ್ಯ ಶತ್ರುವಾಗಿ ಕಾಣುತ್ತಾರೆ. ಯುದ್ಧದ ವೇಳೆ ಇರಾನ್ ರಷ್ಯಾದ ಪಡೆಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಿ ಉಕ್ರೇನ್‌ನಲ್ಲಿ ಹೋರಾಡುವಂತೆ ಮಾಡಿದೆ. ಡ್ರೋನ್‌ಗಳನ್ನು ಕ್ಷಿಪಣಿಗಳೊಂದಿಗೆ ಅಳವಡಿಸಲಾಗಿದೆ. ಬೆಲೆ ಏರಿಕೆಯನ್ನು ಕಾಪಾಡಿಕೊಳ್ಳಲು ಸೌದಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಇದು ರಷ್ಯಾಗೆ ಸಹಾಯವಾಗಿದೆ. ಇದೇ ವೇಳೆ ಎರಡು ಹಳೆಯ ಶತ್ರು ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಮುಂದಾಗಿವೆ. ಇದರ ಮಧ್ಯಸ್ಥಿಕೆ ವಹಿಸಿದ್ದು ಚೀನಾ ಎಂಬುದು ಗಮನಾರ್ಹ ಸಂಗತಿ.

ಇಸ್ರೇಲ್​ ಕಥೆಯೇನು?: ಇರಾನ್ ಇಸ್ರೇಲ್‌ನ ಪ್ರಮುಖ ಶತ್ರು ದೇಶವಾಗಿದೆ. ದೀರ್ಘಕಾಲದವರೆಗೆ ಇಸ್ರೇಲಿ ಪಡೆಗಳ ವಿರುದ್ಧ ಪ್ಯಾಲೇಸ್ತೀನಿಯನ್ ದಂಗೆಕೋರ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಎರಡು ರಾಷ್ಟ್ರಗಳ ನಡುವಿನ ಈ ಒಪ್ಪಂದವು ಅರಬ್-ಇಸ್ರೇಲಿ ಸಂಬಂಧಗಳ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ. ಅವುಗಳ ನಡುವಿನ ಅಂತರವನ್ನೂ ಹೆಚ್ಚು ಮಾಡಿದೆ. ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದ ಸಂದರ್ಭದಲ್ಲಿ ಅರಬ್ಬರು ಮತ್ತು ಇಸ್ರೇಲ್ ನಡುವಿನ ಒಪ್ಪಂದಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ಈಗ ಸೌದಿ ಮತ್ತು ಇರಾನ್ ಒಪ್ಪಂದವನ್ನು ಇದೇ ಯುಎಇ ಹೊಗಳಿರುವುದು ಇಸ್ರೇಲ್‌ಗೆ ದೊಡ್ಡ ಹೊಡೆತವಾಗಿದೆ.

ಭಾರತವು ಸೌದಿ ಅರೇಬಿಯಾ ಮತ್ತು ಇರಾನ್ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಹೀಗಾಗಿ ಈ ಒಪ್ಪಂದದ ವಿಚಾರದಲ್ಲಿ ವಿದೇಶಾಂಗ ಇಲಾಖೆ ತಟಸ್ಥತೆಯನ್ನು ಕಾಯ್ದುಕೊಂಡಿದೆ. ಇಸ್ರೇಲ್‌ನೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರುವ ಭಾರತ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಭಾರತದ ಪ್ರತಿಸ್ಪರ್ಧಿ ಚೀನಾದ ಈ ನಡೆಯ ಬಗ್ಗೆ ತೀವ್ರ ನಿಗಾ ಇಟ್ಟಿದೆ.

ಇದನ್ನೂ ಓದಿ: ವಯಸ್ಸು 14, ಶೂ ಸೈಜ್ 23! ತಾಯಿಗೆ ಪಜೀತಿ ತಂದಿಟ್ಟ ಮಗನ ವಿಶೇಷ ಕಾಲ್ಗುಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.