ETV Bharat / bharat

ಶಿವಸೇನೆಯ ನಿಜವಾದ ಭಕ್ತರು ಬಾಳಾಸಾಹೇಬರ ಬೆನ್ನಿಗೆ ಚೂರಿ ಹಾಕುವುದಿಲ್ಲ: ಸಂಜಯ್ ರಾವತ್

author img

By

Published : Jun 26, 2022, 1:10 PM IST

ಕೆಲವರು ಬಲವಂತವಾಗಿ ಅವರ ಜೊತೆಗಿದ್ದಾರೆ. ನಮ್ಮವರು ಖಂಡಿತವಾಗಿಯೂ ಹಿಂತಿರುಗುತ್ತಾರೆ. ನೀವು ಇದನ್ನು ಬಹುಮತ ಸಾಬೀತುಪಡಿಸುವಲ್ಲಿ ಖಂಡಿತವಾಗಿ ನೋಡುವಿರಿ ಎಂದು ಶಿವಸೇನೆಯ ಸಂಜಯ್​ ರಾವತ್​ ಹೇಳಿದ್ದಾರೆ.

ಶಿವಸೇನೆಯ ನಿಜವಾದ ಭಕ್ತರು ಬಾಳಾಸಾಹೇಬರ ಬೆನ್ನಿಗೆ ಚೂರಿ ಹಾಕುವುದಿಲ್ಲ : ಸಂಜಯ್ ರಾವತ್
ಶಿವಸೇನೆಯ ನಿಜವಾದ ಭಕ್ತರು ಬಾಳಾಸಾಹೇಬರ ಬೆನ್ನಿಗೆ ಚೂರಿ ಹಾಕುವುದಿಲ್ಲ : ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟ ತಾರಕಕ್ಕೇರಿದೆ. ತನ್ನ ಬಂಡಾಯ ಶಾಸಕರನ್ನು ಮರಳಿ ಕರೆತರಲು ಶಿವಸೇನೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಇದಕ್ಕಾಗಿ 16 ಶಾಸಕರನ್ನು ಅಮಾನತುಗೊಳಿಸಲು ಶಿವಸೇನೆ ಸಿದ್ಧತೆ ನಡೆಸಿದೆ. ಈ ಒತ್ತಡಕ್ಕೆ ಶಿಂದೆ ಬಣದ ಬಂಡಾಯ ಶಾಸಕರೆಲ್ಲ ಮಣಿಯುತ್ತಾರಾ? ಎಂಬುದನ್ನು ಕಾದುನೋಡಬೇಕು.

ಇಂದು ಮುಂಬೈನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಸೇನೆ ಮುಖಂಡ ಸಂಜಯ್‌ ರಾವತ್‌, "ಓಡಿಹೋದವರು ಶಿವಸೈನಿಕರಾಗಲು ಸಾಧ್ಯವಿಲ್ಲ. ಏಕೆಂದರೆ, ಶಿವಸೇನೆಯ ನಿಜವಾದ ಭಕ್ತರು ಬಾಳಾಸಾಹೇಬರ ಬೆನ್ನಿಗೆ ಚೂರಿ ಹಾಕುವುದಿಲ್ಲ. ಈ ಎಲ್ಲಾ ರೆಬಲ್​ಗಳು ಗುವಾಹಟಿಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅವರು ಮುಂಬೈನಲ್ಲಿ ಈ ಕೆಲಸ ಮಾಡಲಿ, ಆಗ ಮುಂಬೈನಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗಲಿದೆ" ಎಂದು ಪರೋಕ್ಷ ಎಚ್ಚರಿಕೆ ಕೊಟ್ಟರು.

ಐದು ನಿಮಿಷಗಳ ಹಿಂದೆ ಕೆಲವು ಶಾಸಕರ ಜತೆ ನಾನು ಮಾತುಕತೆ ನಡೆಸಿದ್ದೆ. ಇಲ್ಲಿಗೆ ಬರುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಶಾಸಕರನ್ನು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಎಷ್ಟು ದಿನ ಶಾಸಕರನ್ನು ಗುವಾಹಟಿಯಲ್ಲಿ ಇರಿಸಲಾಗುತ್ತದೆ? ಅಷ್ಟೂ ಜನ ರಾಜೀನಾಮೆ ನೀಡಿ ನಿಮ್ಮ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸುವ ಧೈರ್ಯ ತೋರಿ. ಇದು ನನ್ನ ಬಹಿರಂಗ ಸವಾಲು ಎಂದಿದ್ದಾರೆ.


"ಕೆಲವರು ಬಲವಂತವಾಗಿ ಅವರ ಜೊತೆ ಇದ್ದಾರೆ. ಅವರು ನಮ್ಮವರು, ಅವರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನಮ್ಮವರು ಖಂಡಿತವಾಗಿಯೂ ಹಿಂತಿರುಗುತ್ತಾರೆ. ನೀವು ಇದನ್ನು ಬಹುಮತ ಸಾಬೀತು ಪಡಿಸುವಲ್ಲಿ ಖಂಡಿತವಾಗಿ ನೋಡುತ್ತೀರಿ" ಎಂದು ರಾವತ್‌ ವಿಶ್ವಾಸ ವ್ಯಕ್ತಪಡಿಸಿದರು.

ಶಿಂದೆ ಬಣ ಎನ್‌ಸಿಪಿ-ಶಿವಸೇನೆಯನ್ನು ನಾಶಪಡಿಸುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, "ಕಳೆದ ಎರಡೂವರೆ ವರ್ಷಗಳಿಂದ ಅವರು ಆಯಕಟ್ಟಿನ ಖಾತೆಗಳ ಉಸ್ತುವಾರಿ ವಹಿಸಿದ್ದರು. ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತಿರಲಿಲ್ಲ. ಈಗ ಖಂಡಿತಾ ಬಿಡುವುದಿಲ್ಲ. ಹತ್ತು ಬಾರಿ ತಂದೆಯನ್ನು ಬದಲಾಯಿಸಲಾಗುತ್ತದೆಯೇ? ತಂದೆಯನ್ನು ಬದಲಾಯಿಸುವ ಪ್ರಕ್ರಿಯೆ ನಮ್ಮ ಪಕ್ಷದಲ್ಲಿ ನಡೆಯಲ್ಲ" ಎಂದು ಹರಿಹಾಯ್ದರು.

ಇದನ್ನೂ ಓದಿ: ಉಪ ಚುನಾವಣೆ ಫಲಿತಾಂಶ: ಗೆದ್ದು ಸಿಎಂ ಕುರ್ಚಿ ಭದ್ರಪಡಿಸಿಕೊಂಡ ತ್ರಿಪುರಾ ಸಿಎಂ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.