ETV Bharat / bharat

ಭಾರತದ ಏಕೈಕ ಸಂಚಾರ ಪಕ್ಷಿ ಆಸ್ಪತ್ರೆ.. ಎಲೆಕ್ಟ್ರಿಕ್​ ಬೈಕ್​ ಮೂಲಕ ಸೇವೆ!

author img

By

Published : Aug 10, 2023, 10:12 AM IST

ಭಾರತದ ಏಕೈಕ ಪಕ್ಷಿ ಆಸ್ಪತ್ರೆ ಈಗ ಎಲೆಕ್ಟ್ರಿಕ್​ ಬೈಕ್​ನಲ್ಲಿ ಲಭ್ಯವಾಗಿದೆ. ಪ್ರಿನ್ಸ್ ಮೆಹ್ರಾ ಅವರಿಗೆ ಬ್ಯಾಂಕ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗಿದ್ದು, ಈ ಆಂಬ್ಯುಲೆನ್ಸ್​ ಮೂಲಕ ಅವರು ಪಕ್ಷಿಗಳಿಗೆ ಚಿಕಿತ್ಸೆ ನೀಡಲು ತೆರಳುತ್ತಿದ್ದಾರೆ..

Riding Indias only bird hospital on two wheels  Prince Mehra says its time to chirp loudly  bird hospital on two wheels  ಭಾರತದ ಏಕೈಕ ಸಂಚಾರ ಪಕ್ಷಿ ಆಸ್ಪತ್ರೆ  ಬರ್ಡ್​ ಮ್ಯಾನ್​ ಪ್ರಿನ್ಸ್​ ಮೆಹ್ರಾ  ಭಾರತದ ಏಕೈಕ ಪಕ್ಷಿ ಆಸ್ಪತ್ರೆ ಈಗ ಎಲೆಕ್ಟ್ರಿಕ್​ ಬೈಕ್​ ಬ್ಯಾಂಕ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್  ಬರ್ಡ್ ಮ್ಯಾನ್ ಅಂತಲೂ ಕರೆಯಲು ಶುರು  ಪ್ರಿನ್ಸ್ ಸೈಕಲ್ ಮೇಲೆ ತೆರಳಿ ಪಕ್ಷಿಗಳಿಗೆ ಚಿಕಿತ್ಸೆ  ಸ್ವಂತ ಹಣದಿಂದ ನಾನು ಪಕ್ಷಿಗಳಿಗಾಗಿ ಔಷಧಿ
ಈಗ ಎಲೆಕ್ಟ್ರಿಕ್​ ಬೈಕ್​ ಮೂಲಕ ಭಾರತದ ಏಕೈಕ ಸಂಚಾರ ಪಕ್ಷಿ ಆಸ್ಪತ್ರೆ

ನವದೆಹಲಿ: ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಇತ್ಯಾದಿಗಳಲ್ಲಿ ಹೆಸರು ಗಳಿಸಿರುವ ಚಂಡೀಗಢ ನಿವಾಸಿ ಪ್ರಿನ್ಸ್ ಮೆಹ್ರಾ ಅವರು ದೇವದೂತನಿಗಿಂತ ಕಡಿಮೆ ಏನಿಲ್ಲ. ಪಂಜಾಬ್ ಮತ್ತು ಹರಿಯಾಣದ ರಾಜ್ಯಪಾಲರು ಮತ್ತು ಚಂಡೀಗಢದ ಆಡಳಿತಗಾರರಿಂದ ಅವರು ರಾಜ್ಯ ಪ್ರಶಸ್ತಿಯನ್ನು ಸಹ ಗೌರವಿಸಿದ್ದಾರೆ. ಕಳೆದ 12 ವರ್ಷಗಳಿಂದ ಸಂಕಷ್ಟದಲ್ಲಿರುವ ಪಕ್ಷಿಗಳನ್ನು ರಕ್ಷಿಸುತ್ತಾ ಬಂದಿದ್ದಾರೆ. ಇದುವರೆಗೆ ಗಾಯಗೊಂಡಿದ್ದ ಒಂದು ಸಾವಿರಕ್ಕೂ ಹೆಚ್ಚು ಪಕ್ಷಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಹೊಸ ಜೀವ ನೀಡಿದ್ದಾರೆ. ಇವರ ಕಾರ್ಯವನ್ನು ಮೆಚ್ಚಿದ ಜನರು ಈಗ ಅವರನ್ನು ಬರ್ಡ್ ಮ್ಯಾನ್ ಅಂತಲೂ ಕರೆಯಲು ಶುರು ಮಾಡಿದ್ದಾರೆ.

