ETV Bharat / bharat

ನ. 29ರಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸದಿರಲು ಕಿಸಾನ್​ ಯೂನಿಯನ್​​ ನಿರ್ಧಾರ.. ಕೇಂದ್ರಕ್ಕೆ ಡಿ.4ರ ಗಡುವು

author img

By

Published : Nov 27, 2021, 4:18 PM IST

ಕೇಂದ್ರ ಸರ್ಕಾರದ ವಿರುದ್ಧ ನವೆಂಬರ್​​ 29ರಂದು ನಡೆಸಲು ನಿರ್ಧರಿಸಲಾಗಿದ್ದ ಟ್ರ್ಯಾಕ್ಟರ್ ರ್‍ಯಾಲಿ ಇದೀಗ ಮುಂದೂಡಿಕೆ ಮಾಡಿ ಸಂಯುಕ್ತ ಕಿಸಾನ್ ಮೋರ್ಚಾ ಮಹತ್ವದ ನಿರ್ಧಾರ ಕೈಗೊಂಡಿದೆ.

tractor rally to Parliament
tractor rally to Parliament

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆ ವಿರುದ್ಧ ರೈತರು ಹೋರಾಟ ಆರಂಭಿಸಿ ನವೆಂಬರ್​ 26ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ನವೆಂಬರ್​ 29ರಿಂದ ಆರಂಭಗೊಳ್ಳಲಿರುವ ಸಂಸತ್​ ಚಳಿಗಾಲದ ಅಧಿವೇಶನದ ವೇಳೆ ದೊಡ್ಡ ಮಟ್ಟದ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಸಂಯುಕ್ತ ಕಿಸಾನ್​ ಮೋರ್ಚಾ​ ನಿರ್ಧಾರ ಕೈಗೊಂಡಿತ್ತು. ಆದರೆ ಇಂದು ನಡೆದ ಸಭೆಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ಮುಂದೂಡಿಕೆ ಮಾಡಿದೆ.

ಸಿಂಘು ಗಡಿಯಲ್ಲಿ ಇಂದು ನಡೆದ ಸಂಯುಕ್ತ ಕಿಸಾನ್​ ಮೋರ್ಚಾ ರೈತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಡಿಸೆಂಬರ್​ 4ರವರೆಗೆ ಕಾಲಾವಕಾಶ ನೀಡಿರುವ ಕಾರಣ ಟ್ರಾಕ್ಟರ್ ರ್‍ಯಾಲಿಯನ್ನು ಮುಂದೂಡಿದೆ.

  • After a meeting, Samyukt Kisan Morcha has decided to postpone the proposed tractor rally to Parliament on November 29: Farmer leader Darshan Pal Singh in Delhi pic.twitter.com/sRskbis3MI

    — ANI (@ANI) November 27, 2021 " class="align-text-top noRightClick twitterSection" data=" ">

ಕೇಂದ್ರ ಸರ್ಕಾರ ಈಗಾಗಲೇ ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆದುಕೊಂಡಿದ್ದು, ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್​ ಅಧಿವೇಶನದಲ್ಲಿ ಬಿಲ್​ ಮಂಡಿಸುವ ಸಾಧ್ಯತೆ ಇದೆ. ಆದರೆ ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರ ಇಲ್ಲಿಯವರೆಗೆ ರೈತರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಇದೇ ಕಾರಣಕ್ಕಾಗಿ ನವೆಂಬರ್​​ 29ರಂದು ಕಿಸಾನ್​ ಯೂನಿಯನ್​​​ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿತ್ತು.

ಇದನ್ನೂ ಓದಿರಿ: 21ನೇ ವಯಸ್ಸಿಗೇ ಬಿಹಾರದ ಗ್ರಾ. ಪಂ ಅಧ್ಯಕ್ಷೆ.. ಹೊಸ ದಾಖಲೆ ಬರೆದ ಆಯೇಷಾ

ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರೈತ ಸಂಘಟನೆಗಳು ಪತ್ರ ಬರೆದಿದ್ದು, ಡಿಸೆಂಬರ್​ 4ರವರೆಗೆ ಕಾಲಾವಕಾಶ ನೀಡಿವೆ. ಇದೇ ಕಾರಣಕ್ಕಾಗಿ ಟ್ರಾಕ್ಟರ್ ರಾಲಿ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರೈತ ಮುಖಂಡ ದರ್ಶನ್ ಪಾಲ್​ ಸಿಂಗ್​, ನವೆಂಬರ್​ 29ರಂದು ನಡೆಸಲು ನಿರ್ಧರಿಸಲಾಗಿದ್ದ ಟ್ರ್ಯಾಕ್ಟರ್ ರ್‍ಯಾಲಿ ಹಿಂಪಡೆದುಕೊಳ್ಳಲಾಗಿದ್ದು, ಕೇಂದ್ರ ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸುವವರೆಗೂ ಪ್ರತಿಭಟನೆ ಹಿಂಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ.

ರೈತರ ಹೋರಾಟದ ವೇಳೆ ಅನೇಕರು ಸಾವನ್ನಪ್ಪಿದ್ದು, ಕೇಂದ್ರ ಸರ್ಕಾರ ಈ ಕುರಿತಂತೆಯೂ ನಮ್ಮೊಂದಿಗೆ ಮಾತನಾಡಬೇಕು. ಈಗಾಗಲೇ ಮೋದಿ ಸರ್ಕಾರಕ್ಕೆ ಇದರ ಬಗ್ಗೆ ಪತ್ರ ಬರೆದಿದ್ದು, ಉತ್ತರಕ್ಕಾಗಿ ಎದುರು ನೋಡುತ್ತಿದ್ದೇವೆ. ಡಿಸೆಂಬರ್​ 4ರಂದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.