ETV Bharat / bharat

12ನೇ ದಿನಕ್ಕೆ ಕಾಲಿಟ್ಟ ಉಕ್ರೇನ್ ​- ರಷ್ಯಾ ಯುದ್ಧ

author img

By

Published : Mar 7, 2022, 10:56 AM IST

ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿದ್ದ 4,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಜತೆಗೆ ಉಕ್ರೇನ್​ ಹಾಗೂ ರಷ್ಯಾ ಉಭಯ ರಾಷ್ಟ್ರಗಳ ನಡುವೆ ಮೂರನೇ ಹಂತದ ಮಾತುಕತೆಗೂ ಯೋಜಿಸಲಾಗಿದೆ.

war
war

ಕೀವ್​ (ಉಕ್ರೇನ್​): ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಸೋಮವಾರ 12ನೇ ದಿನವೂ ಮುಂದುವರಿದಿದೆ. ಭಾನುವಾರ ಎರಡೂ ಸೇನೆಗಳ 11 ಗಂಟೆಯ ಕದನ ವಿರಾಮ ಘೋಷಿಸಿದ್ದವು. ಈಗ ಮತ್ತೆ ಯುದ್ಧ ಆರಂಭವಾಗಿದೆ.

ಕದನ ವಿರಾಮ ಹಿನ್ನೆಲೆಯಲ್ಲಿ ನಾಗರಿಕರ ರಕ್ಷಣೆ ಮತ್ತು ಸ್ಥಳಾಂತರದಲ್ಲಿ ಉಕ್ರೇನ್​ ತೊಡಗಿತ್ತು. ಆದರೆ, ಇದರ ನಡುವೆಯೂ ರಷ್ಯಾ ಸೇನೆಯು ತನ್ನ ದಾಳಿ ಮುಂದುವರಿಸಿದೆ. ಇದರಿಂದ ಸ್ಥಳಾಂತರ ಕಾರ್ಯಕ್ಕೆ ತೊಂದರೆ ಉಂಟಾಗಿದೆ ಎಂದು ಉಕ್ರೇನ್​ ಅಧಿಕಾರಿಗಳು ದೂರಿದ್ದಾರೆ.

ಉಕ್ರೇನ್‌ನ ದಕ್ಷಿಣ ನಗರಗಳಲ್ಲಿ ನಾಗರಿಕರ ಸ್ಥಳಾಂತರ ಮಾಡಬೇಕಿತ್ತು. ಆದರೆ, ರಷ್ಯಾದ ದಾಳಿ ಕಾರಣ ಎರಡನೇ ಬಾರಿಯೂ ಇದು ವಿಫಲವಾಗಿದೆ. ಅಲ್ಲದೇ, ರಷ್ಯಾ ಸೇನೆಯು ಕಾರಿಡಾರ್​ಗಳನ್ನು ಮುಚ್ಚಿದೆ ಮತ್ತು ಉಕ್ರೇನ್​ನ ಸೇನೆಯ ಹಲವು ವಿಮಾನಗಳನ್ನು ನಾಶಗೊಳಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆ ಇಂದು ಪ್ರಧಾನಿ ಮೋದಿ ಮಾತುಕತೆ

ಇದೇ ವೇಳೆ, ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿದ್ದ 4,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಉಕ್ರೇನ್​ ಹಾಗೂ ರಷ್ಯಾ ಉಭಯ ರಾಷ್ಟ್ರಗಳ ನಡುವೆ ಮೂರನೇ ಹಂತದ ಮಾತುಕತೆಗೂ ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.