ETV Bharat / bharat

ಅಮೆರಿಕ-ಚೀನಾದಿಂದ ಇತರ ರಾಷ್ಟ್ರಗಳಿಗೆ ಸ್ವಾರ್ಥಿ ರೀತಿಯಲ್ಲಿ ಸಹಾಯ.. ನಿಸ್ವಾರ್ಥ ನೆರವು ಭಾರತದ ಸ್ವಭಾವ: ಭಾಗವತ್

author img

By

Published : Sep 30, 2022, 10:22 PM IST

ಕರುಣೆಯು ಭಾರತೀಯ ಸಮಾಜದ ಹೃದಯದಲ್ಲಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

rss-chief-blames-china-us-for-not-helping-nations-facing-crisis
ಅಮೆರಿಕ-ಚೀನಾದಿಂದ ಇತರ ರಾಷ್ಟ್ರಗಳಿಗೆ ಸ್ವಾರ್ಥಿ ರೀತಿಯಲ್ಲಿ ಸಹಾಯ.. ನಿಸ್ವಾರ್ಥ ನೆರವು ಭಾರತದ ಸ್ವಭಾವ

ನಾಗ್ಪುರ (ಮಹಾರಾಷ್ಟ್ರ): ಬಿಕ್ಕಟ್ಟಿನ ಸಮಯದಲ್ಲಿಯೂ ಅಮೆರಿಕ ಮತ್ತು ಚೀನಾದಂತಹ ಸೂಪರ್ ಪವರ್‌ಗಳು ಇತರ ರಾಷ್ಟ್ರಗಳಿಗೆ ಸ್ವಾರ್ಥಿ ರೀತಿಯಲ್ಲಿ ಸಹಾಯ ಮಾಡುತ್ತವೆ. ಆದರೆ, ನಿಸ್ವಾರ್ಥವಾಗಿ ಇತರರಿಗೆ ಸಹಾಯ ಮಾಡುವುದು ಭಾರತದ ಸ್ವಭಾವವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಪುರದಲ್ಲಿ ಶುಕ್ರವಾರ ಭಾರತ ವಿಕಾಸ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ದೇಶಗಳು ವಿಶೇಷವಾಗಿ ಚೀನಾ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿವೆ. ಆದರೆ. ಇತ್ತೀಚೆಗೆ ಬಿಕ್ಕಟ್ಟು ಎದುರಿಸಿದಾಗ, ಆ ಬಿಕ್ಕಟ್ಟಿನಿಂದ ಪಾರು ಮಾಡಲು ಮುಂದಾಗಲಿಲ್ಲ. ಶ್ರೀಲಂಕಾದಲ್ಲಿ ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಕರಾಳ ಸಂದರ್ಭದಲ್ಲಿ ಬಂಡೆಯಂತೆ ನಿಲ್ಲಲು ಹೊರಟ ಏಕೈಕ ದೇಶ ಭಾರತವಾಗಿದೆ ಎಂದರು.

ಅಲ್ಲದೇ, ಭಾರತವು ತನ್ನ ವೈದ್ಯಕೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ರಕ್ಷಿಸಿದ್ದು, ಮಾತ್ರವಲ್ಲದೆ ಇತರ ದೇಶಗಳ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದಿದೆ. ಇದು ಭಾರತದ ಲಕ್ಷಣವಾಗಿದೆ ಎಂದ ಭಾಗವತ್, ಕರುಣೆಯು ಭಾರತೀಯ ಸಮಾಜದ ಹೃದಯದಲ್ಲಿದೆ ಎಂದು ತಿಳಿಸಿದರು.

ಸೂಪರ್ ಪವರ್‌ಗಳು ಆಗಿರುವ ದೇಶಗಳು ವಿಶ್ವದಲ್ಲಿ ಮಾತ್ರ ಪ್ರಾಬಲ್ಯ ಸಾಧಿಸಿವೆ ಮತ್ತು ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸುತ್ತವೆ. ಆದರೆ, ಭಾರತ ಯಾವಾಗಲೂ ಸಂಕಷ್ಟದಲ್ಲಿರುವ ದೇಶಗಳಿಗೆ ಸಹಾಯ ಹಸ್ತವನ್ನು ನೀಡುತ್ತಿದೆ. ಭಾರತವು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತದೆ ಎಂದು ಹೇಳಿದರು.

ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡಲು ಭಾರತ ಯಾವಾಗಲೂ ಮುಂದಾಳತ್ವ ವಹಿಸುತ್ತದೆ. ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಉಕ್ರೇನ್‌ನಂತಹ ಬಿಕ್ಕಟ್ಟಿನ ಪೀಡಿತ ದೇಶಗಳಿಗೆ ಸಹಾಯ ಮಾಡುವಲ್ಲಿ ಭಾರತದ ಪಾತ್ರವು ಒಂದು ಉಜ್ವಲ ಉದಾಹರಣೆಯಾಗಿದೆ. ಇತರ ದೇಶಗಳು ಅಂತಹ ಪ್ರಜ್ಞೆಯನ್ನು ತೋರಿಸಲಿಲ್ಲ ಎಂದೂ ಭಾಗವತ್ ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಯಾದಾದ್ರಿ ದೇವಸ್ಥಾನಕ್ಕೆ ​1 ಕೆಜಿ 16 ತೊಲೆ ಚಿನ್ನ ಅರ್ಪಿಸಿದ ಸಿಎಂ ಕೆಸಿಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.