ಪ್ರಿನ್ಸ್​ ಮೆಹ್ರಾ ಅವರ ಜೀವನದಲ್ಲಿ ಒಂದು ಘಟನೆ ಸಂಭವಿಸಿತ್ತು. ಆ ಘಟನೆಯೇ ಆತನನ್ನು ಬರ್ಡ್‌ಮ್ಯಾನ್ ಆಗಿ ಮಾಡಿದೆ. 2011 ರಲ್ಲಿ ಅವರು ಪಂಜಾಬ್​ನ ಫಿರೋಜ್‌ಪುರದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎರಡು ಪಾರಿವಾಳಗಳು ಕಸದ ತೊಟ್ಟಿಯಲ್ಲಿ ಸತ್ತು ಬಿದ್ದಿರುವುದನ್ನು ಕಂಡರು. ಆಗ ಸತ್ತು ಬಿದ್ದ ಪಾರಿವಾಳಗಳನ್ನು ನೋಡಿ ಅವರಿಗೆ ತುಂಬಾ ಬೇಸರವಾಯಿತು. ಬಳಿಕ ಆ ಪಾರಿವಾಳಗಳನ್ನು ಕಸದ ತೊಟ್ಟಿಯಿಂದ ಹೊರತೆಗೆದು ಮಣ್ಣು ಮಾಡಿದರು. ಈ ಘಟನೆಯಿಂದ ಪ್ರಭಾವಿತರಾದ ಪ್ರಿನ್ಸ್​ ಮೆಹ್ರಾ ಅವರು ತಮ್ಮ ಸೈಕಲ್​ ಅನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದರು. ಈ ಸೈಕಲ್​ ಮೂಲಕ ಅವರು ಪಕ್ಷಿಗಳಿಗೆ ಚಿಕಿತ್ಸೆ ನೀಡಲು ತೆರಳುತ್ತಿದ್ದರು. ಪಕ್ಷಿಗಳ ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಔಷಧಗಳು ಮತ್ತು ಅಗತ್ಯ ವಸ್ತುಗಳನ್ನು ಅವರು ತಮ್ಮ ಸೈಕಲ್​ನಲ್ಲಿ ಇಟ್ಟಿದ್ದಾರೆ.

ಈ ಹಿಂದೆ ಪ್ರಿನ್ಸ್ ಸೈಕಲ್ ಮೇಲೆ ತೆರಳಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಪಕ್ಷಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ, ಮೆಹ್ರಾ ಅವರು ಸತ್ತ ಪಕ್ಷಿಗಳ ಸಮಾಧಿಯನ್ನು ಸಹ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 1,200 ಕ್ಕೂ ಹೆಚ್ಚು ಸತ್ತ ಪಕ್ಷಿಗಳನ್ನು ಮಣ್ಣು ಮಾಡಿದ್ದಾರೆ. ಈಗ ಪ್ರಿನ್ಸ್ ಮೆಹ್ರಾ ಅವರಿಗೆ ಬ್ಯಾಂಕ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗಿದೆ. ಪ್ರಿನ್ಸ್​ ಮೆಹ್ರಾ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಪಕ್ಷಿಗಳ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಇದರಿಂದ ತನಗೆ ತುಂಬಾ ಸಮಾಧಾನವಾಗಿದೆ ಎನ್ನುತ್ತಾರೆ ಪ್ರಿನ್ಸ್. ಪಕ್ಷಿಗಳ ಸಮಾಧಿಗೆ ಕಾರಣವನ್ನು ವಿವರಿಸಿದ ಅವರು, ಈ ರೀತಿ ಪಕ್ಷಿಗಳನ್ನು ನಾವು ಅಂತ್ಯಕ್ರಿಯೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಮಾಡುತ್ತದೆ. ಆ ಪಕ್ಷಿಗಳ ಮೃತದೇಹಗಳು ಬಯಲಿನಲ್ಲಿ ಕೊಳೆತರೆ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಪ್ರಿನ್ಸ್​ ಮೆಹ್ರಾ.

