ETV Bharat / bharat

ತೆಲಂಗಾಣ ಸಿಎಂ ಕೆಸಿಆರ್​ ಭೇಟಿಯಾದ ಛತ್ರಪತಿ ಶಿವಾಜಿ 13ನೇ ಉತ್ತರಾಧಿಕಾರಿ ಸಂಭಾಜಿ ರಾಜೆ

ತೆಲಂಗಾಣ ಸಿಎಂ ಭೇಟಿಯಾದ ಮಾಜಿ ಸಂಸದ ಸಂಭಾಜಿ ರಾಜೆ - ತೃತೀಯ ರಂಗ ಒಗ್ಗೂಡಿಸುವ ಪ್ರಯತ್ನದಲ್ಲಿ ತೆಲಂಗಾಣ ಸಿಎಂ - ಕೆಸಿಆರ್​ ಅಭಿವೃದ್ಧಿಗೆ ಸಂಭಾಜಿ ರಾಜೆ ಮೆಚ್ಚುಗೆ

ತೆಲಂಗಾಣ ಸಿಎಂ ಕೆಸಿಆರ್​ ಭೇಟಿಯಾದ ಛತ್ರಪತಿ ಶಿವಾಜಿಯ 13ನೇ ಉತ್ತರಾಧಿಕಾರಿ ಸಂಭಾಜಿ ರಾಜೆ
sambhaji-raje-the-13th-successor-of-chhatrapati-shivaji-met-telangana-cm-kcr
author img

By

Published : Jan 27, 2023, 4:36 PM IST

ಹೈದರಾಬಾದ್​: ಛತ್ರಪತಿ ಶಿವಾಜಿಯ 13ನೇ ಉತ್ತರಾಧಿಕಾರಿ, ಕೊಲ್ಹಾಪುರದ ಸಾಹು ಮಹಾರಾಜ್​ ಅವರ ಮೊಮ್ಮಗ ಮಾಜಿ ಸಂಸದ ಸಂಭಾಜಿ ರಾಜೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​​​ ಅವರನ್ನು ಭೇಟಿಯಾಗಿದ್ದಾರೆ. ಹೈದರಾಬಾದ್​ನ ಪ್ರಗತಿಭವನದಲ್ಲಿ ಈ ಭೇಟಿ ನಡೆದಿದ್ದು, ಇದೇ ವೇಳೆ ಸಂಭಾಜಿ ರಾಜೆ, ತೆಲಂಗಾಣ ಮಾದರಿ ಅಭಿವೃದ್ಧಿ ಮಹರಾಷ್ಟ್ರದಲ್ಲಿ ಕೂಡ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಇಬ್ಬರು ನಾಯಕರು, ದೇಶದ ರಾಜಕೀಯ ಸ್ಥಿತಿಗತಿ ಮತ್ತು ಇತರೆ ವಿಷಯದ ಕುರಿತು ಚರ್ಚೆ ನಡೆಸಿದರು. ಇನ್ನು ತೆಲಂಗಾಣದಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮದ ಕುರತು ರಾಜೆ, ಕೆಸಿಆರ್​ ಬಳಿ ಮಾಹಿತಿ ಪಡೆದರು. ತೆಲಂಗಾಣ ಮಾದರಿ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಮಹಾರಾಷ್ಟ್ರದಲ್ಲೂ ಅಳವಡಿಸಬೇಕು. ಮಹಾರಾಷ್ಟ್ರ ಮಾತ್ರವಲ್ಲದೇ ದೇಶಾದ್ಯಂತ ತೆಲಂಗಾಣ ಮಾದರಿ ಪಸರಿಸಬೇಕು ಎಂದು ಸಂಭಾಜಿ ರಾಜೆ ತಿಳಿಸಿದರು. ರಾಷ್ಟ್ರೀಯ ಸಮಗ್ರತೆ, ಅಭಿವೃದ್ಧಿ ಮತ್ತು ದೇಶದ ಜನರ ಕಲ್ಯಾಣದಲ್ಲಿ ಅವಿಷ್ಕಾರದ ಅಜೆಂಡಾದ ಅವಶ್ಯಕತೆ ಇದೆ.

