ETV Bharat / bharat

ಎನ್‌ಸಿಎಸ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಜಾತಿ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಸಮೀರ್ ವಾಂಖೆಡೆ

author img

By

Published : Nov 1, 2021, 2:06 PM IST

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯದ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ಸೋಮವಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲಾ ಅವರನ್ನು ಭೇಟಿಯಾಗಿದ್ದಾರೆ.

Sameer Wankhede to meet NCSC chairperson in Delhi, submit caste documents
ಎನ್‌ಸಿಎಸ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಜಾತಿ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಸಮೀರ್ ವಾಂಖೆಡೆ

ನವದೆಹಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯದ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲಾ ಅವರನ್ನು ಭೇಟಿಯಾಗಿ, ತಾವು ದಲಿತರು ಎಂಬುದನ್ನು ಸಾಬೀತುಪಡಿಸಲು ತಮ್ಮ ಮೂಲ ಜಾತಿ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ವಾಂಖೆಡೆ ಮುನ್ನಡೆಸುತ್ತಿದ್ದಾರೆ. ಖಾನ್ ಅವರನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ವಾಂಖೆಡೆ ಸೇರಿದಂತೆ ಕೆಲವು ಏಜೆನ್ಸಿ ಅಧಿಕಾರಿಗಳು ಮತ್ತು ಇತರರನ್ನು 25 ಕೋಟಿ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ವಾಂಖೆಡೆ ವಿರುದ್ಧ ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸರಣಿ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಎಸ್‌ಸಿ ಕೋಟಾದಡಿ ಐಆರ್‌ಎಸ್ ಅಧಿಕಾರಿಯಾಗಿ ಕೆಲಸ ಪಡೆಯಲು ತನ್ನ ಜಾತಿ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಅವರು ಮಲಿಕ್​ ಆರೋಪಿಸಿದ್ದಾರೆ. ವಾಂಖೆಡೆ ಹುಟ್ಟಿನಿಂದ ಮುಸ್ಲಿಂ ಎಂದು ಹೇಳಿದ್ದಾರೆ.

ಭಾನುವಾರ, ಎನ್‌ಸಿಎಸ್‌ಸಿಯ ಉಪಾಧ್ಯಕ್ಷ ಅರುಣ್ ಹಲ್ಡರ್ ವಾಂಖೆಡೆ ಅವರ ಬೆಂಬಲಕ್ಕೆ ಬಂದಿದ್ದಾರೆ. ಅಧಿಕಾರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಸಚಿವರು ಅವರ ಕುಟುಂಬ ಸದಸ್ಯರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲಿಕ್, ನಿನ್ನೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಅರುಣ್ ಹಲ್ಡರ್ ಅವರು ಸಮೀರ್ ವಾಂಖೆಡೆ ಅವರ ನಿವಾಸಕ್ಕೆ ಭೇಟಿ ನೀಡಿ ಕ್ಲೀನ್ ಚಿಟ್ ನೀಡಿದ್ದಾರೆ. ಅವರು ಮೊದಲು ತನಿಖೆ ನಡೆಸಿ ವಿವರವಾದ ವರದಿಯನ್ನು ಸಲ್ಲಿಸಬೇಕಾಗಿತ್ತು. ಅವರ ಬಗ್ಗೆ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದಿದ್ದಾರೆ.

ಹಲ್ದರ್ ಅವರ ಭೇಟಿಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾವುದೇ ತನಿಖೆಯಿಲ್ಲದೆ ಅವರಿಗೆ ಕ್ಲೀನ್ ಚಿಟ್ ನೀಡಲು ಮತ್ತು ಆರೋಪಗಳನ್ನು ತೆರವುಗೊಳಿಸಲು ಏಕೆ ಆತುರಪಟ್ಟರು? ಅದರ ಹಿಂದಿನ ಉದ್ದೇಶವೇನು? ಎಂದು ಮಲಿಕ್​ ಪ್ರಶ್ನಿಸಿದ್ದಾರೆ.

ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣ ಮುನ್ನೆಲೆಗೆ ಬಂದಾಗಿನಿಂದ ವಾಂಖೆಡೆ ವಿರುದ್ಧ ಮಲಿಕ್ ತಿರುಗಿಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.