ಫಿಟ್​ ಅಂಡ್​ ಫೈನ್​ ಮಾಡಿ ಬಿಡ್ತೇನಿ: ಇತ್ತೀಚೆಗಷ್ಟೇ ನಾನು EV ಅನ್ನು ಬಳಸಲು ಪ್ರಾರಂಭಿಸಿದ್ದೇನೆ. ನನ್ನ ಸ್ವಂತ ಹಣದಿಂದ ನಾನು ಪಕ್ಷಿಗಳಿಗಾಗಿ ಔಷಧಗಳನ್ನು ಖರೀದಿಸಲು ಮತ್ತು ಆಹಾರವನ್ನು ಸಂಗ್ರಹಿಸುತ್ತೇನೆ. ಪ್ರಿನ್ಸ್​ ಮೆಹ್ರಾ ಅವರು ಅಂತರ್ಜಾಲದಲ್ಲಿ ಸಂಶೋಧನೆ ಮಾಡಿ ಆಯಾ ಪಕ್ಷಿಗಳಿಗೆ ಬೇಕಾದ ಆಹಾರವನ್ನು ಒದಗಿಸುತ್ತಾರೆ. ಕೆಲ ಪಕ್ಷಿಗಳು ಚಿಕಿತ್ಸೆ ಬಳಿಕ ನನ್ನೊಂದಿಗೆ ತಿಂಗಳುಗಟ್ಟಲೆ ಇರುತ್ತವೆ. ಅವುಗಳು ಫಿಟ್ ಆದ ನಂತರ ನಾನು ಪಕ್ಷಿಗಳನ್ನು ಬಿಡುಗಡೆ ಮಾಡುತ್ತೇನೆ. ಹೀಗೆ ಹಾರಿ ಬಿಟ್ಟ ಪಕ್ಷಿಗಳು ನಂತರ ನನ್ನ ಬಳಿಗೆ ಬಂದಿವೆ ಎಂದು ಮೆಹ್ರಾ ಹೇಳಿದರು.

ಇತ್ತೀಚೆಗೆ ನಾನು ಒಂದು ಗಿಳಿಗೆ ಚಿಕಿತ್ಸೆ ನೀಡಿದ್ದೆ. ಆ ಗಿಳಿಯು ಹಲವಾರು ದಿನಗಳ ನಂತರ ರಾತ್ರಿ ವೇಳೆ ಹಿಂತಿರುಗಿತು. ಆ ಗಿಳಿ ಪ್ರವೇಶ ದ್ವಾರದ ಬಾಗಿಲಿನ ಹೊರಗೆ ಜೋರಾಗಿ ಶಬ್ದ ಮಾಡುತ್ತಿತ್ತು. ಅದನ್ನು ಒಳಗೆ ಬಿಡದೇ ನಮಗೆ ಬೇರೆ ದಾರಿ ಇರಲಿಲ್ಲ ಎಂದರು. ಒಂದು ದಿನ ಪಾರಿವಾಳ ತನ್ನ ಸಂಗಾತಿಯನ್ನು ಬಿಟ್ಟು ಹಾರಿಹೋಯಿತು. ಕೆಲ ದಿನಗಳ ನಂತರ ಆ ಪಾರಿವಾಳ ಮತ್ತೆ ಹಿಂತಿರುಗಿತು. ಆಗ ಗಂಟೆಗಳವರೆಗೆ ತನ್ನ ಸಂಗಾತಿಯಿಂದ ಬೇರ್ಪಡಿಸಲು ನಮ್ಮಿಂದ ಆಗಲಿಲ್ಲ ಎಂದು ನಗುತ್ತಾ ಹೇಳಿದರು.