ಚುನಾವಣಾ ಭರವಸೆ ಹೊರತಾಗಿ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಕೆಸಿಆರ್​ ಕಾರ್ಯ ನಿರ್ವಹಿಸುತ್ತಿದ್ದಾರೆ. 14 ವರ್ಷದ ತೆಲಂಗಾಣ ಆಡಳಿತದಲ್ಲಿ ಅನೇಕ ಅಭಿವೃದ್ಧಿಯನ್ನು ಅವರು ತಂದಿದ್ದಾರೆ. ಕೃಷಿ ನೀತಿ, ನೀರಾವರಿ, ಸಾರ್ವಜನಿಕ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗಾಗಿ ತಂದಿದ್ದಾರೆ ಎಂದು ಅವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಛತ್ರಪತಿ ಶಿವಾಜಿ ಅವರು ಸಾಹು ಮಹಾರಾಜರಿಗೆ ಸಮಾನತೆ, ಜನಕಲ್ಯಾಣ ಮಾರ್ಗದಲ್ಲಿ ನೀಡಿದ ಆಡಳಿತ ದೇಶದ ಇತಿಹಾಸದಲ್ಲಿ ಉಳಿಯುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದರು. ಶಿವಾಜಿ ಮಹರಾಜ್​ ಮತ್ತು ಸಹು ಮಹರಾಜ್​ ಅವರಿಂದ ತೆಲಂಗಾಣದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಿದರು.

ಭೇಟಿಯ ಉದ್ದೇಶ: ತೆಲಂಗಾಣಕ್ಕೆ ಸೀಮಿತವಾಗಿದ್ದ ತಮ್ಮ ರಾಜಕೀಯವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಮುಂದಾಗಿರುವ ಕೆಸಿಆರ್,​​ ತೆಲಂಗಾಣ ರಾಷ್ಟ್ರೀಯ ಸಮಿತಿಯಾಗಿದ್ದ ತಮ್ಮ ಪಕ್ಷವನ್ನು ಭಾರತ್​ ರಾಷ್ಟ್ರೀಯ ಪಕ್ಷ ಎಂದು ಘೋಷಿಸಲಾಗಿದೆ. 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೆಸಿಆರ್​​, ತೃತೀಯ ರಂಗ ಸ್ಥಾಪನೆಗೆ ಮುಂದಾಗಿರುವ ನಾಯಕರು, ನೆರೆ ಹೊರೆಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಸಂಭಾಜಿರಾವ್​ ಭೇಟಿ ಕೂಡ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ಕಮ್ಮಂನಲ್ಲಿ ಯಶಸ್ವಿಯಾಗಿ ಬಿಎಆರ್​​ಎಸ್​ ಮೊದಲ ಸಭೆ ನಡೆಸಿರುವ ಕೆಸಿಆರ್​ ಮುಂದಿನ ದೊಡ್ಡ ಸಭೆ ಸಿದ್ದತೆಯಲ್ಲಿದ್ದಾರೆ. ಮುಂದಿನ ಸಭೆ ಫೆಬ್ರವರಿ 5ರಂದು ನೆರೆಯ ಮಹಾರಾಷ್ಟ್ರದ ನಂದೆಡ್​ನಲ್ಲಿ ನಡೆಯಲಿದ್ದು, ಇಲ್ಲಿ ಭಾರೀ ಪ್ರಮಾಣದ ನೋಂದಾಣಿ ಪ್ರಕ್ರಿಯೆ ನಡೆಸಲು ಯೋಜನೆ ರೂಪಿಸಲಾಗಿದೆ. ಇದೇ ಹಿನ್ನಲೆ ರಾಜೆ ಭೇಟಿ ನಡೆದಿದ್ದು, ಈ ವೇಳೆ ಪ್ರಸ್ತುತ ರಾಜಕೀಯ ಸ್ಥಿತಿಗತಿ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಇನ್ನು ಈ ಬೇಟಿ ವೇಳೆ ಸಂಭಾಜಿ ರಾಜೆ ಅವರು 'ರಾಜಶ್ರೀ ಸಾಹು ಛತ್ರಪತಿ' ಪುಸ್ತಕವನ್ನು ಸಿಎಂ ಕೆಸಿಆರ್​ಗೆ ನೀಡಿದ್ದಾರೆ. ಈ ಭೇಟಿ ವೇಳೆ ಸಚಿವರಾದ ಪ್ರಶಾಂತ್​ ರೆಡ್ಡಿ, ಮಲ್ಲರ್​ ರೆಡ್ಡಿ, ಎಂಎಲ್​ಸಿ ಕವಿತಾ, ಮಧುಸೂಧನ್​ಆಚರಿ, ಪಲ್ಲ ರಾಜೇಶ್ವರಿ ರೆಡ್ಡಿ ಮತ್ತು ಇತರರು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದ​ ಗ್ರಾಮವೊಂದರಲ್ಲಿ ಕೆರೆ ನಿರ್ಮಾಣ: ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.