ಜನ ಈಗ ತಮ್ಮ ಬಾಲ್ಕನಿಗಳಲ್ಲಿ ಪಕ್ಷಿಗಳಿಗೆ ನೀರನ್ನು ಇಡಲು ಪ್ರಾರಂಭಿಸಿದ್ದಾರೆ. ನಾಗರಿಕರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಗಾಯಗೊಂಡ ಪಕ್ಷಿಯನ್ನು ನೋಡಿದಾಗ ಅನೇಕರು ನನಗೆ ಕರೆ ಮಾಡುತ್ತಾರೆ. ಕೆಲವರು ನಾನು ಪಕ್ಷಿಗಳಿಗೆ ಚಿಕಿತ್ಸೆ ನೀಡಿದ್ದನ್ನು ಗಮನಿಸಿ ಹಣವನ್ನು ಕೊಡುಗೆಯಾಗಿ ನೀಡಲು ಮುಂದಾಗುತ್ತಾರೆ. ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತೇನೆ. ಅಷ್ಟೇ ಅಲ್ಲ ಬ್ಯಾಂಕ್​ವೊಂದು ನನಗೆ ನಾಲ್ಕು ಚಕ್ರದ ಆಂಬ್ಯುಲೆನ್ಸ್ ನೀಡಿತ್ತು. ಆ ವಾಹನವನ್ನೂ ಸಹ ನಾನು ನಿರಾಕರಿಸಿದ್ದೇನೆ ಎಂದು ಖಾಯಂ ಬ್ಯಾಂಕ್ ಉದ್ಯೋಗವನ್ನು ನಿರಾಕರಿಸಿದ್ದ ಪಿನ್ಸ್​ ಮೆಹ್ರಾ ಹೇಳುತ್ತಾರೆ.

ಒಂದು ದಶಕದ ಹಿಂದೆ ಇದ್ದ ಅನೇಕ ಪಕ್ಷಿಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮಾಲಿನ್ಯ ಮತ್ತು ಆಹಾರದ ಕೊರತೆಯ ಕಾರಣದಿಂದ ಅವುಗಳು ನಶಿಸಿ ಹೋಗಿರಬಹುದು. ಅಧಿಕಾರಿಗಳು ಶಾಲಾ ಮಕ್ಕಳಿಗೆ ಅವುಗಳ ಬಗ್ಗೆ ಹೆಚ್ಚು ಕಲಿಸುವ ಅಭಿಯಾನವನ್ನು ಪ್ರಾರಂಭಿಸಬೇಕು. ಪಕ್ಷಿಗಳಿಗೆ ನೀರು ಮತ್ತು ಆಹಾರದ ಪ್ರಾಮುಖ್ಯತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಮಾಜಿ ಚಿತ್ರಕಲಾ ಶಿಕ್ಷಕ ಪ್ರಿನ್ಸ್​ ಮೆಹ್ರಾ ಹೇಳಿದ್ದಾರೆ.

ಓದಿ: ವಿನಾಶದಂಚಿಗೆ ಬಹಾಮಾ ವಾರ್ಬ್ಲರ್ ಅಪರೂಪದ ಪಕ್ಷಿ ಪ್ರಭೇದ: ಸಮೀಕ್ಷೆಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.